ಮಹಿಳೆಯ ಕಿವಿ ಒಳಗಿಂದ ಹೊರಬಂದ ಏಡಿ ಮರಿ... ವಿಡಿಯೋ ನೋಡಿ

By Anusha KbFirst Published Apr 1, 2022, 12:39 AM IST
Highlights
  • ನೀರಲ್ಲಿರಬೇಕಾದ ಏಡಿ ಕಿವಿ ಸೇರಿದರೆ ಏನಾಗ್ಬೇಡ..
  • ಮಹಿಳೆಯ ಕಿವಿಯೊಳಗಿದ್ದ ಏಡಿ ಮರಿ
  • ಇಕ್ಕಳ ಹಾಕಿ ಕಿವಿಯಿಂದ ಏಡಿ ಹೊರ ತೆಗೆದ ಯುವಕ
     

ಏಡಿಯೊಂದು ಮಹಿಳೆಯ ಕಿವಿಯೊಳಗಿಂದ ಹೊರ ಬರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ನಾರ್ಕ್ಲಿಂಗ್ ಮಾಡುವಾಗ ಮಹಿಳೆಯ ಕಿವಿಯೊಳಗೆ ಏಡಿ ಸಿಲುಕಿಕೊಂಡಿತ್ತು. (ಸ್ನೊರ್ಕೆಲ್ ಎಂದರೆ ನೀರಿನ ಅಳದಲ್ಲಿ ಈಜುವಾಗ ಉಸಿರಾಡಲು ಮೂಗಿಗೆ ಹಾಕಿಕೊಳ್ಳುವ ಸಾಧನವಾಗಿದ್ದು, ಈ ಸ್ನೊರ್ಕೆಲ್ ಬಳಸಿ ಈಜುವುದನ್ನು ಅಥವಾ ನೀರಿನಲ್ಲಿ ಮಾಡುವ ಚಟುವಟಿಕೆಯನ್ನು ಸ್ನಾರ್ಕ್ಲಿಂಗ್ ಎಂದು ಕರೆಯಲಾಗುತ್ತದೆ.) ಇದನ್ನು ಯುವಕನೋರ್ವ ಮಹಿಳೆಯ ಕಿವಿಯಿಂದ ಇಕ್ಕಳ ಹಾಕಿ ತೆಗೆಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮಹಿಳೆಯ ಕಿವಿಯಲ್ಲಿ ಜೀವಂತ ಏಡಿ(Crab) ಸಿಲುಕಿಕೊಂಡಿದ್ದನ್ನು ನೋಡಿದ ನೆಟ್ಟಿಗರು ಗಾಬರಿಯಾಗಿದ್ದಾರೆ. ಪೋರ್ಟೊ ರಿಕೊದ (Puerto Rico) ಸ್ಯಾನ್ ಜುವಾನ್‌ನಲ್ಲಿ (San Juan) ಸ್ನಾರ್ಕ್ಲಿಂಗ್ ಮಾಡುತ್ತಿದ್ದ ಮಹಿಳೆಯ ಕಿವಿಗೆ ಸಣ್ಣ ಏಡಿಯೊಂದು ಪ್ರವೇಶಿಸಿದ್ದು ಮಹಿಳೆ ಗಾಬರಿಗೊಂಡಿದ್ದಾಳೆ.  @wesdaisy ಎಂಬ ಟಿಕ್‌ಟಾಕ್‌ ಖಾತೆ ಹೊಂದಿರುವವರೊಬ್ಬರು ಈ ವಿಡಿಯೋವನ್ನು ಟಿಕ್‌ಟಾಕ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊ ಈಗ ಯೂಟ್ಯೂಬ್‌ನಲ್ಲೂ ಲಭ್ಯವಿದೆ.

ಅಂಕೋಲಾದ ಕಲ್ಲುಜೆಂಜಿ ಏಡಿಗೆ ವಿದೇಶದಲ್ಲಿ ಭಾರೀ ಡಿಮ್ಯಾಂಡ್‌..!

ವಿಡಿಯೋದಲ್ಲಿ ಕಾಣಿಸುವಂತೆ ವ್ಯಕ್ತಿಯೊಬ್ಬ ಮಹಿಳೆಯ ಕಿವಿಯ ಬಳಿ ಇಕ್ಕಳ ಹಿಡಿದುಕೊಂಡು ಕಿವಿಯೊಳಗಿಂದ ಏನೋ ತೆಗೆಯುತ್ತಿರುವಂತೆ ಕಾಣಿಸುತ್ತಿದೆ. ಈ ವೇಳೆ ಮಹಿಳೆ ಕಿವಿಯೊಳಗೆ ಏನೋ ಹರಿದಾಡುವಂತೆ ಭಾಸವಾಗಿದ್ದನ್ನು ನೋಡಿ ಮತ್ತಷ್ಟು ಗಾಬರಿಯಾಗಿದ್ದಾಳೆ. ಆಗ ವ್ಯಕ್ತಿಯೊಬ್ಬ ಆತಂಕಪಡದಂತೆ ಆಕೆಗೆ ಹೇಳುತ್ತಿದ್ದಾನೆ. ನಂತರ ಆತ  ಅವಳನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದಾನೆ ಮತ್ತು ಅದು ಅವಳಿಗೆ ನೋಯಿಸಬಹುದೆಂದು ಹೇಳುತ್ತಾನೆ. ನಂತರ ಅವನು ಕಿವಿ ಕಾಲುವೆಯೊಳಗಿರುವುದನ್ನು ಹೊರತೆಗೆಯುತ್ತಾನೆ. ಅದನ್ನು ನೋಡಿದ ಎಲ್ಲರೂ ಗಾಬರಿಯಾಗಿದ್ದಾರೆ.  ನಾವು ಒಂದು ಸಣ್ಣ ಏಡಿ ಹೊರಬರುವುದನ್ನು ನೋಡಬಹುದು. ಏಡಿ ಹೊರ ಬರುತ್ತಿದ್ದಂತೆ  ಮಹಿಳೆ ಭಯಭೀತಳಾಗಿ ಅದೇನು ಎಂದು ಪ್ರಶ್ನಿಸುತ್ತಾಳೆ.

ಪೋಲಿ ಏಡಿಯೊಂದು ಧಮ್ ಹೊಡಿಯೋದನ್ನು ನೋಡಿದ್ದೀರಾ?

ಈ ವಿಡಿಯೋ ವೈರಲ್ (Viral Video) ಆಗಿದ್ದು, ಆಕೆಯ ಕಿವಿಯಿಂದ ಏಡಿ ಹೊರಬರುವುದನ್ನು ಕಂಡು ಜನರು ಮಾತ್ರ ಭಯಭೀತರಾಗಿದ್ದಾರೆ ಮತ್ತು ಅಸಹ್ಯಪಟ್ಟಿದ್ದಾರೆ. ಇದು ಭಯಾನಕ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಆದರೆ ಇದಾದ ಮರುದಿನ ಮಹಿಳೆ ಬೇರೇನೂ ತೊಂದರೆಗಳಿಲ್ಲದೇ ಹಾಯಾಗಿದ್ದಳು. ಮತ್ತು ತನ್ನ ಜಲಕ್ರೀಡೆ ಚಟುವಟಿಕೆಯನ್ನು ಮುಂದುವರೆಸಿದಳು ಎಂದು ತಿಳಿದು ಬಂದಿದೆ.

ಲಾಬ್‌ಸ್ಟರ್ (Lobster) ಅಥವಾ ಕಡಲ ಏಡಿ ಇಂದು ಸುಲಭವಾಗಿ ದೊರೆಯದ, ದುಬಾರಿ ಆಹಾರ. ಫೈವ್‌ಸ್ಟಾರ್ (Fivestar) ಹೋಟೆಲ್‌ಗಳಲ್ಲಿ ಮೊದಲೇ ಆರ್ಡರ್ ಮಾಡಿದರೆ ದೊರೆಯಲೂಬಹುದು. ಭಾರತದಲ್ಲಿ ಮಧ್ಯಮ ವರ್ಗದಲ್ಲಿ ಈ ಆಹಾರದ ಬಳಕೆ ಕಡಿಮೆಯಾದರೂ, ಶ್ರೀಮಂತರ ಹೈಫೈ ಊಟದ ಮೆನುವಿನ ಜೊತೆಗೆ ಇದು ಜೋಡಿಸಿ ಕೊಂಡಿರುತ್ತದೆ. ಕಡಲ ಏಡಿ ಚಿಪ್ಪಿನ ಜೀವಿ. ಒಳಗೆ ಮೂಳೆ ರಕ್ತ ಏನೂ ಇರುವುದಿಲ್ಲ. ಬದಲಿಗೆ ಇದರ ಮಾಂಸ ನಾರು ನಾರಾಗಿರುತ್ತದೆ. ಈ ಚಿಪ್ಪುಗಳು ಕೊಂಚ ಗಟ್ಟಿಯಾಗಿದ್ದು ಬರಿಗೈಯಲ್ಲಿ ಒಡೆಯುವುದು ಕಷ್ಟ ಹಾಗೂ ಸಾಕಷ್ಟು ಹರಿತವಾಗಿರುವ ಕಾರಣ ಗಾಯವೂ ಆಗಬಹುದು, ಇವನ್ನು ಏನಿದ್ದರೂ ಉಪಕರಣಗಳನ್ನು ಉಪಯೋಗಿಸಿಯೇ ಒಡೆಯಬೇಕು. ಇವುಗಳನ್ನು ಒಡೆಯಲೆಂದೇ ಲಾಬ್‌ಸ್ಟರ್ ಫೋರ್ಕ್ಸ್ ಎಂಬ ಮುಳ್ಳು ಚಮಚ ಲಭ್ಯವಿದೆ. ಇವನ್ನು ಚೆನ್ನಾಗಿ ತೊಳೆದು ಚಿಪ್ಪಿನ ಸಹಿತವೇ ಅಡುಗೆ ಮಾಡಲಾಗುತ್ತದೆ. ತಿನ್ನುವಾಗ ಈ ಮುಳ್ಳುಚಮಚಗಳಿಂದ ಚಿಪ್ಪಿನ ಒಳಗಿರುವ ಮಾಂಸವನ್ನು ಹೊರತೆಗೆದು ತಿನ್ನಲಾಗುತ್ತದೆ.

ಇವನ್ನು ಬರಿಯ ನೀರಿನಲ್ಲಿ ಬೇಯಿಸಿದರೂ ಸಾಕು, ಹಾಗೇ ತಿನ್ನಬಹುದು. ಬೆಣ್ಣೆ, ನಿಂಬೆರಸ ಹಾಕಿಯೂ ತಿನ್ನಬಹುದು. ಸೂಪ್ (Soup) ಮಾಡಿ ಅಥವಾ ಸಾರು ಮಾಡಿಕೊಂಡೂ ತಿನ್ನಬಹುದು. ಭಾರತೀಯ ಅಡುಗೆಗಳಂತೆ ಮಸಾಲೆ ಸೇರಿಸಿಯೂ ಸವಿಯಬಹುದು. ಕೆಲವೆಡೆ ಗ್ರಿಲ್ ಮಾಡಿಯೂ ಕೊಡಲಾಗುತ್ತದೆ. ಇವುಗಳ ಮಾಂಸ ಅತಿ ಮೃದುವಾಗಿರುವ ಕಾರಣ ಅಲ್ಪ ಸಮಯದಲ್ಲಿಯೇ ಬೇಯುತ್ತದೆ. ಒಟ್ಟಾರೆ ಖಾದ್ಯ ತಯಾರಿಸಲು ಹತ್ತು ನಿಮಿಷ ಸಾಕು. ಸಾಮಾನ್ಯವಾಗಿ ಇವುಗಳನ್ನು ಇಡಿಯಾಗಿಯೇ ಬೇಯಿಸಿ ತಿನ್ನುವಾಗ ಕತ್ತರಿಸಲಾಗುತ್ತದೆ. ಆಯ್ಕೆಗೆ ತಕ್ಕಂತೆ ಇವುಗಳ ಇಕ್ಕಳ ಮತ್ತು ಬಾಲವನ್ನು ಪ್ರತ್ಯೇಕವಾಗಿಯೇ ಬೇಯಿಸಿ ತಯಾರಿಸಬಹುದು.

click me!