
ಸಿಂಗಾಪುರ(ಜ.27): ಕೊರೋನಾ ವೈರಸ್ ಕೊನೆಗೊಳ್ಳಲು ಇನ್ನೂ 4ರಿಂದ 5 ವರ್ಷಗಳು ಬೇಕಾಗಬಹುದು. ಆದರೆ, ಕೊರೋನಾ ಬಳಿಕದ ಜೀವನ ಹೇಗಿರಲಿದೆ ಎಂಬ ಕುರಿತಾದ ಅನಿಶ್ಚಿತತೆ ಹಾಗೆಯೇ ಇದೆ ಎಂದು ಸಿಂಗಾಪುರ ಶಿಕ್ಷಣ ಸಚಿವ ಲಾವರೆನ್ಸ್ ವೊಂಗ್ ಎಚ್ಚರಿಕೆ ನೀಡಿದ್ದಾರೆ.
2021ರ ದೃಷ್ಟಿಕೋನಗಳ ಬಗ್ಗೆ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ವೊಂಗ್, ಇನ್ನೂ ಕೆಲವು ಸಮಯಗಳ ಕಾಲ ಕೊರೋನಾ ವೈರಸ್ ನಮ್ಮನ್ನು ಬಾಧಿಸಲಿದೆ. ನಾವು ಕೊರೋನಾ ಅಂತ್ಯವಾಗುವುದನ್ನು ನೋಡಲು ಇನ್ನೂ 4ರಿಂದ 5 ವರ್ಷಗಳು ಬೇಕಾಗಬಹುದು. ಆ ಬಳಿಕ ಜನಜೀವನ ಸಹಜ ಸ್ಥಿತಿಗೆ ಮರಳಿದೆ.
ಆದರೆ, ಕೊರೋನೋತ್ತರದ ಭವಿಷ್ಯ ಹೇಗಿಲಿದೆ ಎಂಬುದನ್ನು ಯಾರಿಂದಲೂ ಊಹಿಸಲಾಗದು. ಕೊರೋನಾ ಕುರಿತಾದ ಅನಿಶ್ಚಿತತೆ ಇನ್ನೂ ಮುಂದುವರಿದಿದೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ