ಕೊರೋನಾ ಅಟ್ಟಹಾಸ : ಬಾಂಗ್ಲಾದಲ್ಲಿ1 ವಾರ ಲಾಕ್ಡೌನ್‌

By Kannadaprabha NewsFirst Published Apr 4, 2021, 7:37 AM IST
Highlights

ಕೊರೋನಾ ಅಟ್ಟಹಾಸ ಮಿತಿ ಮೀರಿದ ಹಿನ್ನೆಲೆಯಲ್ಲಿ ಮತ್ತೊಮ್ಮೆ ನಿಯಂತ್ರಣ ಉದ್ದೇಶದಿಂದ ಲಾಕ್‌ಡೌನ್ ಮಾಡಲಾಗುತ್ತಿದೆ. 

ಢಾಕಾ (ಏ.04): ಕೊರೋನಾ ಸೋಂಕು ಮತ್ತು ಸಾವಿನ ಪ್ರಮಾಣ ಆತಂಕಕಾರಿಯಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ಒಂದು ವಾರಗಳ ಕಾಲ ಲಾಕ್‌ಡೌನ್‌ ಹೇರಲು ಬಾಂಗ್ಲಾದೇಶ ಸರ್ಕಾರ ನಿರ್ಧರಿಸಿದೆ.

 ಈ ಬಗ್ಗೆ ಬಾಂಗ್ಲಾ ರಸ್ತೆ ಸಾರಿಗೆ ಸಚಿವ ಒಬೈದುಲ್‌ ಖ್ವಾದರ್‌ ಶನಿವಾರ ಘೋಷಣೆ ಮಾಡಿದ್ದಾರೆ. ಲಾಕ್‌ಡೌನ್‌ ವೇಳೆ ಎಲ್ಲಾ ಕಚೇರಿ ಮತ್ತು ಕೋರ್ಟ್‌ ಸೇವೆ ರದ್ದಾಗಲಿದೆ.

ಕೊರೋನಾ ಕಾಟ: ಬೆಂಗ್ಳೂರಲ್ಲಿ ಸತತ 2ನೇ ದಿನವೂ 3000+ ಕೇಸ್‌..! ...

 ಆದರೆ ಕಾರ್ಖಾನೆಗಳ ಕಾರ್ಮಿಕರು ಪಾಳಿಯಲ್ಲಿ ಕೆಲಸ ಮಾಡಲಿದ್ದಾರೆ, ತುರ್ತು ಸೇವೆಗಳು ಚಾಲ್ತಿಯಲ್ಲಿರಲಿವೆ. ಬಾಂಗ್ಲಾದಲ್ಲಿ ಶುಕ್ರವಾರ ಒಂದೇ ದಿನ ಸಾರ್ವಕಾಲಿಕ ದಾಖಲೆಯ 6,830 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 6.24 ಲಕ್ಷಕ್ಕೆ ಏರಿಕೆಯಾಗಿದೆ. ಇದೇ ವೇಳೆ ಈವರೆಗೆ 9155 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

click me!