
ಜಿನೆವಾ(ಅ.06): ವಿಶ್ವದ 210ಕ್ಕೂ ಹೆಚ್ಚು ದೇಶಗಳನ್ನು ಭೀಕರವಾಗಿ ಆವರಿಸಿಕೊಂಡಿರುವ ಕೊರೋನಾ ಸೋಂಕು ಇದುವರೆಗೆ ವಿಶ್ವದ ಒಟ್ಟು ಜನಸಂಖ್ಯೆಯ ಶೇ.10ರಷ್ಟುಜನರಿಗೆ ಅಂದರೆ ಪ್ರತಿ 10 ಜನರಲ್ಲಿ ಒಬ್ಬರಿಗೆ ಅಂಟಿರಬಹುದು ಎಂದು ಸ್ವತಃ ವಿಶ್ವ ಆರೋಗ್ಯ ಸಂಸ್ಥೆಯೇ (ಡಬ್ಲ್ಯುಎಚ್‌ಒ) ಅಂದಾಜಿಸಿದೆ. ಅಲ್ಲದೆ ಮುಂದೆ ಕಷ್ಟಕರ ದಿನಗಳಿವೆ ಎಂದು ಎಚ್ಚರಿಸಿದೆ. ಡಬ್ಲು ್ಯಎಚ್‌ಒದ ಈ ಅಂದಾಜು, ಇದುವರೆಗೆ ಖಚಿತಪಟ್ಟಿರುವ ಒಟ್ಟು ಸೋಂಕಿತರ ಸಂಖ್ಯೆ (3.5 ಕೋಟಿ)ಗಿಂತ 20 ಪಟ್ಟು ಹೆಚ್ಚು ಎಂಬುದು ಗಮನಾರ್ಹ.
ಸೋಮವಾರ ನಡೆದ 34 ಸದಸ್ಯರ ಡಬ್ಲು ್ಯಎಚ್‌ಒದ ಕಾರ್ಯಕಾರಿ ಮಂಡಳಿಗೆ ಈ ಮಾಹಿತಿ ನೀಡಿದ ಡಬ್ಲು ್ಯಎಚ್‌ಒದ ತುರ್ತು ವಿಭಾಗದ ಮುಖ್ಯಸ್ಥ ಡಾ.ಮೈಕೆಲ್ ರಾರಯನ್ ಮತ್ತು ಡಬ್ಲು ್ಯಎಚ್‌ಒದ ನಿರ್ದೇಶಕ ಟೆಡ್ರೋಸ್ ಅಧೋನಾಮ್ ಘಬ್ರೆಯೇಸಸ್, ‘ಏಷ್ಯಾದಲ್ಲಿ ಕೇಸುಗಳ ಸಂಖ್ಯೆ ಹೆಚ್ಚುತ್ತಿದೆ. ಯುರೋಪ್ ಮತ್ತು ಪೂರ್ವ ಮೆಡಿಟರೇನಿಯನ್ ಪ್ರದೇಶಗಳಲ್ಲಿ ಸಾವು ಹೆಚ್ಚುತ್ತಿದೆ. ಆಫ್ರಿಕಾ ಮತ್ತು ಪಶ್ಚಿಮ ಪೆಸಿಫಿಕ್ ವಲಯದಲ್ಲಿ ಹೆಚ್ಚು ಧನಾತ್ಮಕ ಬೆಳವಣಿಗೆ ಕಂಡುಬಂದಿದೆ. ಅಂಕಿ-ಸಂಖ್ಯೆಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬೇರೆ ಬೇರೆ ರೀತಿ ಇವೆ. ಅದೇ ರೀತಿ ಬೇರೆ ಬೇರೆ ಪಂಗಡಗಳಲ್ಲಿ ವಿಭಿನ್ನವಾಗಿದೆ. ಒಟ್ಟಾರೆ ಹೇಳುವುದಾದರೆ ವಿಶ್ವದ ಬಹುಪಾಲು ಜನಸಂಖ್ಯೆ ಸೋಂಕಿಗೆ ತುತ್ತಾಗುವ ಭೀತಿ ಎದುರಿಸುತ್ತಿದೆ. ಸದ್ಯದ ನಮ್ಮ ಅಂದಾಜಿನ ಪ್ರಕಾರ ಶೇ.10ರಲ್ಲಿ ಒಬ್ಬರಿಗೆ ಕೊರೋನಾ ಸೋಂಕು ತಗುಲಿರಬಹುದು’ ಎಂದು ಹೇಳಿದ್ದಾರೆ.
ಅಂದರೆ ವಿಶ್ವದ ಪ್ರಸಕ್ತ ಜನಸಂಖ್ಯೆ 760 ಕೋಟಿ ಎಂದಾದಲ್ಲಿ 76 ಕೋಟಿ ಜನರಿಗೆ ಸೋಂಕು ತಗುಲಿದೆ ಎಂದರ್ಥ ಎಂದು ವಿಶ್ಲೇಷಿಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ