ಕೊರೋನಾ ವೈರಸ್‌ ಸೋರಿಕೆ ಅಗಿದ್ದು ವುಹಾನ್‌ ಲ್ಯಾಬಿಂದ!

By Suvarna NewsFirst Published Aug 3, 2021, 9:30 AM IST
Highlights

* ಮಾನವರಿಗೆ ಹಬ್ಬುವಂತೆ ವೈರಸ್‌ ಮಾರ್ಪಾಡು

* ಕೊರೋನಾ ವೈರಸ್‌ ಸೋರಿಕೆ ಅಗಿದ್ದು ವುಹಾನ್‌ ಲ್ಯಾಬಿಂದ

* ಅಮೆರಿಕ, ಚೀನಾ ಹಣ ಬಳಸಿಯೇ ಸಂಶೋಧನೆ

ವಾಷಿಂಗ್ಟನ್‌(ಆ.03): ಕೊರೋನಾ ವೈರಸ್‌ ಇಡೀ ಜಗತ್ತಿಗೆ ಹಬ್ಬಿದ್ದೇ ಚೀನಾದ ವುಹಾನ್‌ನಲ್ಲಿರುವ ವೈರಾಣು ಪ್ರಯೋಗಾಲಯದಿಂದ ಎಂದು ಅಮೆರಿಕದ ರಿಪಬ್ಲಿಕನ್‌ ಪಕ್ಷದ ಸಂಸದರೊಬ್ಬರು ಬಿಡುಗಡೆ ಮಾಡಿರುವ ವರದಿಯಲ್ಲಿ ಆರೋಪಿಸಲಾಗಿದೆ. ಜೊತೆಗೆ ಇಂಥದ್ದೊಂದು ಆರೋಪವನ್ನು ಸಾಬೀತುಪಡಿಸಲು ಸಾಕಷ್ಟುಸಾಕ್ಷ್ಯಗಳೂ ಇವೆ ಎಂದು ವರದಿಯಲ್ಲಿ ಹೇಳಲಾಗಿದೆ.

ರಿಪಬ್ಲಿಕನ್‌ ಪಕ್ಷದಲ್ಲಿನ ವಿದೇಶಾಂಗ ವ್ಯವಹಾರ ಕುರಿತಾದ ಸಮಿತಿಯ ಸದಸ್ಯ ಮೈಕ್‌ ಮ್ಯಾಕ್‌ಕೌಲ್‌ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ವುಹಾನ್‌ನ ಪ್ರಯೋಗಾಲಯದಲ್ಲಿ ಕೊರೋನಾ ವೈರಾಣುವನ್ನು ಮಾನವರಿಗೆ ಹಬ್ಬುವ ರೀತಿಯಲ್ಲಿ ಮಾರ್ಪಾಡು ಮಾಡುವ ಪ್ರಯೋಗಗಳನ್ನು ಕೈಗೊಳ್ಳಲಾಗಿತ್ತು. ಇಂಥದ್ದೊಂದು ಪ್ರಯೋಗಕ್ಕೆ ಅಮೆರಿಕ ಮತ್ತು ಚೀನಾ ಸರ್ಕಾರದ ನೆರವಿನ ಹಣವನ್ನೇ ಬಳಸಿಕೊಳ್ಳಲಾಗಿತ್ತು. ವೈರಸ್‌ ಅಲ್ಲಿಂದಲೇ ಸೋರಿಕೆಯಾಗಿ ಇಡೀ ಜಗತ್ತಿಗೆ ಹರಡಿ 44 ಲಕ್ಷ ಜನರನ್ನು ಬಲಿ ಪಡೆದುಕೊಂಡಿದೆ. ಹೀಗಾಗಿ ಈ ಕುರಿತು ಇನ್ನಷ್ಟುವಿಸ್ತೃತ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.

ಇಂಥದ್ದೇ ಆರೋಪದ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಈಗಾಗಲೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ತಮ್ಮ ದೇಶದ ಗುಪ್ತಚರ ಸಂಸ್ಥೆಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಇಂಥ ಆರೋಪಗಳನ್ನು ಚೀನಾ ಸರ್ಕಾರ ಹಿಂದಿನಿಂತಲೂ ನಿರಾಕರಿಸಿಕೊಂಡೇ ಬಂದಿದೆ.

click me!