ಅಮೆರಿಕ(ಮಾ.15): ಕೊರೋನಾ ಅಬ್ಬರ ತಣ್ಣಗಾಗಿ ಭಾರತ ಸೇರಿದಂತೆ ವಿಶ್ವವೇ ಚೇತರಿಕೆ ಹಾದಿಯಲ್ಲಿ ಸಾಗುತ್ತಿದೆ. ಇದರ ನಡುವ ಚೀನಾ, ಕೊರಿಯಾ ಸೇರಿದಂತೆ ಕೆಲ ದೇಶಗಳಲ್ಲಿ ಮತ್ತೆ ಕೊರೋನಾ ಸ್ಫೋಟಗೊಂಡಿದೆ ಅನ್ನೋ ವರದಿ ಭಾರತದಲ್ಲೂ ಆತಂಕ ಹೆಚ್ಚಿಸಿದೆ. ಇದೀಗ ಅಮೆರಿಕದ ಕೆಲ ಭಾಗದಲ್ಲಿ ಮತ್ತೆ ಕೊರೋನಾ ಹೆಚ್ಚಳಗೊಂಡಿದೆ. ಬ್ಲೂಮರ್ಗ್‌ನ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (CDC) ನೀಡಿದ ವರದಿಯಲ್ಲಿ ಈ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಅಮೆರಿಕದ ಕೆಲ ಭಾಗದಲ್ಲಿ ಕಳೆದ ಫೆಬ್ರವರಿ 1 ರಿಂದ 10 ವರೆಗೆ ದಾಖಲಾದ ಕೊರೋನಾ ಪ್ರಕರಣಕ್ಕೂ ಇದೀಗ ಮಾರ್ಚ್ 1 ರಿಂದ 10 ವರಗೆ ದಾಖಲಾದ ಕೊರೋನಾ ಪ್ರಕರಣಕ್ಕೂ ವ್ಯತ್ಯಾಸವಿದೆ. ಇಳಿಕೆಯಾಗಬೇಕಿದ್ದ ಕೊರೋನಾ ಪ್ರಕರಣ ಸಂಖ್ಯೆ ಮಾರ್ಚ್ 1 ರಿಂದ 10 ರ ಅವಧಿಯಲ್ಲಿ ಏರಿಕೆಯಾಗಿದೆ. ಸದ್ಯ ಪ್ರಕರಣಗಳ ಸಂಖ್ಯೆ ಕಡಿಮೆ ಇದದ್ದರೂ 10 ದಿನಗಳ ಅಂಕಿ ಅಂಶದಲ್ಲಿ ಗಣನೀಯ ಏರಿಕೆ ಕಂಡಬರುತ್ತಿದೆ ಎಂದು ಅಮೆರಿಕ CDC ಅಧ್ಯಯನ ವರದಿಯಲ್ಲಿ ಹೇಳಿದೆ.
Covid-19 deaths: ಕೋವಿಡ್‌ನಿಂದ ಮೃತಪಟ್ಟ ಎಲ್ಲರಿಗೂ ₹50 ಸಾವಿರ: ಸುಪ್ರೀಂ ಸ್ಪಷ್ಟನೆ
ಕೊರೋನಾ ಹೆಚ್ಚಳವಾಗಿರುವ ಭಾಗದಲ್ಲಿನ ಚರಂಡಿ ನೀರುಗಳನ್ನು ಪರಿಶೀಲಿಸಲಾಗಿದೆ. ಈ ನೀರಿನಲ್ಲೂ ಕೊರೋನಾ ವೈರಸ್ ಕಾಣಿಸಿಕೊಂಡಿದೆ. ಸದ್ಯ ಅಮೆರಿಕದಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್ ಅತೀ ವೇಗದಲ್ಲಿ ಹರಡುತ್ತಿಲ್ಲ. ಆದರೆ ಪ್ರತಿ ದಿನ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಎಂದು CDC ವರದಿಯಲ್ಲಿ ಹೇಳಿದೆ.
ಅಮೆರಿಕದಲ್ಲಿನ ಹಲವು ಕಂಪನಿಗಳು ತಮ್ಮ ಉದ್ಯೋಗಿಗಳು ಕೋವಿಡ್ ಮಾರ್ಗಸೂಚಿ ಪ್ರಕಾರ ಹಾಜರಾಗಲು ಸೂಚಿಸಿದೆ. ಇದೀಗ ಮತ್ತೊಂದು ಕೊರೋನಾ ಅಲೆ ಮನ್ಸೂಚನೆ ಕಾಣಿಸುತ್ತಿದೆ. ಹೀಗಾಗಿ ಅತೀವ ಎಚ್ಚರಿಕೆ ಅಗತ್ಯ ಎಂದು CDC ಸರ್ಕಾರಕ್ಕೆ ಸೂಚನೆ ನೀಡಿದೆ.
Coronavirus: ಚೀನಾ, ಕೋರಿಯಾಕ್ಕೆ ಕೊರೋನಾ ಕಾಟ, ನಮಗೂ ಎಚ್ಚರಿಕೆ!
ಒಳಚರಂಡಿ ನೀರಿನಲ್ಲಿ ಕೋವಿಡ್ ವೈರಸ್ ಕಾಣಿಸಿಕೊಂಡಿರುವ ಕಾರಣ ಬ್ಲೂಮರ್ಗ್ CDC ಈ ಪ್ರದೇಶಗಳಲ್ಲಿ ಹೆಚ್ಚಿನ ಅಧ್ಯಯನ ಮಾಡಿದೆ. 530 ಕ್ಕೂ ಹೆಚ್ಚು ಒಳಚರಂಡಿ ಮಾನಿಟರಿಂಗ್ ಸೈಟ್‌ಗಳಲ್ಲಿನ ಕೋವಿಡ್ ಸಂಖ್ಯೆಯನ್ನು ಅಧ್ಯಯನ ಮಾಡಿದೆ. ಇದರಲ್ಲಿ ಮಾರ್ಚ್ 1 ರಿಂದ 10 ರವರೆಗೆ ಈ 530 ಪ್ರದೇಶಗಳಲ್ಲಿ ಶೇಕಡಾ 59ರಷ್ಟು ಸ್ಥಳಗಳಲ್ಲಿ ಕೋವಿಡ್ ಪ್ರಕರಣಗಳು ಇಳಿಕೆಯಾಗಿದೆ. ಇನ್ನು ಶೇಕಡಾ 5 ರಷ್ಟು ಪ್ರದೇಶಗಳಲ್ಲಿ ಕೋವಿಡ್ ಏರಿಕೆ ಅಥವಾ ಇಳಿಕೆಯಾಗದೆ ಯಥಾ ಸ್ಥಿತಿಯಲ್ಲಿದೆ. ಇನ್ನು ಶೇಕಡಾ 36 ರಷ್ಟು ಪ್ರದೇಶಗಲ್ಲಿ ಕೋವಿಡ್ ಏರಿಕೆಯಾಗಿದೆ.
ಫೆಬ್ರವರಿ 1 ರಿಂದ 10 ವರಗಿನ ಪ್ರಕರಣ ಸಂಖ್ಯೆಗಳಲ್ಲಿ ಶೇಕಡಾ 80 ರಷ್ಟು ಪ್ರದೇಶಗಳಲ್ಲಿ ಕೋವಿಡ್ ಇಳಿಕೆಯಾಗಿತ್ತು. ಇನ್ನು ಶೇಕಡಾ 15 ರಷ್ಟು ಪ್ರದೇಶಗಲ್ಲಿ ಕೋವಿಡ್ ಸಂಖ್ಯೆ ಏರಿಕೆಯಾಗಿತ್ತು. ಇದೀಗ ಈ ಏರಿಕೆ ಸಂಖ್ಯೆ ಸೇಕಡಾ 36 ಆಗಿದೆ.
ಚೀನಾದ 10 ನಗರ ಲಾಕ್:
ಚೀನಾದ ಹಲವು ಭಾಗಗಳಲ್ಲಿ ಮತ್ತೆ ಒಮಿಕ್ರೋನ್ ರೂಪಾಂತರಿ ವೈರಸ್ ಸ್ಫೋಟಗೊಂಡಿದ್ದು, ಸೋಮವಾರ ಒಂದೇ ದಿನ ಸ್ಥಳೀಯವಾಗಿ ಹಬ್ಬಿದ 1337 ಹೊಸ ಕೇಸು ದೃಢಪಟ್ಟಿದೆ. ಹೊಸ ಕೇಸುಗಳ ಪೈಕಿ ಬಹುಪಾಲು ಈಶಾನ್ಯ ಭಾಗದ ಜಿಲಿನ್ ಪ್ರಾಂತ್ಯದಲ್ಲಿ ಕಾಣಿಸಿಕೊಂಡಿದೆ. ಅಲ್ಲಿ 895 ಪ್ರಕರಣ ದಾಖಲಾಗಿವೆ.ಇದೇ ವೇಳೆ ಕೇಸು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ 17.5 ಲಕ್ಷ ಜನಸಂಖ್ಯೆ ಹೊಂದಿರುವ ಶೆನ್‌ಜೆನ್ ನಗರವನ್ನು ಭಾನುವಾರ ಮತ್ತು ಸೋಮವಾರ ಪೂರ್ಣ ಲಾಕ್ಡೌನ್ ಮಾಡಲಾಗಿದೆ. ಕಳೆದ ಕೆಲ ದಿನಗಳಿಂದ ದೇಶಾದ್ಯಂತ ಒಟ್ಟು 10 ಮಹಾನಗರಗಳಲ್ಲಿ ಲಾಕ್ಡೌನ್ ಮಾಡಲಾಗಿದೆ. ಸೋಂಕು ಇಳಿಕೆ ಕಾರಣ ಮುಚ್ಚಿದ್ದ ಹಲವು ಕೊರೋನಾ ವಿಶೇಷ ತಾತ್ಕಾಲಿಕ ಆಸ್ಪತ್ರೆಗಳನ್ನು ಮತ್ತೆ ತೆರೆಯುವ ಕಾರ‍್ಯ ಆರಂಭವಾಗಿದೆ.