ಅಸಂಬದ್ಧ ಪ್ರಶ್ನೆ ಕೇಳಿದ ರಿಪೋರ್ಟರ್‌ಗೆ ಕ್ಯಾಟರ್‌ಬಿಲ್‌ನಿಂದ ಹೊಡೆದ್ರ ಪೊಲೀಸ್‌?

Suvarna News   | Asianet News
Published : Mar 15, 2022, 02:51 PM ISTUpdated : Mar 15, 2022, 02:56 PM IST
ಅಸಂಬದ್ಧ ಪ್ರಶ್ನೆ ಕೇಳಿದ ರಿಪೋರ್ಟರ್‌ಗೆ ಕ್ಯಾಟರ್‌ಬಿಲ್‌ನಿಂದ ಹೊಡೆದ್ರ ಪೊಲೀಸ್‌?

ಸಾರಾಂಶ

ವರದಿಗಾರನಿಗೆ ಕ್ಯಾಟರ್‌ಬಿಲ್‌ನಿಂದ ಹೊಡೆದ್ರ ಪೊಲೀಸ್‌? ವೈರಲ್‌ ಫೋಟೋದ ಸತ್ಯಾಸತ್ಯತೆ ಏನು ಪೊಲೀಸ್ ಕ್ಯಾಟರ್‌ಬಿಲ್ ಹಿಡಿದಿರುವ ಫೋಟೋ ವೈರಲ್

ಉಗಾಂಡಾ(ಮಾ.15): ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಒಬ್ಬರು ಅಸಂಬದ್ಧ ಪ್ರಶ್ನೆ ಕೇಳಿದ ವರದಿಗಾರನಿಗೆ ಕ್ಯಾಟರ್‌ಬಿಲ್‌ನಿಂದ ಹೊಡೆದರೆ? ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಕ್ಯಾಟರ್‌ಬಿಲ್‌ ಕೈಯಲ್ಲಿ ಹಿಡಿದುಕೊಂಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ಫೋಟೊಗೆ ತಕ್ಕನಾಗಿ ಅಸಂಬದ್ಧ ಪ್ರಶ್ನೆ ಕೇಳಿದ ವರದಿಗಾರನಿಗೆ ಪೊಲೀಸ್‌ ಅಧಿಕಾರಿ ಕ್ಯಾಟರ್‌ಬಿಲ್‌ನಿಂದ ಹೊಡೆದರು ಎಂದು ಬರೆದು ಆ ಫೋಟೋವನ್ನು ಪೋಸ್ಟ್ ಮಾಡಲಾಗಿತ್ತು. 

ಉಗಾಂಡಾದಲ್ಲಿ (Uganda) ಹೊಸದಾಗಿ ನೇಮಕಗೊಂಡ ಪೊಲೀಸ್ ವಕ್ತಾರರು 'ಅಪ್ರಸ್ತುತ ಪ್ರಶ್ನೆಗಳನ್ನು' ಕೇಳಿದ್ದಕ್ಕಾಗಿ  ವರದಿಗಾರನಿಗೆ ಕ್ಯಾಟರ್ಬಿಲ್‌ನಿಂದ ಹೊಡೆದರು ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಚಿತ್ರದೊಂದಿಗೆ ಬರೆಯಲಾಗಿತ್ತು. ಈ ಟ್ವಿಟ್‌ ನ್ನು  25,000 ಹೆಚ್ಚು ಜನ ಲೈಕ್ ಮಾಡಿದ್ದರು. ಜೊತೆಗೆ ಇದು  10,000 ಹೆಚ್ಚು ರಿಟ್ವಿಟ್ ಆಗಿತ್ತು. ಇತ್ತ ಸುದ್ದಿಗೋಷ್ಠಿ ವೇಳೆ ಅವರ ಮುಂದೆ ಹಲವು ಮೈಕ್ರೋಫೋನ್‌ಗಳಿದ್ದವು. jotege ಪೊಲೀಸ್ ಅಧಿಕಾರಿ ಅವರು ಕ್ಯಾಟರ್‌ಬಿಲ್‌ನ್ನು ಕೈಯಲ್ಲಿ ಹಿಡಿದಿದ್ದರು.  

 

ಹಾಗಾದರೆ ಪೊಲೀಸ್ ವಕ್ತಾರರು ಅಪ್ರಸ್ತುತ ಪ್ರಶ್ನೆ ಕೇಳಿದ್ದಕ್ಕೆ  ಪತ್ರಕರ್ತರ ಮೇಲೆ ನಿಜವಾಗಿಯೂ ದಾಳಿ ಮಾಡಿದರೆ ಅಂದರೆ ಇಲ್ಲ. ಉಗಾಂಡಾದ ಯಾವುದೇ ಪೊಲೀಸ್ ವಕ್ತಾರರು ಯಾವುದೇ ಪತ್ರಕರ್ತರಿಗೆ ಕ್ಯಾಟರ್‌ಬಿಲ್‌ನಿಂದ ಹೊಡೆದಿಲ್ಲ. ಈ ಫೋಟೋ ವಾಸ್ತವವಾಗಿ ಕಳೆದ ವರ್ಷದ್ದು, ಕಂಪಾಲಾದಲ್ಲಿ (Kampala) ಪೊಲೀಸರು ಅಪಾಯಕಾರಿ ಕ್ಯಾಟರ್‌ಬಿಲ್‌ನ್ನು ವಶಪಡಿಸಿಕೊಂಡಾಗ, ಉಗಾಂಡಾ ರೇಡಿಯೊ ನೆಟ್‌ವರ್ಕ್ ಇದನ್ನು ವರದಿ ಮಾಡಿತ್ತು. ಆ ಸಮಯದಲ್ಲಿ, ಪೊಲೀಸ್ ವಕ್ತಾರ ಫ್ರೆಡ್ ಎನಂಗಾ (Fred Enanga) ಪತ್ರಿಕಾಗೋಷ್ಠಿಯಲ್ಲಿ  ಈ ಕ್ಯಾಟರ್‌ಬಿಲ್‌ಗಳ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡುತ್ತಿದ್ದರು. 

Bike Thief 60 ಸೆಕೆಂಡ್‌ನಲ್ಲಿ ರಾಯಲ್ ಎನ್‌ಫೀಲ್ಡ್ ಕಳ್ಳತನ, ಕರಾಮತ್ತು ನೋಡಿ ಪೊಲೀಸರೆ ದಂಗು!

ಟ್ವಿಟ್ಟರ್‌ನಲ್ಲಿ ವೈರಲ್‌ ಆದ ಫೋಟೋವನ್ನು ಕೂಡ ವಾಸ್ತವವಾಗಿ 2021 ರಲ್ಲಿ ಆ ಪತ್ರಿಕಾಗೋಷ್ಠಿಯಿಂದ ತೆಗೆದುಕೊಳ್ಳಲಾಗಿದೆಯೇ ಹೊರತು ಇತ್ತೀಚಿನ ಪತ್ರಿಕಾಗೋಷ್ಠಿಯಿಂದ ಅಲ್ಲ. ಇದನ್ನು ಸ್ವತಃ ಉಗಾಂಡಾ ಪೊಲೀಸರೇ ಖಚಿತಪಡಿಸಿದ್ದಾರೆ. ಕೀನ್ಯಾದ ವಕೀಲ ಅಹ್ಮದ್ನಾಸಿರ್ ಅಬ್ದುಲ್ಲಾಹಿ (Ahmednasir Abdullahi) ಅವರು ಸುಳ್ಳು ಹೇಳಿಕೆಯೊಂದಿಗೆ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಉಗಾಂಡಾ ಪೊಲೀಸರನ್ನು ಕೆಣಕಲು ಪ್ರಯತ್ನಿಸಿದ್ದಾರೆ. ಆದರೆ ಇದೇ ಈಗ ವೈರಲ್‌ ಆಗಿದೆ. ಉಗಾಂಡಾ ಪೋಲೀಸ್ ಇಲಾಖೆಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಅದನ್ನು ನಕಲಿ ಸುದ್ದಿ ಎಂದು ಸ್ಪಷ್ಟನೆ ನೀಡಿದೆ.  

'ಸೆನ್ಸ್ ಇಲ್ಲವೆ'  ವರದಿಗಾರನ ಮೇಲೆ ಸಮಂತಾ ಗರಂ!
 

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವುದು ಸಾಮಾನ್ಯ ಎನಿಸಿ ಬಿಟ್ಟಿದೆ. ಕೆಲ ದಿನಗಳ ಹಿಂದೆ ಸೂಪರ್‌ ಸ್ಟಾರ್‌ ಸಲ್ಮಾನ್ ಖಾನ್ (Salman Khan)  ಮತ್ತು ನಟಿ ಸೋನಾಕ್ಷಿ (Sonakshi Sinha) ವಧು-ವರರಾಗಿ ಕಾಣಿಸಿಕೊಂಡ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್ ಆಗಿತ್ತು.ಈ  ಫೋಟೋ ಅಭಿಮಾನಿಗಳಿಗೆ (Fans) ಶಾಕ್‌ ನೀಡಿತ್ತು. ಬಾಲಿವುಡ್ ಹಿರಿಯ ನಟ ಶತ್ರುಘ್ನಾ ಸಿನ್ಹಾ ಮಗಳು ಸೋನಾಕ್ಷಿ ಸಿನ್ಹಾ (Sonakshi Sinha)  ಜೊತೆ ರಹಸ್ಯವಾಗಿ  ಮದುವೆಯಾದರಾ ಸಲ್ಮಾನ್‌ ಎಂದು ಜನ ಪ್ರಶ್ನೆ ಕೇಳಲು ಶುರು ಮಾಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!