Coronavirus: ಲಾಕ್ ಡೌನ್ ಇದ್ದರೂ  ನಿಲ್ಲದ ವೈರಸ್ ಕಾಟ.. ಚೀನಾಕ್ಕೆ ಮತ್ತೆ ಸಂಕಟ

By Contributor Asianet  |  First Published Apr 3, 2022, 9:27 PM IST

* ಚೀನಾದಲ್ಲಿ ಮತ್ತೆ ಕೊರೋನಾ ಅಬ್ಬರ
* ಹಲವು ನಗರಗಳಲ್ಲಿ ಲಾಕ್ ಡೌನ್
* ಮಾಸ್ ಆಂಟಿಜನ್ ಟೆಸ್ಟ್
* ಲಕ್ಷಣರಹಿತ ಪ್ರಕರಣಗಳ ಸಂಖ್ಯೆ ಅತಿಹೆಚ್ಚು 


ಬೀಜಿಂಗ್(ಏ. 03)  ಕೊರೋನಾ (Coronavirus) ತವರು ಚೀನಾದಲ್ಲಿ ಮತ್ತೆ ವೈರಸ್ ಅಬ್ಬರ.  ನಾಲ್ಕನೇ ಅಲೆ ಅಬ್ಬರಿಸುತ್ತಿದ್ದು ಅನೇಕ ನಗರಗಳಲ್ಲಿ ಲಾಕ್ ಡೌನ್ (Lockdown) ಘೋಷಣೆ ಮಾಡಲಾಗಿದೆ. 

ಲಾಕ್‌ಡೌನ್‌ಗಳು ಮತ್ತು ಇತರ ಕಟ್ಟುನಿಟ್ಟಿನ ಕ್ರಮಗಳ ಹೊರತಾಗಿಯೂ, ಚೀನಾ (China) ಭಾನುವಾರ (ಏಪ್ರಿಲ್ 3, 2022) ಒಟ್ಟು 13,287 ಹೊಸ ದೈನಂದಿನ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದು ಫೆಬ್ರವರಿ 2020 ರಿಂದ ಅತ್ಯಧಿಕ ಮಟ್ಟದ್ದಾಗಿದ್ದು ಸಹಜವಾಗಿ ಆತಂಕಕ್ಕೆ ಕಾರಣವಾಗಿದೆ.

Latest Videos

ಚೀನಾಕ್ಕೆ ಮತ್ತೆ ವೈರಸ್ ಕಾಡುತ್ತಿದೆ.   ಪ್ರತಿ ಪ್ರಾಂತ್ಯದಿಂದಲೂ ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾಗುತ್ತಲೇ ಇವೆ.   ಈಶಾನ್ಯ ಜಿಲಿನ್ ಪ್ರಾಂತ್ಯದಿಂದ 956 ಮತ್ತು  ಶಾಂಘೈನಿಂದ 438 ಪ್ರಕರಣ ವರದಿಯಾಗಿದೆ. ಲಾಕ್ ಡೌನ್ ಇದ್ದರೂ ಮಹಾನಗರಗಳಲ್ಲಿ ಸೋಂಕು ವ್ಯಾಪಕವಾಗಿ ಹಬ್ಬಿದೆ.

ಹೊಸ ಲಕ್ಷಣರಹಿತ ಪ್ರಕರಣಗಳ ಸಂಖ್ಯೆಯು ಶನಿವಾರದಂದು 11,781 ಕ್ಕೆ ಏರಿಕೆಯಾಗಿದ್ದು,  ಶುಕ್ರವಾರ 7,869 ಕ್ಕೆ ಇತ್ತು. 25 ಮಿಲಿಯನ್ ಜನರಿರುವ  ಶಾಂಘೈನಲ್ಲಿ ಭಾನುವಾರ  ಆಂಟಿ ಜನ್ ಟೆಸ್ಟ್ ಮಾಡಿಸಲಾಗಿದೆ.  ಸೋಮವಾರ ಸಾಮೂಹಿಕ ನ್ಯೂಕ್ಲಿಯಿಕ್ ಆಮ್ಲ ಪರೀಕ್ಷೆ ನಡೆಸಲಾಗುವುದು.

ಕೊರೋನಾ ವೈರಸ್ ಹಡಡುವುದನ್ನು ತಡೆಯುವುದು ಮೊದಲ ಆದ್ಯತೆ.   ಪ್ರಸರಣದ ಸರಪಳಿಯನ್ನು ಕಡಿತಗೊಳಿಸಬೇಕಿದೆ. ಇದರಿಂದ ನಾವು ಸಾಧ್ಯವಾದಷ್ಟು ಬೇಗ ಸಾಂಕ್ರಾಮಿಕ ರೋಗವನ್ನು ತಡೆಯಬಹುದು" ಎಂದು ಶಾಂಘೈ ಮುನ್ಸಿಪಲ್ ಹೆಲ್ತ್ ಕಮಿಷನ್ ಇನ್ಸ್‌ಪೆಕ್ಟರ್ ವು ಕಿಯಾನ್ಯು ಹೇಳಿದ್ದಾರೆ.

ಮಹಾನಗರದಲ್ಲಿ  ಎರಡು-ಹಂತದ ಲಾಕ್‌ಡೌನ್ ಹೇರುವ ಮೂಲಕ  ಕೊರೋನಾ ತಡೆಗೆ ಯೋಚನೆ ಮಾಡಲಾಗಿದೆ.  ವಿಶ್ವದ ಅತಿದೊಡ್ಡ ಕಂಟೇನರ್ ಸಾಗಣೆ ಕೇಂದ್ರವಾದ ಶಾಂಘೈ ಬಂದರಿನಲ್ಲಿಯೂ ಜನ ಸಾಂದ್ರತೆ ಇದ್ದು ಕಠಿಣ ಕ್ರಮಗಳನ್ನು ಹೇರಲಾಗಿದೆ.

ಮನೆಯೊಳಗೇ ಉಳಿದುಕೊಳ್ಳುವ ಭಯದಿಂದ ಜನರು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ವಸ್ತುಗಳನ್ನು, ಆಹಾರ ಸಾಮಗ್ರಿಯನ್ನು ಖರೀದಿಸುತ್ತಿದ್ದಾರೆ. ಇದರಿಂದ ಕೃತಕ ಅಭಾವ ಸೃಷ್ಟಿಯಾಗುವ ಆತಂಕ ಎದುರಾಗಿದೆ. ಹಣಕಾಸು ಸೇರಿದಂತೆ ಅಗತ್ಯ ಸೇವೆಗೆ ಸಂಬಂಧಿಸಿದಂತೆ ಸಂಸ್ಥೆಯ ಉದ್ಯೋಗಿಗಳು ಕಚೇರಿಯಲ್ಲೇ ಉಳಿದುಕೊಳ್ಳಲು ನಿರ್ಧರಿಸಿದ್ದು, ಆಫೀಸನ್ನೇ ವಾಸಸ್ಥಳವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. 

ಏಷ್ಯಾ ಕಾಡುತ್ತಿರುವ ಕೊರೋನಾ:  ಬಿಎ.2 ಒಮಿಕ್ರೋನ್‌ ಕೊರೋನಾ(Coronavirus) ರೂಪಾಂತರಿ ವೇಗವಾಗಿ ಹರಡುತ್ತಿರುವ ಪರಿಣಾಮ ಏಷ್ಯಾ ಖಂಡದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು 10 ಕೋಟಿ ಗಡಿ ದಾಟಿದ್ದವು.. ಏಷ್ಯಾದಲ್ಲಿ ಪ್ರತಿ 2 ದಿನಕ್ಕೆ ಸರಾಸರಿ 10 ಲಕ್ಷ ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ಜಗತ್ತಿನ ಒಟ್ಟು ಸೋಂಕಿತರ ಪೈಕಿ ಶೇ.21ರಷ್ಟುಮಂದಿ ಏಷ್ಯಾದವರಾಗಿದ್ದಾರೆ. ಈ ಪೈಕಿ ಭಾರತ(India) ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ದಕ್ಷಿಣ ಕೊರಿಯಾ, ಜಪಾನ್‌ ಮತ್ತು ವಿಯೆಟ್ನಾಂ ಇವೆ. ಇನ್ನು ಚೀನಾದ ಕೆಲ ಭಾಗಗಳಲ್ಲಿ ಇತ್ತೀಚೆಗೆ ಮತ್ತೆ ಕೊರೋನಾ ಸೋಂಕು ಏರಿಕೆಯಾಗುತ್ತಿದ್ದು, ಕೆಲ ಭಾಗಗಳಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿತ್ತು.

ಕರ್ನಾಟಕಲ್ಲಿ ನಿಯಂತ್ರಣ: ಮೂರನೇ ಅಲೆಯನ್ನು ಕರ್ನಾಟಕ  ಯಶಸ್ವಿಯಾಗಿ ನಿಭಾಯಿಸಿತ್ತು. ಭಾರತದಲ್ಲಿಯೂ ಲಸಿಕಾ ಅಭಿಯಾನ ಯಶ ಕಂಡಿದ್ದು ಕೊರೋನಾ ವಿರುದ್ಧ ಎಲ್ಲರೂ  ಹೋರಾಟದಲ್ಲಿ  ಪಾಲ್ಗೊಂಡಿದ್ದರು.

 


 

click me!