Coronavirus : ಜನರೇ ಸೂಪರ್‌ ಮಾರ್ಕೆಟ್ ದೋಚಿದ್ರು... ಶಾಂಘೈನಲ್ಲಿ ಹೊರಬರಲು ಕೆಲವರಿಗೆ ಅವಕಾಶ!

Published : Apr 13, 2022, 04:48 AM IST
Coronavirus : ಜನರೇ ಸೂಪರ್‌ ಮಾರ್ಕೆಟ್ ದೋಚಿದ್ರು... ಶಾಂಘೈನಲ್ಲಿ ಹೊರಬರಲು ಕೆಲವರಿಗೆ ಅವಕಾಶ!

ಸಾರಾಂಶ

 * ಶಾಂಘೈನಲ್ಲಿ ಲಾಕ್‌ಡೌನ್‌ ನಿರ್ಬಂಧ ಕೊಂಚ ಸಡಿಲ * ಜನರಿಂದ ಸೂಪರ್‌ ಮಾರ್ಕೆಟ್‌ ಲೂಟಿ ಬೆನ್ನಲ್ಲೇ ನಿರ್ಬಂಧ ಸಡಲಿಕೆ * ಕೆಲವರಿಗಷ್ಟೇ ಹೊರಹೋಗಲು ಅವಕಾಶ * ಮಾರ್ಕೆಟ್‌, ಔಷಧಾಲಯ ತೆರೆಯಲು ಅನುಮತಿ

ಬೀಜಿಂಗ್‌ (ಏ. 13)  ಶಾಂಘೈಯಲ್ಲಿ (China) 2 ವಾರಗಳ ಕಠಿಣ ಲಾಕ್‌ಡೌನ್‌ ನಿರ್ಬಂಧಗಳನ್ನು ಹಿಂಪಡೆಯಲಾಗಿದ್ದು, ಕೆಲವು ಜನರಿಗೆ ಹೊರಗಡೆ ಓಡಾಡಲು ಅನುಮತಿ ನೀಡಲಾಗಿದೆ. ಲಾಕ್‌ಡೌನ್‌ನಿಂದಾಗಿ (LOckdown) ಆಹಾರವಿಲ್ಲದೇ ಕಂಗೆಟ್ಟು ಜನರೇ ನಿಯಮ ಉಲ್ಲಂಘಿಸಿ ಸೂಪರ್‌ ಮಾರ್ಕೆಟ್‌ಗಳನ್ನು(Super Market) ಲೂಟಿ ಮಾಡಿದ ಘಟನೆಗಳು ವರದಿಯಾದ ಬೆನ್ನಲ್ಲೇ ನಿಯಮಗಳನ್ನು ಕೊಂಚ ಸಡಲಿಸಲಾಗಿದೆ.

ಚೀನಾದ ಸರ್ಕಾರ ಎಷ್ಟುಜನರಿಗೆ ಹೊರಗಡೆ ಓಡಾಡುವುದಕ್ಕೆ ಅನುಮತಿ ನೀಡಿದೆ ಎಂಬುದು ಸ್ಪಷ್ಟಪಡಿಸಿಲ್ಲವಾದರೂ, ಸೂಪರ್‌ ಮಾರ್ಕೆಟ್‌ ಹಾಗೂ ಔಷಧಾಲಯಗಳನ್ನು ತೆರೆದಿಡಲು ಅನುಮತಿಯನ್ನು ನೀಡಿದೆ ಎಂದು ತಿಳಿದುಬಂದಿದೆ.

ಕೋವಿಡ್‌ ಕೇಸುಗಳಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಮಾಚ್‌ರ್‍ 28 ರಿಂದ 2.6 ಕೋಟಿ ಜನರು ವಾಸಿಸುವ ಶಾಂಘೈ ನಗರದಲ್ಲಿ ಚೀನಾ ಸರ್ಕಾರ ಲಾಕ್‌ಡೌನ್‌ ಘೋಷಿಸಿತ್ತು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮನೆಯಲ್ಲೇ ಇರಬೇಕು ಎಂದು ಸೂಚಿಸಲಾಗಿದ್ದು, ತಮ್ಮ ಸಾಕುಪ್ರಾಣಿಗಳನ್ನು ಹೊರಗಡೆ ವಿಹಾರಕ್ಕೆ ಕರೆದುಕೊಂಡು ಹೋಗದಂತೆ ನಿರ್ಬಂಧ ಹೇರಲಾಗಿತ್ತು.

ಆದರೆ ಹೇಳಿದಂತೆ ಆಹಾರ, ಔಷಧಿಗಳನ್ನು ಜನರ ಮನೆಬಾಗಿಲಿಗೆ ತಲುಪಿಸಲು ವಿಫಲವಾದ ಸರ್ಕಾರದ ವಿರುದ್ಧ ಜನರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಜನರೇ ಸಿಟ್ಟಿಗೆದ್ದು ಪಿಪಿಇ ಸೂಟ್‌ ಧರಿಸಿಯೇ ಸೂಪರ್‌ ಮಾರ್ಕೆಟ್‌ಗಳನ್ನು ಲೂಟಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ನಿಯಮ ಸಡಲಿಕೆಗೆ ಮುಂದಾಗಿದೆ.

ಸೋಂಕು ಏರಿಕೆ : ನಿರ್ಬಂಧ ಸಡಲಿಕೆ ನಡುವೆ ಚೀನಾದಲ್ಲಿ ಕೋವಿಡ್‌ ಪ್ರಕರಣದಲ್ಲಿ ಕೊಂಚ ಏರಿಕೆ ಕಂಡುಬಂದಿದೆ. ಸೋಮವಾರ ಮಧ್ಯರಾತ್ರಿಯವರೆಗೆ 24,659 ದೈನಂದಿನ ಕೋವಿಡ್‌ ಕೇಸುಗಳು ವರದಿಯಾಗಿವೆ. ಅಲ್ಲದೇ 23,387 ಸೋಂಕಿತರಿಗೆ ಕೋವಿಡ್‌ ಪಾಸಿಟಿವ್‌ ವರದಿಯಾದರೂ ಯಾವುದೇ ರೋಗಲಕ್ಷಣಗಳು ಕಂಡುಬಂದಿಲ್ಲ. ಅದೇ ಶಾಂಘೈನಲ್ಲಿ 23,346 ಕೋವಿಡ್‌ ಕೇಸು ದಾಖಲಾಗಿದ್ದು, 998 ಸೋಂಕಿತರಿಗೆ ರೋಗಲಕ್ಷಣಗಳಿಲ್ಲ. ಕೋವಿಡ್‌ ಅಲೆ ಆರಂಭದಿಂದಲೂ ಶಾಂಘೈನಲ್ಲಿ ಒಟ್ಟು 2 ಲಕ್ಷ ಕೇಸುಗಳು ದಾಖಲಾಗಿದ್ದರೂ, ಯಾವುದೇ ಸಾವು ವರದಿಯಾಗಿಲ್ಲ ಎಂಬುದು ವಿಶೇಷವಾಗಿದೆ.

ಅಮೆರಿಕದ ಅಧಿಕಾರಿಗಳು ದೇಶಕ್ಕೆ: ಕೋವಿಡ್‌ ಬಿಕ್ಕಟ್ಟು ಹಾಗೂ ಆಹಾರದ ತೀವ್ರ ಕೊರತೆಯ ಹಿನ್ನೆಲೆಯಲ್ಲಿ ಶಾಂಘೈಯಲ್ಲಿರುವ ಅಮೆರಿಕದ ದೂತಾವಾಸ ಕಚೇರಿಯಿಂದ ಸರ್ಕಾರಿ ಅಧಿಕಾರಿಗಳನ್ನು ಮರಳಿ ದೇಶಕ್ಕೆ ಕರೆಸಿಕೊಳ್ಳಲಾಗಿದೆ. ಆದರೆ ದೂತಾವಾಸದ ಅಧಿಕಾರಿಗಳು ಶಾಂಘೈನಲ್ಲಿಯೇ ಇರಲಿದ್ದಾರೆ.

ಬೆಂಗಳೂರು ಕೊರೋನಾ (Coronavirus) ಲೆಕ್ಕ: ಬೆಂಗಳೂರು ನಗರದಲ್ಲಿ ಮಂಗಳವಾರ 40 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 74 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ

Covid Crisis: ಬೂಸ್ಟರ್‌ ಡೋಸ್‌ಗೆ ನಿರಾಸಕ್ತಿ..!

ಸದ್ಯ 1,328 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 3,390 ನಡೆದಿದ್ದು, ಪಾಸಿಟಿವಿಟಿ ದರ ಶೇ.1.3ರಷ್ಟುದಾಖಲಾಗಿದೆ. ಸೋಮವಾರಕ್ಕೆ ಹೋಲಿಸಿದರೆ ಪರೀಕ್ಷೆಗಳು 1200 ಹೆಚ್ಚು ನಡೆದಿವೆ. ಸದ್ಯ ಸಕ್ರಿಯ ಸೋಂಕಿತರ ಪೈಕಿ 4 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದು, ಈ ಪೈಕಿ ವೆಂಟಿಲೇಟರ್‌ ಮತ್ತು ಆಕ್ಸಿಜನ್‌ ಹಾಸಿಗೆಯಲ್ಲಿ ತಲಾ ಒಬ್ಬರು, ಸಾಮಾನ್ಯ ಹಾಸಿಗೆಗಳಲ್ಲಿ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ 1,324 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ. ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 17.8 ಲಕ್ಷಕ್ಕೆ, ಗುಣಮುಖರ ಸಂಖ್ಯೆ 17.6 ಲಕ್ಷಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 16,964 ಇದೆ ಎಂದು ಬಿಬಿಎಂಪಿ ಕೊರೋನಾ ವರದಿಯಲ್ಲಿ ತಿಳಿಸಲಾಗಿದೆ.

 

 

 

 

 


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ