ಕೊರೋನಾ ಶುಶ್ರೂಷೆ ಮಾಡಿ ಬಂದ ತಾಯಿಯನ್ನು ಗುರುತಿಸದ ಮಗು!

By Suvarna NewsFirst Published Apr 18, 2020, 2:00 PM IST
Highlights

ಕೊರೋನಾ ಶುಶ್ರೂಷೆ ಮಾಡಿ ಬಂದ ತಾಯಿಯನ್ನು ಗುರುತಿಸದ ಮಗು!| ಚೀನಾದಲ್ಲೊಂದು ಹೃದಯ ವಿದ್ರಾವಕ ಘಟನೆ ಬೆಳಕಿಗೆ|  62 ದಿನ ಬಳಿಕ ಮಗುವಿಗೆ ತಾಯಿ ಗುರುತು ಸಿಗಲಿಲ್ಲ

ಬೀಜಿಂಗ್‌(ಏ.18): ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ವೈದ್ಯರು ಸೇರಿದಂತೆ ಆರೋಗ್ಯ ಸಿಬ್ಬಂದಿ ತಿಂಗಳುಗಟ್ಟಲೆ ಮನೆಗೆ ತೆರಳದೆಯೇ ಶುಶ್ರೂಯೆಯಲ್ಲಿ ತೊಡಗಿಕೊಂಡಿದ್ದಾರೆ. ಹೀಗೆ ರೋಗಿಗಳ ಆರೈಕೆಗೆಂದು ತಿಂಗಳುಗಟ್ಟಲೆ ಮನೆಯಿಂದ ಹೊರಗಿದ್ದ ತಾಯಿಯನ್ನೇ ಸ್ವತಃ 14 ತಿಂಗಳ ಮಗು ಗುರುತಿಸದೇ ಹೋದ ಹೃದಯ ವಿದ್ರಾವಕ ಘಟನೆ ಚೀನಾದ ವುಹಾನ್‌ನಲ್ಲಿ ನಡೆದಿದೆ.

ವುಹಾನ್‌ನಲ್ಲಿ ಸೋಂಕು ತೀವ್ರಗೊಂಡಿದ್ದ ಹಿನ್ನೆಲೆಯಲ್ಲಿ ನರ್ಸ್‌ ಒಬ್ಬರು ಕಳೆದ 62 ದಿನಗಳಿಂದ ಮನೆಗೆ ಹೋಗಿರಲಿಲ್ಲ. ಆಸ್ಪತ್ರೆಯಲ್ಲೇ ವಾಸವಿದ್ದರು. ಇದೀಗ ನಿರ್ಬಂಧಗಳು ತೆರವಾದ ಹಿನ್ನೆಲೆಯಲ್ಲಿ ಮಗುವಿನ ತಂದೆ, ಮಗುವನ್ನು ತಾಯಿಯನ್ನು ಭೇಟಿ ಮಾಡಿಸಲೆಂದು ಆಸ್ಪತ್ರೆಗೆಂದು ಕರೆತಂದಿದ್ದರು.

ಲಾಕ್‌ಡೌನ್‌ ಮಧ್ಯೆ ಯುವಕರ ಮೋಜು, ಮಸ್ತಿಗೇನು ಕಮ್ಮಿಯಿಲ್ಲ..!

ಈ ವೇಳೆ ತಂದೆ ಮಗುವನ್ನು ತಾಯಿಯ ಕೈಗೆ ಕೊಟ್ಟಾಗ, ಅದು ಜೋರಾಗಿ ಅಳುತ್ತಾ ಪುನಃ ತಂದೆಯ ಮಡಿಲಿಗೆ ಹಾರಿದೆ. ಇದನ್ನು ನೋಡಿದ ತಾಯಿ ನೋವಿನಿಂದ ಅಳುತ್ತಾ ಪಕಕ್ಕೆ ಸರಿದ ವಿಡಿಯೋವೊಂದು ಇದೀಗ ಭಾರೀ ವೈರಲ್‌ ಆಗಿದೆ. ಬಹಳ ದಿನಗಳಿಂದ ಆಸ್ಪತ್ರೆಯಿಂದ ಹೊರಗೇ ಬಾರದ ಕಾರಣ ಮುಖಚಹರೆಯಲ್ಲಿ ಆದ ಬದಲಾವಣೆ ಮತ್ತು 2 ತಿಂಗಳನಿಂದ ದೂರವಿದ್ದ ಪರಿಣಾಮ ಮಗು ತಾಯಿಯನ್ನು ಗುರುತಿಸಿಲ್ಲ ಎನ್ನಲಾಗಿದೆ.

click me!