ಅಮೆರಿಕ ಸಂಸತ್ತಿನಲ್ಲಿ ಮಂಡನೆಯಾದ ಮಸೂದೆಯೊಂದು ಚೀನಾಗೆ ನಡುಕ ಉಂಟು ಮಾಡಿದೆ. ಅಷ್ಟಕ್ಕೂ ಆ ಮಸೂದೆ ಯಾವುದು? ಇಲ್ಲಿದೆ ವಿವರ
ವಾಷಿಂಗ್ಟನ್(E.೧೮): ಇಡೀ ವಿಶ್ವಕ್ಕೆ ಕೊರೋನಾ ಹಬ್ಬಿಸಿದ ಆರೋಪ ಹೊತ್ತಿರುವ ಚೀನಾದ ವಿರುದ್ಧ ಕೇಸು ದಾಖಲಿಸಲು ಅಮೆರಿಕನ್ನಿಗರಿಗೆ ಅವಕಾಶ ನೀಡುವ ಮಸೂದೆಯೊಂದನ್ನು ಅಮೆರಿಕ ಸಂಸತ್‌ನಲ್ಲಿ ಮಂಡಿಸಲಾಗಿದೆ.
ಚೀನಾ ಸರ್ಕಾರವನ್ನು ಕೋರ್ಟ್ ಕಟ್ಟಕಟೆಗೆ ಎಳೆದು ತರುವ ಸ್ವಾತಂತ್ರ್ಯ ಕಲ್ಪಿಸುವ ಮಸೂದೆಯೊಂದನ್ನು ಅಮೆರಿಕದ ಇಬ್ಬರು ಸಂಸದರು ಮಂಡಿಸಿದ್ದಾರೆ. ಈ ಮಸೂದೆ ಅಂಗೀಕಾರವಾಗಿ ಕಾಯ್ದೆಯಾಗಿ ರೂಪುಗೊಂಡಿದ್ದೇ ಆದಲ್ಲಿ, ಪ್ರಸ್ತುತ ಕೊರೋನಾದಿಂದ ಅಮೆರಿಕದಲ್ಲಿ ಆಗಿರುವ ಸಾವು, ನೋವು ಹಾಗೂ ಆರ್ಥಿಕ ಸಮಸ್ಯೆಗಳನ್ನು ಭರಿಸಿಕೊಡುವಂತೆ ಒತ್ತಾಯಿಸಿ ಚೀನಾ ಸರ್ಕಾರದ ವಿರುದ್ಧ ಅಮೆರಿಕ ಪ್ರಜೆಗಳೇ ಕೋರ್ಟ್ ಮೆಟ್ಟಿಲೇರಬಹುದು.
ರಾಜ್ಯದಲ್ಲಿವೆ ಪ್ಲೇಗಮ್ಮ, ಸಿಡುಬಮ್ಮ, ಏಡ್ಸಮ್ಮ ಗುಡಿ: ಈಗ ‘ಕೊರೋನಮ್ಮ’ ಹೆಸರಲ್ಲೂ ಪೂಜೆ!
ಕೊರೋನಾ ಕುರಿತಾಗಿ ಚೀನಾ ಮತ್ತು ವಿಶ್ವಕ್ಕೆ ಎಚ್ಚರಿಸಲು ಯತ್ನಿಸಿದ ಚೀನಾದ ವೈದ್ಯರು ಹಾಗೂ ಪತ್ರಕರ್ತರನ್ನು ಚೀನಾ ಸರ್ಕಾರ ಒತ್ತಡ ತರುವ ಮೂಲಕ ಅವರ ಧ್ವನಿಯನ್ನು ಮುಚ್ಚಿ ಹಾಕಿತ್ತು. ಈ ಮೂಲಕ ಕೊರೋನಾ ಇಡೀ ವಿಶ್ವಕ್ಕೆ ಹಬ್ಬುವಂತೆ ನೋಡಿಕೊಂಡಿತ್ತು ಎಂದು ಅಮೆರಿಕದ ಸಂಸದರು ಮಸೂದೆ ಮಂಡನೆ ವೇಳೆ ದೂರಿದ್ದಾರೆ.