ಸಮುದ್ರದೊಳಗೇ ಬಾಂಬಿಟ್ಟು ಹಡಗು ಸ್ಫೋಟ ಸಂಚು

Kannadaprabha News   | Kannada Prabha
Published : Mar 12, 2026, 05:27 AM IST
Iran

ಸಾರಾಂಶ

ಇರಾನ್‌ ಹಾಗೂ ಅಮೆರಿಕ-ಇಸ್ರೇಲ್‌ ಕೂಟದ ನಡುವಿನ ಸಮರ 12ನೇ ದಿನ ಪೂರೈಸಿದ್ದು, ಸಮುದ್ರದಲ್ಲಿ ನೆಲಬಾಂಬ್‌ ಇಡುತ್ತಿದ್ದ 16 ಇರಾನಿ ಹಡಗುಗಳನ್ನು ಧ್ವಂಸಗೊಳಿಸಿದ್ದಾಗಿ ಅಮೆರಿಕ ಹೇಳಿಕೊಂಡಿದೆ. ಇದರಿಂದಾಗಿ ಈ ಯುದ್ಧದಲ್ಲಿ ಇರಾನ್‌, ತನ್ನ ವಿರೋಧಿಗಳ ವಿರುದ್ಧ ಹೆಣೆದಿದ್ದ ಮತ್ತೊಂದು ಬೃಹತ್‌ ಸಂಚು ಬಯಲಿಗೆ ಬಂದಂತಾಗಿದೆ.

ದುಬೈ: ಇರಾನ್‌ ಹಾಗೂ ಅಮೆರಿಕ-ಇಸ್ರೇಲ್‌ ಕೂಟದ ನಡುವಿನ ಸಮರ 12ನೇ ದಿನ ಪೂರೈಸಿದ್ದು, ಸಮುದ್ರದಲ್ಲಿ ನೆಲಬಾಂಬ್‌ ಇಡುತ್ತಿದ್ದ 16 ಇರಾನಿ ಹಡಗುಗಳನ್ನು ಧ್ವಂಸಗೊಳಿಸಿದ್ದಾಗಿ ಅಮೆರಿಕ ಹೇಳಿಕೊಂಡಿದೆ. ಇದರಿಂದಾಗಿ ಈ ಯುದ್ಧದಲ್ಲಿ ಇರಾನ್‌, ತನ್ನ ವಿರೋಧಿಗಳ ವಿರುದ್ಧ ಹೆಣೆದಿದ್ದ ಮತ್ತೊಂದು ಬೃಹತ್‌ ಸಂಚು ಬಯಲಿಗೆ ಬಂದಂತಾಗಿದೆ.

ವಿಶ್ವದ ತೈಲದ ಸುಮಾರು ಶೇ.20ರಷ್ಟು ಸರಕು ಹಡಗುಗಳು ಹಾದುಹೋಗುವ ಪ್ರಮುಖ ಹಡಗು ಮಾರ್ಗವಾದ ಹೋರ್ಮುಜ್ ಜಲಸಂಧಿಯ ಬಳಿ ಸಮುದ್ರದ ಅಡಿಯಲ್ಲೇ ನೆಲಬಾಂಬ್‌ ಇಟ್ಟು ಸಾಗುತ್ತಿದ್ದ 16 ಹಡಗುಗಳನ್ನು ನಾಶ ಪಡಿಸಿದ್ದೇವೆ ಎಂದು ಅಮೆರಿಕ ಸೇನೆ ತಿಳಿಸಿದೆ.

ಸೋಮವಾರವಷ್ಟೇ ಇರಾನ್‌, ತನ್ನ ಪಕ್ಕದ ಹೋರ್ಮುಜ್‌ ಜಲಸಂಧಿ ಬಳಿ ಹಾದು ಹೋಗುವ ತೈಲ ಹಡಗುಗಳನ್ನು ನಿರ್ಬಂಧಿಸುವುದಾಗಿ ಹಾಗೂ ‘ಒಂದು ಲೀಟರ್’ ತೈಲವನ್ನೂ ತನ್ನ ಶತ್ರುಗಳನ್ನು ತಲುಪಲು ಬಿಡುವುದಿಲ್ಲ ಎಂದು ಗುಡುಗಿತ್ತು. ಇದರ ಬೆನ್ನಲ್ಲೇ, ನೆಲಬಾಂಬ್‌ ಹಾಕುವ 1 ಡಜನ್‌ಗೂ ಹೆಚ್ಚು ಇರಾನಿ ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಬುಧವಾರ ಹೇಳಿದೆ. ಇದಕ್ಕೆ ಸಂಬಂಧಿಸಿದಂತೆ ತೈಲ ಹಡಗೊಂದನ್ನು ಸ್ಫೋಟಗೊಳಿಸುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.

ಇರಾನ್‌ ನಮ್ಮ ತಂಟೆಗೆ ಬಂದರೆ 20 ಪಟ್ಟು ಹೆಚ್ಚು ಭೀಕರ ದಾಳಿ ನಡೆಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಂಗಳವಾರ ಹೇಳಿದ್ದರು. ಇದರ ಬೆನ್ನಲ್ಲೇ ಅಮೆರಿಕ ರಕ್ಷಣಾ ಸಚಿವ ಪೀಟರ್‌ ಹೆಗ್ಸತ್‌ ಮಂಗಳವಾರ ರಾತ್ರಿ ಭೀಕರ ದಾಳಿಯ ರಾತ್ರಿಯಾಗಲಿದೆ ಎಂದಿದ್ದರು.

ಈ ನಡುವೆ ಸಿಎನ್‌ಎನ್‌ ಟೀವಿ ಚಾನೆಲ್‌ ಈ ಬಗ್ಗೆ ವರದಿ ಮಾಡಿದ್ದು, ವಿಶ್ವದ ಅತ್ಯಂತ ನಿರ್ಣಾಯಕ ಇಂಧನ ಸಾಗಣೆ ಜಲಮಾರ್ಗವಾದ ಹೋರ್ಮುಜ್‌ನಲ್ಲಿ, ಇರಾನ್ ನೆಲಬಾಂಬ್‌ ಅಡಗಿಸಿ ಇಡಲು ಪ್ರಾರಂಭಿಸಿದೆ ಎಂದಿದೆ.

ಸಮುದ್ರ ಬಾಂಬ್‌ ಸ್ಫೋಟ ಹೇಗೆ?

ಸಮುದ್ರ ಬಾಂಬ್‌ ಎಂದರೆ ನೆಲಬಾಂಬುಗಳಂತೆ ಸಾಗರದಾದಲ್ಲಿ ಹೂತಿಡಲಾಗುವ ಸ್ಫೋಟಕಗಳು. ಇವುಗಳನ್ನು ವಿಶೇಷ ನೌಕೆಗಳ ಅಥವಾ ಜಲಾಂತರ್ಗಾಮಿಗಳ ಮೂಲಕ ಸಮುದ್ರದಲ್ಲಿ ಇಡಲಾಗುತ್ತದೆ.

ಬಾಂಬ್‌ ಸ್ಫೋಟ ನಡೆಸೋದೇಗೆ?

ಸಮುದ್ರ ಬಾಂಬ್‌ ಮೇಲೆ ನೌಕೆ, ಸಬ್‌ಮರಿನ್‌ ಹಾದುಹೋಗುವಾಗ ನೆಲಬಾಂಬ್‌ ತಾಗುವಂತೆ ಮಾಡಿ ಸ್ಫೋಟ ಮಾಡಲಾಗುತ್ತದೆ. ಇಲ್ಲವೇ ನೌಕೆ ಬಂದಾಗ ದೂರದಿಂದಲೂ ಸ್ಫೋಟ ನಡೆಸಬಹುದು.

ಹೋರ್ಮುಜ್‌ನಲ್ಲೇ ಇಂಥ ಕೃತ್ಯ

ಜಗತ್ತಿನ ಶೇ.20ರಷ್ಟು ಕಚ್ಚಾತೈಲ ಹೋರ್ಮುಜ್‌ ಜಲಸಂಧಿ ಮೂಲಕವೇ ಸಾಗುತ್ತದೆ. ಮಧ್ಯಪ್ರಾಚ್ಯ ಯುದ್ಧದ ಬಳಿಕ ಈ ಮಾರ್ಗವನ್ನು ಇರಾನ್‌ ಮುಚ್ಚಿದೆ. ಆದರೆ ಇಲ್ಲಿ ತೈಲ ಸಾಗಣೆಗೆ ಅಮೆರಿಕ ಪಟ್ಟು ಹಿಡಿದಿದೆ. ಹೀಗಾಗಿ ಅಲ್ಲಿ ಅಮೆರಿಕ ಅಥವಾ ಅಮೆರಿಕ ನಂಟಿನ ಹಡಗು ಸಂಚರಿಸಿದರೆ ಸ್ಫೋಟಕ್ಕೆ ಸಂಚು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗೂಗಲ್‌, ಮೈಕ್ರೋಸಾಫ್ಟ್‌ ನಮ್ಮ ಮುಂದಿನ ದಾಳಿ ಗುರಿ : ಇರಾನ್‌!
ಅಮೆರಿಕಾದಲ್ಲಿ ತೈಲ ಸಂಸ್ಕರಣಾಗಾರ ಸ್ಥಾಪಿಸಲಿರುವ ರಿಲಯನ್ಸ್ : ಇದು US ಇತಿಹಾಸದಲ್ಲೇ ಅತಿದೊಡ್ಡ ಒಪ್ಪಂದ ಎಂದ ಟ್ರಂಪ್