
ಉದ್ಯೋಗ ಗಿಟ್ಟಿಸಿಕೊಳ್ಳುವುದು ಈಗಿನ ಕಾಲದಲ್ಲಿ ಸುಲಭದ ಮಾತಲ್ಲ. ಯಾವುದೇ ಉದ್ಯೋಗಕ್ಕೂ ಪೈಪೋಟಿ ಇದ್ದೇ ಇರುತ್ತೆ. ಒಂದು ಹುದ್ದೆ ಖಾಲಿ ಇದ್ದರೆ ಕನಿಷ್ಠ 100 ಮಂದಿ ಅರ್ಜಿ ಹಾಕಿರುತ್ತಾರೆ. ಹೀಗಾಗಿ ಪ್ರತಿಭೆ, ಕೌಶಲ್ಯ, ಭಾಷೆ, ಸಂವಹನ, ಉಡುಗೆ ತೊಡುಗೆ, ರೆಸ್ಯೂಮ್ ಸೇರಿದಂತೆ ಅಡಿ ಮುಡಿವರೆಗೂ ಎಲ್ಲವೂ ಪಕ್ಕಾ ಆಗಿರಬೇಕು. ಸಂದರ್ಶನದಲ್ಲಿ ಎದುರಾಗುವ ಗೂಗ್ಲಿ ಪ್ರಶ್ನೆಗಳನ್ನು ಸಮರ್ಥವಾಗಿ ಎದುರಿಸಿದರೆ ಉದ್ಯೋಗ ಒಲಿಯಲಿದೆ. ಆದರೆ ಇದ್ಯಾವುದು ಇಲ್ಲದ ಮಹಿಳೆ ಉದ್ಯೋಗ ಗಿಟ್ಟಿಸಿದ ಕತೆಯನ್ನು ಕಂಪನಿ ಸಂಸ್ಥಾಪಕರೇ ಬಹಿರಂಗಪಡಿಸಿದ್ದಾರೆ. ಆಕೆಯ ಬಳಿ ಸರಿಯಾದ ಸಿವಿ ಇರಿಲ್ಲ, ಅನುಭವಂತೂ ಇರಲೇ ಇಲ್ಲ. ಆದರೂ ಕಂಪನಿ ಬಾಸ್ ಕರೆದು ಉದ್ಯೋಗ ನೀಡಿದ್ದಾರೆ.
ಇಂಗ್ಲೀಷ್ ಉದ್ಯಮಿ ಸ್ಟೀವನ್ ಬ್ರಾಟ್‌ಲೆಟ್ ತಾವು ಇದುವರೆಗೆ ಮಾಡಿದ ಉದ್ಯೋಗ ನೇಮಕದಲ್ಲಿ ಅತ್ಯುತ್ತಮ ಎಂದರೆ ಏನೂ ಗೊತ್ತಿಲ್ಲದ ಮಹಿಳೆಯ ನೇಮಕ ಎಂದಿದ್ದಾರೆ. ಈ ಕುರಿತು ತಮ್ಮ ಲಿಂಕ್ಡ್ಇನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸ್ಟೀವನ್ ಬ್ರಾಟ್‌ಲೆಟ್ ಕಂಪನಿಯಲ್ಲಿನ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಿದ್ದರು. ಹಲವು ರೆಸ್ಯೂಮ್ ಕಳುಹಿಸಿ ಸಂದರ್ಶನಕ್ಕೆ ಹಾಜರಾಗಿದ್ದರು. ಹಲವರು ಈ ಹುದ್ದೆ ಪಡೆಯಲು ಆಗಮಿಸಿದ್ದರು. ಸಂದರ್ಶನಕ್ಕಾಗಿ ಹಲವರು ಭಾರಿ ತಯಾರಿ ನಡೆಸಿ ತಮ್ಮ ಕ್ಷೇತ್ರ ಅಲ್ಲದಿದ್ದರೂ ಹೆಚ್ಚಿನ ಮಾಹಿತಿ ಸಂಗ್ರಹಿಸಿ, ಅಧ್ಯಯ ಮಾಡಿ ಆಗಮಿಸಿದ್ದರು. ಇದರ ನಡುವೆ ಮಹಿಳೆಯೊಬ್ಬರು ಎರಡು ಲೈನ್ ಇರುವ ರೆಸ್ಯೂಮ್ ಹಿಡಿದು ಆಗಮಿಸಿದ್ದರು.
ಹಲವರು ಸಂದರ್ಶನ ನಡೆಸಲಾಗಿದೆ. ಈ ಪೈಕಿ ಕೇವಲ 2 ಲೈನ್ ರೆಸ್ಯೂಮ್ ಇರುವ ಮಹಿಳೆ ಕೂಡ ಸಂದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ರೆಸ್ಯೂಮ್ ನೋಡಿದರೆ ಅಲ್ಲೊಂದು ಇಲ್ಲೊಂದು ವಾಕ್ಯಗಳು ಬಿಟ್ಟರೆ ಬೇರೇನು ಇಲ್ಲ. ಶೈಕ್ಷಣಿಕ ಅರ್ಹತೆ , ಹೆಸರು ವಿಳಾಸ, ಹಾಬಿ ಬಿಟ್ಟರೆ ರೆಸ್ಯೂಮ್‌ನಲ್ಲಿ ಬೇರೇನೂ ಇಲ್ಲ. ಸರಿ ಅನುಭವ ಏನು ಎಂದು ಕೇಳಿದರೂ ನಯಾ ಪೈಸೆ ಅನುಭವವೂ ಇಲ್ಲ. ಸರಿ ಹುದ್ದೆ ಅದರ ಕೆಲಸ ಕಾರ್ಯಗಳು, ಜವಾಬ್ದಾರಿಗಳ ಕುರಿತು ಕೇಳಿದರೂ ಅದೂ ಗೊತ್ತಿಲ್ಲ ಎಂಬ ಗೊತ್ತ ಬಂದಿತ್ತು. ಕೆಲ ಪ್ರಶ್ನೆಗಳಿಗೆ ಮಾತ್ರ ಮಹಿಳೆ ಉತ್ತರ ನೀಡಿದ್ದರು. ಇನ್ನುಳಿದ ಪ್ರಶ್ನೆಗಳಿಗೆ ತನಗೆ ಗೊತ್ತಿಲ್ಲ ಎಂದಿದ್ದಾಳೆ. ಸಂದರ್ಶನ ಮುಗಿದ ಬಳಿಕ ತಾವು ನಿರೀಕ್ಷಿದ ಅಭ್ಯರ್ಥಿಗಳು ಸಿಗಲೇ ಇಲ್ಲ. ಮಹಿಳೆ ಸೇರಿದಂತೆ ಬಹುತೇಕರು ರಿಜೆಕ್ಟ್ ಆಗಿದ್ದರೆ, ಕೆಲವೇ ಕೆಲವು ಮಂದಿಯನ್ನು ಗುರುತಿಸಿ ಕಾದು ನೋಡುವ ತಂತ್ರಕ್ಕೆ ಬಂದಿದ್ದರು.
ಸಂದರ್ಶನ ಮುಗಿಸಿ ಹೊರನಡೆದ ಮಹಿಳೆ ಮರು ದಿನ ಇಮೇಲ್ ಕಳುಹಿಸಿದ್ದಾರೆ. ಇದು ಧನ್ಯವಾದದ ಇಮೇಲ್ ಆಗಿತ್ತು. ತನಗೆ ಸಂದರ್ಶನದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟದ್ದಕ್ಕೆ ಕಂಪನಿಯ ಹೆಚ್ಆರ್, ತನ್ನ ಸಂದರ್ಶನಕ್ಕೆ ಅಮೂಲ್ಯ ಸಮಯವನ್ನು ಮೀಸಲಿಟ್ಟ ಕಂಪನಿ ಬಾಸ್ ಹಾಗೂ ತನಗೆ ಕಂಪನಿ ಬಳಿ ಬಂದಾಗ ಕಟ್ಟಡದ ದಾರಿ ತೋರಿಸಿ, ಸಂದರ್ಶನ ನಡೆಯುವ ಸ್ಥಳಧ ಮಾಹಿತಿ ನೀಡಿ, ಮಾರ್ಗದರ್ಶನ ನೀಡಿದ ಸೆಕ್ಯೂರ್ಟಿ ಗಾರ್ಡ್‌ಗೂ ಮಹಿಳೆ ಧನ್ಯವಾದ ಹೇಳಿದ್ದಾಳೆ. ಸೆಕ್ಯೂರಿಟಿ ಗಾರ್ಡ್ ಹೆಸರು ಉಲ್ಲೇಖಿಸಿ ಧನ್ಯವಾದ ತಿಳಿಸಿದ್ದರು.
ಮಹಿಳೆಯ ಈ ನಡೆಯಿಂದ ಕಂಪನಿ ಬಾಸ್ ಇಂಪ್ರೆಸ್ ಆಗಿದ್ದರು. ಈಕೆಗೆ ಏನೂ ಗೊತ್ತಿಲ್ಲ. ಆದರೆ ಕಲಿಯುವ ಉತ್ಸಾಹವಿದೆ. ಇಲ್ಲಿನ ಉದ್ಯೋಗಿಗಳಿಗೆ ಸೆಕ್ಯೂರಿಟಿ ಗಾರ್ಡ್ ಹೆಸರು ಗೊತ್ತಿಲ್ಲ. ಆದರೆ ಆಕೆಗೆ ನೆರವು ನೀಡಿದ ಸೆಕ್ಯೂರಿಟಿ ಗಾರ್ಡ್ ಹೆಸರೂ ಉಲ್ಲೇಖಿಸಿ ಕಂಪನಿಗೂ ಧನ್ಯವಾದ ಹೇಳಿದ್ದಾಳೆ. ಜವಾಬ್ದಾರಿ ನೀಡಿದ ಈಕೆ ನಿರ್ವಹಿಸುತ್ತಾಳೆ ಎಂದು ತಕ್ಷಣವೇ ಮಹಿಳೆಯನ್ನು ಉದ್ಯೋಗಕ್ಕೆ ಆಯ್ಕೆ ಮಾಡಲಾಗಿತ್ತು. ಈ ಕುರಿತು ಸ್ಟೀವನ್ ಹೇಳಿಕೊಂಡಿದ್ದಾರೆ. ಈಗ ಅದೇ ಮಹಿಳೆ ಕಂಪನಿಯ ಬೆಸ್ಟ್ ಎಂಪ್ಲಾಯ್ ಎಂದಿದ್ದಾರೆ. ನನ್ನ ಅತ್ಯುತ್ತಮ ಉದ್ಯೋಗ ನೇಮಕಾತಿ ಇದು ಎಂದು ಸ್ಟೀವನ್ ಹೇಳಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ