ಲೈವ್ ಚಾಟ್ ವೇಳೆಯೇ ಅಮೆರಿಕ ಪತ್ರಕರ್ತ ಅರೆಸ್ಟ್!| ಮಿನ್ನೆಸೋಟಾದಲ್ಲಿನ ಹಿಂಸಾಚಾರ ಕುರಿತು ಪ್ರತ್ಯಕ್ಷ ವರದಿ ಮಾಡುತ್ತಿದ್ದ ಟೀವಿ ಪತ್ರಕರ್ತ
ನ್ಯೂಯಾರ್ಕ್(ಮೇ.30): ಮಿನ್ನೆಸೋಟಾದಲ್ಲಿನ ಹಿಂಸಾಚಾರ ಕುರಿತು ಪ್ರತ್ಯಕ್ಷ ವರದಿ ಮಾಡುತ್ತಿದ್ದ ಟೀವಿ ಪತ್ರಕರ್ತನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಮಿನ್ನೆಸೋಟಾದಲ್ಲಿ ಕಪ್ಪು ವರ್ಣೀಯ ವ್ಯಕ್ತಿಯ ಕುತ್ತಿಗೆ ಮೇಲೆ ಪೊಲೀಸ್ ಅಧಿಕಾರಿ ಮಂಡಿಯೂರಿ ಕುಳಿತಿದ್ದ. ಆ ವ್ಯಕ್ತಿ ಸಾವನ್ನಪ್ಪಿದ್ದ. ಇದರಿಂದಾಗಿ ಹಿಂಸಾಚಾರ ಭುಗಿಲೆದ್ದಿತ್ತು. ಈ ಕುರಿತು ಸಿಎನ್‌ಎನ್ ವಾಹಿನಿಯ ವರದಿಗಾರ ಓಮರ್ ಜಿಮೆನೆಜ್ ಪ್ರತ್ಯಕ್ಷ ವರದಿ ನೀಡುತ್ತಿದ್ದರು.
CNN journalist Omar Jimenez has just been arrested live on air. His whole camera crew arrested too. America is broken. pic.twitter.com/BU0DjeH8dR
— Rudi Kinsella (@RudiKinsella)ಆಗ ಪೊಲೀಸರು ಅವರ ಕೈಗೆ ಬೇಡಿ ತೊಡಿಸಿ ಕರೆದೊಯ್ದರು. ಈ ದೃಶ್ಯ ಕೂಡ ಪ್ರಸಾರವಾಯಿತು. ಕೆಲ ತಾಸಿನ ಬಳಿಕ ಜಿಮೆನೆಜ್ ಅವರನ್ನು ಬಿಡುಗಡೆ ಮಾಡಲಾಗಿದೆ.