ವುಹಾನ್ ಲ್ಯಾಬ್‌ನಿಂದಲೇ ಬಂತು ಕೊರೋನಾ, ವಿಜ್ಞಾನಿಗಳ ಸಂಶೋಧನಾ ವರದಿಗೆ ಬೆತ್ತಲಾಯ್ತು ಚೀನಾ!

By Suvarna NewsFirst Published Apr 13, 2020, 3:46 PM IST
Highlights

ಚೀನಾದಿಂದ ಆರಂಭವಾದ ಕೊರೋನಾ ಇದೀಗ ಭಾರತ ಸೇರಿದಂತೆ ಅಮೆರಿಕಾ, ಇಟೆಲಿಗಳಲ್ಲಿ ತಾಂಡವವಾಡುತ್ತಿದೆ. ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಆದರೆ ಕೊರೋನಾ ಜನಕ ಚೀನಾ, ವುಹಾನ್ ವೈರಸ್ ಎಂದರೆ ಚೀನಾಗೆ ಕೆಂಡದಂತೆ ಕೋಪ. ಇಷ್ಟೇ ಅಲ್ಲ ಕೊರೋನಾ ಹುಟ್ಟಿದ್ದು ವುಹಾನ್ ಅಥವಾ ಚೀನಾದಲ್ಲಿ ಅಲ್ಲ ಎಂದು ಹೇಳುತ್ತಲೇ ಬರುತ್ತಿದೆ. ಇದೀಗ ಚೀನಾ ವಿಜ್ಞಾನಿಗಳ ಸಂಶೋದನಾ ವರದಿ ಬಹಿರಂಗವಾಗಿದ್ದು, ಸ್ಫೋಟಕ ಮಾಹಿತಿ ಈ ವರದಿಯಲ್ಲಿದೆ. ಈ ವರದಿಯಲ್ಲಿ ಪ್ರಮುಖ ಅಂಶಗಳ ವಿವರ ಇಲ್ಲಿದೆ.

ವುಹಾನ್(ಏ.12): ಚೀನಾ ವೈರಸ್, ವುಹಾನ್ ವೈರಸ್ ಅನ್ನೋದು ಕೊರೋನಾಗೆ ಇರುವ ಮತ್ತೊಂದು ಹೆಸರು. ಕಾರಣ ಕೊರೋನಾ ಮೊದಲ ಬಾರಿಗೆ ಮರಣಮೃದಂಗ ಬಾರಿಸಿದ್ದು ಚೀನಾ ವುಹಾನ್‌ನಲ್ಲಿ. ಹೀಗಾಗಿ ಅಮೆರಿಕಾ ಚೀನಾ ವೈರಸ್ ಎಂದು ಕರೆದಿತ್ತು. ಇದಕ್ಕೆ ಚೀನಾ ತಿರುಗೇಟು ನೀಡಿತ್ತು. ಇಷ್ಟೇ ಅಲ್ಲ ಯಾರೂ ಕೂಡ ಚೀನಾ ವೈರಸ್ ಹೇಳುವಂತಿಲ್ಲ ಎಂದಿತ್ತು. ಇದೀಗ ಚೀನಾ ವಿಜ್ಞಾನಿಗಳ ಸಂಶೋದನಾ ವರದಿ ಬಹಿರಂಗವಾಗಿದ್ದು, ಈ ವರದಿಯಲ್ಲಿ ಕೊರೋನಾ ಹುಟ್ಟು ವುಹಾನ್ ಬಯೋಲ್ಯಾಬ್‌ನಿಂದಲೇ ಆಗಿದೆ ಅನ್ನೋ ಸ್ಫೋಟಕ ಮಾಹಿತಿಯನ್ನು ಉಲ್ಲೇಖಿಸಿದ್ದಾರೆ.

ಕೊರೋನಾ ವೈರಸ್ ಮೂಲ ವುಹಾನ್ ಅಲ್ಲವೆಂದ ಚೀನಾ!.

ದಕ್ಷಿಣ ಚೀನಾದ ಟೆಕ್ನಾಲಜಿ ವಿಶ್ವವಿದ್ಯಾಲಯದಲ್ಲಿನ ವಿಜ್ಞಾನಿಗಳಾದ ಬೊಟಾವೋ ಶಿಯೋ ಹಾಗೂ ಲಿಯೋ ಶಿಯೋ ಕಳೆದ 3 ತಿಂಗಳಲ್ಲಿ ಸಂಶೋದನೆ ನಡೆಸಿದ್ದಾರೆ. ಬಳಿಕ ಕೊರೋನಾ ವೈರಸ್ ಹುಟ್ಟಿನ ಸಾಧ್ಯತೆ ಅನ್ನೋ ಸಂಶೋದನಾ ವರದಿಯನ್ನು ಸಲ್ಲಿಸಿದ್ದಾರೆ. ವುಹಾನ್‌ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದ್ದ ಬಾವಲಿಗಳಿಂದ ಕೊರೋನಾ ವೈರಸ್ ಬಂದಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಇದು ಸತ್ಯವಲ್ಲ ಎಂದು ಸಂಶೋದನಾ ವರದಿಯಲ್ಲಿ ಹೇಳಿದ್ದಾರೆ.

ಕೊರೋನಾ ವೈರಸ್ ಹುಟ್ಟಿಗೆ ವುಹಾನ್ ಮಾರುಕಟ್ಟೆ ಕಾರಣವಲ್ಲ ಎಂದು ಸ್ಪಷ್ಟವಾಗಿ ವಿಜ್ಞಾನಿಗಳು ಹೇಳಿದ್ದಾರೆ. ಬೊಟಾವೋ ಶಿಯೋ ಹಾಗೂ ಲಿಯೋ ಶಿಯೋ ಸಂಶೋದನೆಗಾಗಿ 90 ಕೀಲೋಮೀಟರ್ ವರೆಗೆ ವಿಸ್ತಾರವಾಗಿರುವ ವುಹಾನ್ ಕಾಲೋನಿಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ವುಹಾನ್‌ನಲ್ಲಿನ ಪ್ರತಿ ಆಸ್ಪತ್ರೆ, ಕ್ಲಿನಿಕ್ ವರದಿಯನ್ನು ತರಿಸಿಕೊಂಡಿದ್ದಾರೆ. ಇನ್ನು ವುಹಾನ್‌ನ 59 ಮಂದಿಯನ್ನು ಸಂದರ್ಶನ ಮಾಡಿದ್ದಾರೆ. ಇಷ್ಟೇ ಅಲ್ಲ ವುಹಾನ್ ಮಾರುಕಟ್ಟೆಯಲ್ಲಿ ಬಾವಲಿ ಮಾರಾಟವಾಗಿಲ್ಲ ಅನ್ನೋದು ಕೂಡ ದೃಢವಾಗಿದೆ.

WHO ವಿರುದ್ಧ ತಿರುಗಿ ಬಿದ್ದ ಅಮೆರಿಕ, ಗಂಭೀರ ಆರೋಪ!.

ವುಹಾನ್‌ನಲ್ಲಿರುವ ಪ್ರಖ್ಯಾತ ಹಾಗೂ ಅತೀ ದೊಡ್ಡ ಪ್ರಯೋಗಾಲಯವಾದ ವಿರೊಲಜಿ ಪ್ರಯೋಗಾಲದಯಲ್ಲಿ ಬಾವಲಿ ಕುರಿತು ಸಂಶೋದನೆ ನಡೆಸಲಾಗುತ್ತಿತ್ತು. ಇದಕ್ಕಾಗಿ ಡೀಸೀಸ್ ಕಂಟ್ರೋಲ್ ಆ್ಯಂಡ್ ಪ್ರವೆಂಶನ್ ಸೆಂಟರ್ ಆಫ್ ವುಹಾನ್‌ನಲ್ಲಿ(WHCDC) ಒಟ್ಟು 605 ಬಾವಲಿಗಳನ್ನು ಅಧ್ಯಯನಕ್ಕಾಗಿ ಬಳಸಲಾಗಿದೆ. ಇದರಲ್ಲಿ 155 ಬಾವಲಿಗಳನ್ನು ಚೀನಾದ ಹುಬೈ ಪ್ರಾಂತ್ಯದಿಂದ ಹಿಡಿದು ತರಲಾಗಿತ್ತು, ಇನ್ನು 450 ಬಾವಲಿಗಳನ್ನು ಝೆಜಿಯಾಂಗ್ ಪ್ರಾಂತ್ಯದಿಂದ ಹಿಡಿದು ತರಲಾಗಿತ್ತು.

WHCDC ಸೆಂಟರ್‌ನಲ್ಲಿಅಧ್ಯನದ ವೇಳೆ ಬಾವಲಿಗಳ ರಕ್ತದ ಮಾದರಿ ಹಾಗೂ ಮಲಮೂತ್ರ ಮಾದರಿಯನ್ನು ಸಂಗ್ರಹಿಸಿ ಅಧ್ಯನ ನಡೆಸಲಾಗಿದೆ. ಸಂಗ್ರಹಿಸಲಾದ ಸಾರ್ಸ್‌ನಿಂದ ಹೊರ ರೀತಿಯ ವೈರಾಣು ಸಂಶೋಧಿಸಿದ್ದಾರೆ. ಬಳಿಕ ಈ ವೈರಾಣುವನ್ನು ಹಂದಿಗಳ ದೇಹಕ್ಕೆ ಇಂಜೆಕ್ಟ್ ಮಾಡಲಾಗಿದೆ. ಸಂಶೋದನೆ ಬಳಿಕ ಈ ಹಂದಿ ಹಾಗೂ ಬಾವಲಿಗಳನ್ನು ವುಹಾನ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿದೆ. 

ವೈರಸ್ ತಗುಲಿದ ಹಂದಿಗಳನ್ನು, ಬಾವಲಿಗಳನ್ನು ಖರೀದಿಸಿದ ವುಹಾನ್ ಜನ ಕೊರೋನಾ ಸೋಂಕಿನಿಂದ ಬಳಲಿದ್ದಾರೆ. ಹಲವರು ಆಸುನೀಗಿದ್ದಾರೆ. ಇತ್ತ 
 ಬಾವಲಿಗಳ ಅಧ್ಯನದಲ್ಲಿ ಸಂಶೋಧಕರಿಗೆ ಕೊರೋನಾ ಸೋಂಕು ತಗಲುಲಿದೆ. ಆದರೆ ಸೋಂಕಿತರು ವುಹಾನ್ WHCDC ಸೆಂಟರ್, ವಿರೊಲಜಿ ಸೆಂಟರ್ ಸೇರಿದಂತೆ ಹಲವು ಕಡೆ ಸಂಶೋದನೆಗಾಗಿ ತಿರುಗಾಡಿದ್ದಾರೆ. ವುಹಾನ್ ಮಾರುಕಟ್ಟೆ ಸೇರಿದಂತೆ ಸೋಂಕಿತರು ಸಂಪರ್ಕಿಸಿದ ವ್ಯಕ್ತಿಗಳಿಗೆ ಕೊರೋನಾ ಕಾಣಿಸಿಕೊಂಡಿದೆ. ಇದು ವೈರಸ್ ಹುಟ್ಟಿನ ಮೂಲ ಎಂದು ಬೊಟಾವೋ ಶಿಯೋ ಹಾಗೂ ಲಿಯೋ ಶಿಯೋ ತಮ್ಮ ಸಂಶೋದನಾ ವರದಿಯಲ್ಲಿ ಹೇಳಿದ್ದಾರೆ.

ಇದೀಗ ಇದೇ ಕೊರೋನಾ ಎಲ್ಲಾ ದೇಶಗಳನ್ನು ಬೆಚ್ಚಿ ಬೀಳಿಸಿದೆ. ಭಾರತದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೆೇ ಹೆಚ್ಚಾಗುತ್ತಿದೆ. ಇನ್ನು ಕರ್ನಾಟಕದಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಹೇರಲಾಗಿದ್ದರು. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.
 

click me!