ಕೊರೋನಾ ಪೀಡಿತ ವುಹಾನ್‌ನಲ್ಲಿ ಈಗ ಮದುವೆಗೆ ಭಾರೀ ಬೇಡಿಕೆ!

By Suvarna NewsFirst Published Apr 13, 2020, 1:11 PM IST
Highlights

ಕೊರೋನಾ ಪೀಡಿತ ವುಹಾನ್‌ನಲ್ಲಿ ಈಗ ಮದುವೆಗೆ ಭಾರೀ ಬೇಡಿಕೆ!|  ಹಣ ಪಾವತಿಸುವ ಸ್ಥಳೀಯ ಪೇಮೆಂಟ್‌ ಆ್ಯಪ್‌ ಕೆಲ ಹೊತ್ತು ಕ್ರ್ಯಾಶ್

ವುಹಾನ್(ಏ.13): ಕೊರೋನಾ ವೈರಸ್‌ನ ಮೂಲ ಸ್ಥಾನ ಎನಿಸಿರುವ ಚೀನಾದ ವುಹಾನ್‌ ಪ್ರಾಂತ್ಯದಲ್ಲಿ 11 ವಾರಗಳ ಬಳಿಕ ಲಾಕ್‌ಡೌನ್‌ಗೆ ಹಿಂಪಡೆದಿದ್ದರಿಂದ ಮದುವೆ ಮಾಡಿಕೊಳ್ಳಲು ನವ ಜೋಡಿಗಳು ಮುಗಿಬಿದ್ದಿದ್ದಾರೆ.

ಮದವೆಗೆ ವುಹಾನ್‌ನಲ್ಲಿ ಎಷ್ಟುಬೇಡಿಕೆ ಇದೆಯೆಂದರೆ ಸಾವಿರಾರು ಮಂದಿ ಒಮ್ಮೆಗೇ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ಮದುವೆಗೆ ಹೆಸರು ನೋಂದಾಯಿಸಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದವವರ ಸಂಖ್ಯೆ ಶೇ.300ರಷ್ಟುಏರಿಕೆ ಆಗಿದೆ. ಹೀಗಾಗಿ ಈ ಅರ್ಜಿಗಳಿಗೆ ಆನ್‌ಲೈನ್‌ ಮೂಲಕ ಹಣ ಪಾವತಿಸುವ ಸ್ಥಳೀಯ ಪೇಮೆಂಟ್‌ ಆ್ಯಪ್‌ ಕೆಲ ಹೊತ್ತು ಕ್ರ್ಯಾಶ್‌ ಆಗಿತ್ತು.

ನನ್ನ ಮದುವೆ ಬಗ್ಗೆ ಗಾಸಿಪ್ ಮಾಡುವ ಬದಲು ಕೋವಿಡ್ 19 ಬಗ್ಗೆ ಯೋಚಿಸಿ: ಕೀರ್ತಿ ಫುಲ್ ಗರಂ

ಕೊರೋನಾ ವೈರಸ್‌ ಕಾರಣ ಫೆಬ್ರವರಿ ಮತ್ತು ಮಾಚ್‌ರ್‍ನಲ್ಲಿ ಸಲ್ಲಿಸಿದ್ದ ಮದುವೆ ನೋಂದಣಿ ಅರ್ಜಿಗಳು ಮುಂದೂಡಿಕೆ ಆಗಿದ್ದರಿಂದ ಈ ಸಮಸ್ಯೆ ಉಂಟಾಗಿದೆಯಂತೆ.

click me!