ಯುದ್ಧಕ್ಕೆ ಸಜ್ಜಾಗಿರಿ: ಯೋಧರಿಗೆ ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ಕರೆ!

By Kannadaprabha News  |  First Published Oct 15, 2020, 7:49 AM IST

ಯುದ್ಧಕ್ಕೆ ಸಜ್ಜಾಗಿರಿ: ಯೋಧರಿಗೆ ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ಕರೆ| ಅಲರ್ಟ್‌ ಆಗಿರಿ, ವಿಶ್ವಾಸಾರ್ಹತೆ ಇರಲಿ| ಗಡಿ ಸಂಘರ್ಷದ ಸಂದರ್ಭದಲ್ಲೇ ಹೇಳಿಕೆ


ಹಾಂಕಾಂಗ್(ಅ.15)‌: ಗಡಿಯಲ್ಲಿ ಭಾರತದ ಜೊತೆ ಮತ್ತು ಸಮುದ್ರ ವಲಯದಲ್ಲಿ ಅಮೆರಿಕ ಜೊತೆ ಕಳೆದ ಹಲವು ತಿಂಗಳಿನಿಂದ ಸಮರ ರೀತಿಯ ಸಂಘರ್ಷ ಸನ್ನಿವೇಶ ಸೃಷ್ಟಿಯಾಗಿರುವಾಗಲೇ, ಯೋಧರು ತಮ್ಮ ಎಲ್ಲ ಗಮನ ಹಾಗೂ ಶಕ್ತಿಯನ್ನು ಯುದ್ಧಕ್ಕೆ ಸಜ್ಜಾಗುವುದಕ್ಕೆ ಬಳಸಬೇಕು ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಕರೆ ನೀಡಿರುವುದು ಸಂಚಲನಕ್ಕೆ ಕಾರಣವಾಗಿದೆ.

ಅತ್ಯುನ್ನತ ಮಟ್ಟದ ಕಟ್ಟೆಚ್ಚರದಿಂದ ಇರಬೇಕು. ಪರಿಪೂರ್ಣ ನಿಷ್ಠರಾಗಿ, ಪರಿಶುದ್ಧರಾಗಿ, ವಿಶ್ವಾಸಾರ್ಹರಾಗಿ ಇರಬೇಕು ಎಂದು ಅವರು ಚೀನಾ ಯೋಧರನ್ನು ಹುರಿದುಂಬಿಸಿದ್ದಾರೆ. ಭಾರತ ಜತೆಗಿನ ಗಡಿ ಸಂಘರ್ಷವನ್ನು ಗಮನದಲ್ಲಿಟ್ಟುಕೊಂಡು ಈ ಮಾತನ್ನು ಅವರು ಆಡಿದ್ದಾರೋ? ಅಥವಾ ತೈವಾನ್‌ ಜತೆಗಿನ ತಿಕ್ಕಾಟ ಹಾಗೂ ಕೊರೋನಾ ವೈರಸ್‌ ವಿಷಯಕ್ಕೆ ಅಮೆರಿಕ ಕೆಂಡಕಾರುತ್ತಿರುವ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಿದ್ದಾರೋ ಎಂಬುದು ಗೊತ್ತಾಗಿಲ್ಲ.

Latest Videos

ವಿದೇಶಿ ಹೂಡಿಕೆ ಸೆಳೆಯಲು 1980ರಲ್ಲಿ ಸ್ಥಾಪಿಸಲಾದ, ಚೀನಾದ ಆರ್ಥಿಕತೆ ವಿಶ್ವದಲ್ಲೇ ಎರಡನೇ ಸ್ಥಾನಕ್ಕೇರಲು ಪ್ರಮುಖ ಪಾತ್ರ ವಹಿಸಿದ ಶೆಂಝನ್‌ ವಿಶೇಷ ಆರ್ಥಿಕ ವಲಯದ 40ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಜಿನ್‌ಪಿಂಗ್‌ ಯುದ್ಧದ ಮಾತುಗಳನ್ನು ಆಡಿದ್ದಾರೆ.

click me!