Viral: 10 ನಿಮಿಷದಲ್ಲಿ 1.5 ಲೀಟರ್ ಕೋಕ್ ಕುಡಿದ 22 ವರ್ಷದ ಯುವಕನಿಗೆ ಆಗಿದ್ದೇನು?

Published : Sep 30, 2026, 09:38 AM IST
China

ಸಾರಾಂಶ

22 ವರ್ಷದ ಯುವಕನೊಬ್ಬ ಕೇವಲ 10 ನಿಮಿಷದಲ್ಲಿ 1.5 ಲೀಟರ್ ಕೋಕಾ ಕೋಲಾ ಕುಡಿದು ಸಾವನ್ನಪ್ಪಿದ ಹಳೆಯ ಘಟನೆ ವೈರಲ್ ಆಗುತ್ತಿದೆ. ಅತಿ ವೇಗವಾಗಿ ತಂಪು ಪಾನೀಯ ಕುಡಿದಿದ್ದರಿಂದ ಆತನ ಕರುಳು ಮತ್ತು ಲಿವರ್‌ನಲ್ಲಿ ಗ್ಯಾಸ್ ತುಂಬಿಕೊಂಡು ಈ ದುರಂತ ಸಂಭವಿಸಿದೆ.

ಬೀಜಿಂಗ್: 2021ರಲ್ಲಿ ಚೀನಾದ ಬೀಜಿಂಗ್‌ನಲ್ಲಿ ನಡೆದ ಒಂದು ಹಳೆಯ ಘಟನೆ ಈಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 22 ವರ್ಷದ ಯುವಕನೊಬ್ಬ ಕೇವಲ 10 ನಿಮಿಷದಲ್ಲಿ 1.5 ಲೀಟರ್ ಕೋಕಾ ಕೋಲಾ ಕುಡಿದಿದ್ದ. ಇದಾದ ಕೆಲವು ಗಂಟೆಗಳಲ್ಲೇ ಆತನಿಗೆ ವಿಪರೀತ ಹೊಟ್ಟೆನೋವು ಮತ್ತು ಹೊಟ್ಟೆ ಉಬ್ಬರ ಶುರುವಾಯಿತು. ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಮಾಡಿದಾಗ, ಆತನ ಕರುಳಿನ ಗೋಡೆ ಮತ್ತು ಲಿವರ್‌ಗೆ ರಕ್ತ ಪೂರೈಸುವ ನಾಳದಲ್ಲಿ ಅಸಹಜವಾಗಿ ಗ್ಯಾಸ್ ತುಂಬಿಕೊಂಡಿರುವುದು ವೈದ್ಯರಿಗೆ ಕಂಡುಬಂತು. ಲಿವರ್‌ಗೆ ರಕ್ತಸಂಚಾರ ನಿಂತುಹೋಗಿ ಆತನ ಸ್ಥಿತಿ ಗಂಭೀರವಾಯಿತು. ವೈದ್ಯರು ಚಿಕಿತ್ಸೆ ನೀಡಿದರೂ ಆತ ಬದುಕುಳಿಯಲಿಲ್ಲ. ಆದರೆ, ಕೇವಲ ಕೋಕಾ ಕೋಲಾ ಕುಡಿದಿದ್ದೇ ಈ ಸಾವಿಗೆ ಕಾರಣ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

ಈ ಪ್ರಕರಣದಲ್ಲಿ ವೈದ್ಯರನ್ನು ಅಚ್ಚರಿಗೊಳಿಸಿದ್ದು ಕರುಳು ಮತ್ತು ರಕ್ತನಾಳಗಳಲ್ಲಿ ತುಂಬಿಕೊಂಡಿದ್ದ ಗ್ಯಾಸ್. ಕಾರ್ಬೊನೇಟೆಡ್ ಪಾನೀಯವನ್ನು ಒಮ್ಮೆಲೇ ಅತಿ ವೇಗವಾಗಿ ಕುಡಿದಾಗ ಜೀರ್ಣಾಂಗ ವ್ಯವಸ್ಥೆಯಲ್ಲಿ ವಿಪರೀತ ಗ್ಯಾಸ್ ಉತ್ಪತ್ತಿಯಾಗುತ್ತದೆ. ಈ ಯುವಕನ ಕರುಳಿನ ಗೋಡೆ ಹಾಗೂ ರಕ್ತನಾಳಗಳಲ್ಲಿ ಇದೇ ರೀತಿ ಗ್ಯಾಸ್ ಸೇರಿಕೊಂಡಿತ್ತು.

ಲಿವರ್ ಅಂಗಾಂಶಗಳಿಗೆ ಆಮ್ಲಜನಕ ಪೂರೈಕೆ ಸ್ಥಗಿತ

ಇದರಿಂದ ಲಿವರ್‌ಗೆ ರಕ್ತ ಪೂರೈಕೆ ಸ್ಥಗಿತಗೊಂಡು 'ಹೆಪಾಟಿಕ್ ಇಸ್ಕೀಮಿಯಾ' (Hepatic ischemia) ಎಂಬ ಸ್ಥಿತಿ ಎದುರಾಯಿತು. ಅಂದರೆ ಲಿವರ್ ಅಂಗಾಂಶಗಳಿಗೆ ಆಮ್ಲಜನಕ ಮತ್ತು ರಕ್ತ ಸಿಗಲಿಲ್ಲ. ವೈದ್ಯರು ಗ್ಯಾಸ್ ಹೊರತೆಗೆದು ಲಿವರ್ ಉಳಿಸಲು ಪ್ರಯತ್ನಿಸಿದರೂ ಯುವಕ ಸಾವನ್ನಪ್ಪಿದ. ಇದೊಂದು ತೀರಾ ಅಪರೂಪದ ವೈದ್ಯಕೀಯ ಪ್ರಕರಣ. ಕೇವಲ ತಂಪು ಪಾನೀಯ ಕುಡಿದ ತಕ್ಷಣ ಹೀಗಾಗುತ್ತದೆ ಎಂದು ಹೇಳಲಾಗದು.

ತಂಪು ಪಾನೀಯ

ಈ ಘಟನೆ ನಡೆದಾಗಲೇ ವೈದ್ಯಕೀಯ ತಜ್ಞರ ನಡುವೆ ಹಲವು ಪ್ರಶ್ನೆಗಳು ಎದ್ದಿದ್ದವು. ಅತಿ ವೇಗವಾಗಿ ತಂಪು ಪಾನೀಯ ಕುಡಿದಿದ್ದಕ್ಕೂ ಆತನ ದೇಹದಲ್ಲಾದ ಬದಲಾವಣೆಗಳಿಗೂ ಸಂಬಂಧವಿದೆ ಎಂದು ವರದಿಗಳು ಹೇಳಿದರೂ, ಕೇವಲ ಕೋಕಾ ಕೋಲಾದಿಂದಲೇ ಆತ ಸತ್ತ ಎಂದು ಸಾಬೀತಾಗಿಲ್ಲ.

ಯುವಕನ ಸಾವಿಗೆ ಕಾರಣ ಏನು?

ಕರುಳಿನಲ್ಲಿ ಗ್ಯಾಸ್ ಉತ್ಪತ್ತಿಯಾಗಲು ಬ್ಯಾಕ್ಟೀರಿಯಾ ಸೋಂಕಿನಂತಹ ಬೇರೆ ಕಾರಣಗಳೂ ಇರಬಹುದು ಎಂದು ತಜ್ಞರು ಹೇಳುತ್ತಾರೆ. ಬಹುಶಃ ಆತನಿಗೆ ಮೊದಲೇ ಇದ್ದ ಆರೋಗ್ಯ ಸಮಸ್ಯೆಯನ್ನು ಈ ತಂಪು ಪಾನೀಯ ಮತ್ತಷ್ಟು ಹೆಚ್ಚು ಮಾಡಿರಬಹುದು. ಹಾಗಾಗಿ, ಕೋಕ್ ಕುಡಿದ ತಕ್ಷಣ ಪ್ರಾಣ ಹೋಗುತ್ತದೆ ಎಂದು ಭಯಪಡುವ ಅಗತ್ಯವಿಲ್ಲ. ಆದರೆ, ಯಾವುದೇ ಪಾನೀಯವನ್ನು ಅತಿ ವೇಗವಾಗಿ ಕುಡಿಯುವುದು ಒಳ್ಳೆಯ ಅಭ್ಯಾಸವಲ್ಲ.

ತೂಕ ಹೆಚ್ಚಳ, ಬೊಜ್ಜು, ಟೈಪ್ 2 ಮಧುಮೇಹ, ಹೃದಯದ ಕಾಯಿಲೆ

ಕೋಕಾ ಕೋಲಾದಂತಹ ಸಕ್ಕರೆ ಭರಿತ ತಂಪು ಪಾನೀಯಗಳನ್ನು ಪದೇ ಪದೇ ಕುಡಿಯುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ವೈದ್ಯಕೀಯ ಸಂಶೋಧನೆಗಳು ಹೇಳುತ್ತವೆ. ಅಮೆರಿಕದ ಸಿಡಿಸಿ (CDC) ವರದಿ ಪ್ರಕಾರ, ಇಂತಹ ಪಾನೀಯಗಳನ್ನು ಹೆಚ್ಚಾಗಿ ಕುಡಿದರೆ ತೂಕ ಹೆಚ್ಚಳ, ಬೊಜ್ಜು, ಟೈಪ್ 2 ಮಧುಮೇಹ, ಹೃದಯದ ಕಾಯಿಲೆ, ನಾನ್-ಆಲ್ಕೋಹಾಲಿಕ್ ಫ್ಯಾಟಿ ಲಿವರ್, ಹಲ್ಲು ಹುಳುಕಾಗುವುದು ಮತ್ತು ಕೀಲುನೋವಿನಂತಹ ಸಮಸ್ಯೆಗಳು ಬರುತ್ತವೆ. ಒಂದು ದಿನ ಕುಡಿದರೆ ಈ ಕಾಯಿಲೆಗಳು ಬರುವುದಿಲ್ಲ. ಆದರೆ, ನೀರು ಕುಡಿಯುವ ಬದಲು ದಿನಾ ಇಂತಹ ಪಾನೀಯಗಳನ್ನೇ ಕುಡಿಯುವ ಅಭ್ಯಾಸವಿದ್ದರೆ, ದೇಹದಲ್ಲಿ ಸಕ್ಕರೆ ಮತ್ತು ಕ್ಯಾಲೋರಿ ಪ್ರಮಾಣ ವಿಪರೀತವಾಗಿ ಹೆಚ್ಚಾಗುತ್ತದೆ.

ಇದನ್ನೂ ಓದಿ: ಏಯ್, ನಾನು PSI ಕಣೋ; ಚಿನ್ನ, ಹಣ ದೋಚಿ ಲವರ್‌ಗೆ ನೀಡ್ತಿದ್ದ ನಿವೇದಿತಾ ಗೌಡ ಅರೆಸ್ಟ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಗು ಅತ್ತಾಗ 'ಹನುಮಾನ್ ಚಾಲೀಸಾ' ಪಠಿಸ್ತಾರೆ ಈ ಚೀನೀ ಮಹಿಳೆ, ಅದರ ಪ್ರಯೋಜನ ವಿವರಿಸಿದ ತಾಯಿ
ಕೋವಿಡ್‌ನಲ್ಲಿ ಅಪ್ಪನ ಸ್ನೇಹಿತ ಕೊಟ್ಟ ಚೆಸ್‌ ಬೋರ್ಡ್‌‌ನಲ್ಲಿತ್ತು ಅದೃಷ್ಟ! 11ರ ಬಾಲೆಯೀಗ ಗ್ರ್ಯಾಂಡ್‌ಮಾಸ್ಟರ್