ಚೀನಾ ಕಂಪನಿಯಿಂದ 3ನೇ ಹಂತದ ಕೊರೋನಾ ಲಸಿಕೆ ಪ್ರಯೋಗ ಶುರು!

By Kannadaprabha NewsFirst Published Jul 18, 2020, 10:12 AM IST
Highlights

ಚೀನಾ ಕಂಪನಿಯಿಂದ 3ನೇ ಹಂತದ ಕೊರೋನಾ ಲಸಿಕೆ ಪ್ರಯೋಗ ಶುರು| ಚೀನಾದ ಸಿನೋಫಾಮ್‌ರ್‍ ಕಂಪನಿಯಿಂದ ಯುಎಇನಲ್ಲಿ ಪರೀಕ್ಷೆ| ನಿಷ್ಕ್ರಿಯ ವೈರಸ್‌ನಿಂದಾದ ಲಸಿಕೆಯ 3ನೇ ಹಂತ ಇದೇ ಮೊದಲು

ಬೀಜಿಂಗ್(ಜು.18): ಚೀನಾದ ಸರ್ಕಾರಿ ಸ್ವಾಮ್ಯದ ‘ಸಿನೋಫಾಮ್‌ರ್‍’ ಔಷಧ ತಯಾರಿಕಾ ಕಂಪನಿಯು ಸಂಯುಕ್ತ ಅರಬ್‌ ಸಂಸ್ಥಾನದಲ್ಲಿ (ಯುಎಇ) 3ನೇ ಹಂತದ ಕೊರೋನಾ ಲಸಿಕೆ ಪ್ರಯೋಗ ಆರಂಭಿಸಿದೆ. 15 ಸಾವಿರ ಜನರ ಮೇಲೆ ಲಸಿಕೆ ಪ್ರಯೋಗ ಶುರುವಾಗಿದೆ. ಅಬುಧಾಬಿ ಆರೋಗ್ಯ ಇಲಾಖೆ ಹಾಗೂ ಅಬುಧಾಬಿ ಮೂಲದ ‘ಗ್ರೂಪ್‌ 42’ ಎಂಬ ಕೃತಕ ಬುದ್ಧಿಮತ್ತೆ ಕಂಪನಿಯ ಸಹಯೋಗದಲ್ಲಿ ಪ್ರಯೋಗ ನಡೆಸಲಾಗುತ್ತಿದೆ.

ದೇಶೀಯ ಕೊರೋನಾ ಲಸಿಕೆ ಕೊವ್ಯಾಕ್ಸಿನ್‌ ಮಾನವ ಪ್ರಯೋಗ ಶುರು!

ನಿಷ್ಕಿ್ರಯಗೊಂಡ ವೈರಸ್‌ನಿಂದ ಸಿದ್ಧಗೊಂಡ ಲಸಿಕೆ ಇದಾಗಿದೆ. ಈ ಮಾದರಿಯಲ್ಲಿ ಅಭಿವೃದ್ಧಿಪಡಿಸಿದ ಲಸಿಕೆಯ 3ನೇ ಹಂತದ ಪ್ರಯೋಗ ವಿಶ್ವದಲ್ಲಿ ನಡೆಯುತ್ತಿರುವುದು ಇದೇ ಮೊದಲು ಎಂದು ಜಿ-42 ಹೆಲ್ತ್‌ಕೇರ್‌ ಸಿಇಒ ಆಶಿಷ್‌ ಕೋಶಿ ಹೇಳಿದ್ದಾರೆ. ಈಗಾಗಲೇ ಹಂತ-1 ಹಾಗೂ ಹಂತ-2ರ ಪ್ರಯೋಗಗಳು ಯಶಸ್ವಿಯಾಗಿವೆ. ಲಸಿಕಾ ಪ್ರಯೋಗಕ್ಕೆ ಒಳಪಟ್ಟಜನರಲ್ಲಿ ಶೇ.100ರಷ್ಟುಪ್ರತಿಕಾಯಗಳು ಸೃಷ್ಟಿಯಾಗಿವೆ.

ಎರಡು ಥರದ ಲಸಿಕೆಗಳನ್ನು ಸಿನೋಫಾಮ್‌ರ್‍ ಕಂಪನಿಯು ಈಗ ಪ್ರಯೋಗಕ್ಕೆ ಒಳಪಡಿಸುತ್ತಿದೆ. ಎರಡೂ ಲಸಿಕೆಗಳನ್ನು ಪರಸ್ಪರ 3 ವಾರದ ಅಂತರದಲ್ಲಿ ನೀಡಲಾಗುತ್ತದೆ ಹಾಗೂ ಲಸಿಕೆ ಪಡೆದವರ ಮೇಲೆ 1 ವರ್ಷ ನಿಗಾ ಇರಿಸಲಾಗುತ್ತದೆ. ಲಸಿಕಾ ಪ್ರಯೋಗಕ್ಕೆ ಒಳಪಡುವ ಸ್ವಯಂಸೇವಕರು 18ರಿಂದ 60 ವರ್ಷದವರು. ಇವರಿಗೆ ಮೊದಲು ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇರುವುದಿಲ್ಲ ಹಾಗೂ ಕೊರೋನಾ ಸೋಂಕಿಗೆ ಈ ಮುಂಚೆ ಒಳಪಟ್ಟಿರುವುದಿಲ್ಲ ಎಂದು ಯುಎಇ ಕೊರೋನಾ ಕ್ಲಿನಿಕಲ್‌ ನಿರ್ವಹಣಾ ಸಮಿತಿಯ ನವಾಲ್‌ ಅಲ್ಕಾಬಿ ಹೇಳಿದ್ದಾರೆ.

ರಷ್ಯಾದಿಂದ ಕೊರೋನಾ ಲಸಿಕೆ ಸಂಶೋಧನಾ ಮಾಹಿತಿ ಕಳವು?

ಅಬುಧಾಬಿಯೇ ಏಕೆ?:

ಯುಎಇನಲ್ಲಿ ಸುಮಾರು 200 ದೇಶಗಳ ನಾಗರಿಕರು ನೆಲೆಸುತ್ತಾರೆ. ಇಲ್ಲಿ ಇದನ್ನು ಪ್ರಯೋಗಿಸಿದರೆ ವಿಶ್ವದ ವಿವಿಧ ರೀತಿಯ ಜನರ ಮೇಲೆ ಪ್ರಯೋಗಿಸಿದಂತಾಗುತ್ತದೆ ಎಂದು ಯುಎಇಯನ್ನೇ ಚೀನಾ ಕಂಪನಿ ಆಯ್ಕೆ ಮಾಡಿಕೊಂಡಿದೆ.

click me!