Cryptocurrency : ಇಸ್ಲಾಂನಲ್ಲಿ Bitcoin ವ್ಯವಹಾರ ನಿಷಿದ್ಧ?

Suvarna News   | Asianet News
Published : Nov 12, 2021, 05:24 PM ISTUpdated : Nov 12, 2021, 05:29 PM IST
Cryptocurrency : ಇಸ್ಲಾಂನಲ್ಲಿ Bitcoin ವ್ಯವಹಾರ ನಿಷಿದ್ಧ?

ಸಾರಾಂಶ

*ರಾಜ್ಯ ರಾಜಕಾರಣದಲ್ಲಿ ಬಿಟ್‌ಕಾಯಿನ್ ಹಗರಣ ಸದ್ದು! *ಇಸ್ಲಾಂನಲ್ಲಿ ಕ್ರಿಪ್ಟೋಕರೆನ್ಸಿ ವ್ಯವಹಾರ ನಿಷಿದ್ಧ ಎಂದ  ಉಲೇಮಾ ಕೌನ್ಸಿಲ್ *ಇಂಡೋನೇಷ್ಯಾದ  ಧಾರ್ಮಿಕ ಸಂಸ್ಥೆಯಿಂದ ಮಹತ್ವದ ಸೂಚನೆ

ಇಂಡೋನೇಷ್ಯಾ (ನ.12): ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಬಿಟ್‌ಕಾಯಿನ್ ಹಗರಣ (Bitcoin Scam) ವ್ಯಾಪಕ ಚರ್ಚೆಯಾಗುತ್ತಿದೆ. ಆಡಳಿತ ಪಕ್ಷ ಮತ್ತು ವಿಪಕ್ಷಗಳು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿವೆ. ರಾಜ್ಯದಲ್ಲಿ ಬಿಜೆಪಿಯ 3ನೇ ಸಿಎಂ ಖಚಿತ ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.  ಬಿಟ್‌ ಕಾಯಿನ್‌ ಹಗರಣದ ಸೂತ್ರಧಾರ ಎನ್ನಲಾದ ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ (Shreeki) ಹೆಸರು  ಕೂಡ ಕೇಳಿ ಬರುತ್ತಿದೆ. ಸದ್ಯದ ಮಟ್ಟಿಗೆ ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ಚರ್ಚೆಯ ವಿಷಯವಾಗಿ ಬಿಟ್‌ಕಾಯಿನ್ ಹಗರಣ ಹೊರಹೊಮ್ಮಿದೆ.

ಈ ಮಧ್ಯೆ ಇಸ್ಲಾಂನಲ್ಲಿ (Islam) ಕ್ರಿಪ್ಟೋಕರೆನ್ಸಿ ವ್ಯವಹಾರ ನಿಷಿದ್ಧ ಎಂದು ಜಗತ್ತಿನ ಅತಿ ದೊಡ್ಡ ಮುಸ್ಲಿಂ (Muslim) ರಾಷ್ಟ್ರವಾದ ಇಂಡೋನೇಷಿಯಾದ (Indonesia) ಧಾರ್ಮಿಕ ಸಂಸ್ಥೆಯೊಂದು ಹೇಳಿದೆ. ಇಂಡೋನೇಷ್ಯಾದ ರಾಷ್ಟ್ರೀಯ ಉಲೇಮಾ ಕೌನ್ಸಿಲ್ (National Ulema Council) , ಅಥವಾ MUI, ಕ್ರಿಪ್ಟೋಕರೆನ್ಸಿಯನ್ನು ಹರಾಮ್ (Haram) ಎಂದು ಪರಿಗಣಿಸಿದೆ ಅಥವಾ ನಿಷೇಧಿಸಿದೆ. ಏಕೆಂದರೆ ಇದು ಅನಿಶ್ಚಿತತೆ, ಪಂತ ಕಟ್ಟುವುದು ಮತ್ತು ಹಾನಿಕಾರಕ ಅಂಶಗಳನ್ನು ಹೊಂದಿದೆ ಎಂದು ಕೌನ್ಸಿಲ್ ಹೇಳಿದೆ.  ತಜ್ಞರ ಜತೆ ಸಭೆ ನಡೆಸಿದ ನಂತರ ಧಾರ್ಮಿಕ ತೀರ್ಪುಗಳ ಮುಖ್ಯಸ್ಥ ಅಸ್ರೋರುನ್ ನಿಯಾಮ್ ಶೋಲೆಹ್ (Asrorun Niam Sholeh) ಗುರುವಾರ ( (ನ.11) ಈ ಬಗ್ಗೆ ತಿಳಿಸಿದ್ದಾರೆ. ಕ್ರಿಪ್ಟೋಕರೆನ್ಸಿಯು (Cryptocurrency)  ಸರಕು ಅಥವಾ ಡಿಜಿಟಲ್ ಆಸ್ತಿಯಾಗಿ ಶರಿಯಾ ತತ್ವಗಳಿಗೆ ಬದ್ಧವಾಗಿದ್ದರೆ ಮತ್ತು ಸ್ಪಷ್ಟ ಪ್ರಯೋಜನವನ್ನು ತೋರಿಸಬಹುದಾದರೆ, ಅದನ್ನು ವ್ಯಾಪಾರ ಮಾಡಬಹುದು ಎಂದು ಅವರು ಕೌನ್ಸಿಲ್‌ ಹೇಳಿದೆ. 

ಅಷ್ಟಕ್ಕೂ ಈ ಬಿಟ್ ಕಾಯಿನ್ ಅಂದ್ರೆ ಏನು? 'ಬುದ್ಧಿವಂತ'  ಶ್ರೀಕಿಯ ಇತಿಹಾಸ

MUI ವಿಶ್ವದ ಅತಿದೊಡ್ಡ ಮುಸ್ಲಿಂ ಜನಸಂಖ್ಯೆಯ ನೆಲೆಯಾಗಿರುವ ದೇಶದಲ್ಲಿ ಷರಿಯಾ ಕಾನೂನನು ವಿಧಿಸುವ ಅಧಿಕಾರವನ್ನು ಹೊಂದಿದೆ. ಜತೆಗೆ ಹಣಕಾಸು ಸಚಿವಾಲಯ ಮತ್ತು ಸೆಂಟ್ರಲ್ ಬ್ಯಾಂಕ್ ಗಳು ,  ಹಣಕಾಸು ಸಮಸ್ಯೆಗಳ ಕುರಿತು MUIಯಿಂದ  ಸಲಹೆಗಳನ್ನು ಸ್ವೀಕರಿಸುತ್ತವೆ. ಇಂಡೋನೇಷ್ಯಾ ಸರ್ಕಾರವು ಸ್ವತಃ ಕ್ರಿಪ್ಟೋ ಸ್ವತ್ತುಗಳನ್ನು ಬೆಂಬಲಿಸುತ್ತಿದೆ, ಇದು ಸರಕುಗಳ ಭವಿಷ್ಯದ ಜೊತೆಗೆ ಹೂಡಿಕೆಯ ಆಯ್ಕೆಯಾಗಿ ವ್ಯಾಪಾರ ಮಾಡಲು ಅವಕಾಶ ನೀಡುತ್ತದೆ. ಜತಗೆ ವರ್ಷದ ಅಂತ್ಯದ ವೇಳೆಗೆ ಕ್ರಿಪ್ಟೋ-ಕೇಂದ್ರಿತ ವಿನಿಮಯವನ್ನು ಸ್ಥಾಪಿಸಲು ಇಂಡೋನೇಷ್ಯಾ ಸರ್ಕಾರವು ಯೋಜನೆ ರೂಪಿಸಿದೆ . ಆದರೆ ಇಂಡೋನೇಷ್ಯಾ ಕ್ರಿಪ್ಟೋ ಸ್ವತ್ತುಗಳನ್ನು ಕರೆನ್ಸಿಯ ರೂಪವಾಗಿ ಬಳಸಲು ಅನುಮತಿಸುವುದಿಲ್ಲ, ಏಕೆಂದರೆ ದೇಶದಲ್ಲಿ ರೂಪಾಯಿ (rupiah) ಮಾತ್ರ ಕಾನೂನುಬದ್ಧ ಹಣಕಾಸು ಆಗಿದೆ.

Bitcoin Scam; ಯುಬಿ ಸಿಟಿ ಗಲಾಟೆಗೂ ಬಿಟ್ ಕಾಯಿನ್ ಮೂಲ ಕಾರಣ

MUI ಯನ ಈ ನಿರ್ಧಾರವು ಇಂಡೋನೇಷ್ಯಾದಲ್ಲಿ ಎಲ್ಲಾ ಕ್ರಿಪ್ಟೋಕರೆನ್ಸಿ ವ್ಯಾಪಾರವನ್ನು ನಿಲ್ಲಿಸಲಾಗುವುದು ಎಂದರ್ಥವಲ್ಲ, ಈ ತೀರ್ಪು ಮುಸ್ಲಿಮರನ್ನು ಸ್ವತ್ತುಗಳಲ್ಲಿ ಹೂಡಿಕೆ ಮಾಡುವುದನ್ನು ತಡೆಯಬಹುದು ಮತ್ತು ಸ್ಥಳೀಯ ಸಂಸ್ಥೆಗಳು ಕ್ರಿಪ್ಟೋ ಸ್ವತ್ತುಗಳನ್ನು ನೀಡುವುದನ್ನು ಮರುಪರಿಶೀಲಿಸುವಂತೆ ಮಾಡಬಹುದು. ಬ್ಯಾಂಕ್ ಇಂಡೋನೇಷ್ಯಾ (Bank Indonesia) ತಮ್ಮದೇ ಡಿಜಿಟಲ್ ಕರೆನ್ಸಿಯನ್ನು ಆರಂಭಿಸುವ ಬಗ್ಗೆ ಚಿಂತಿಸುತ್ತಿದೆ ಆದರೆ ಈ ಬಗ್ಗೆಇನ್ನೂ ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ.

ಕ್ರಿಪ್ಟೋ ವಹಿವಾಟುಗಳು ಇಂಡೋನೇಷ್ಯಾದಲ್ಲಿ ವರ್ಷದ ಮೊದಲ ಐದು ತಿಂಗಳಲ್ಲಿ 370 ಟ್ರಿಲಿಯನ್ ರೂಪಾಯಿ ($26 ಶತಕೋಟಿ) ಆಗಿವೆ. ಇಂಡೋನೇಷ್ಯಾದ ಧಾರ್ಮಿಕ ನಾಯಕರ ನಿಲುವು ಇತರ ಮುಸ್ಲಿಂ-ಬಹುಸಂಖ್ಯಾತ ದೇಶಗಳಲ್ಲಿನ ಅವರ ಸಂಸ್ಥೆಗಳಿಗೆ ಭಿನ್ನವಾಗಿರಬಹುದು. ಯುನೈಟೆಡ್ ಅರಬ್ ಎಮಿರೇಟ್ಸ್ ದುಬೈನಲ್ಲಿ (UAE)  ಮುಕ್ತ ಮಾರುಕಟ್ಟೆಯಲ್ಲಿ ಕ್ರಿಪ್ಟೋ ವ್ಯಾಪಾರವನ್ನು ಅನುಮತಿಸಿದೆ, ಆದರೆ ಬಹ್ರೇನ್ (Bahrain) 2019 ರಿಂದಲೇ ಕ್ರಿಪ್ಟೋ ಸ್ವತ್ತುಗಳನ್ನು ಬೆಂಬಲಿಸಿತ್ತು.

Cryptocurrency ಎಂದರೇನು?

Cryptocurrency ಹಾಗೂ ಶೇರ್‌ ಮಾರ್ಕೆಟ್‌ ಹೆಚ್ಚು ಕಡಿಮೆ ಒಂದೇ ತರಹ. ಇದು ದುಡ್ಡಲ್ಲದ ದುಡ್ಡು. ಕ್ರಿಪ್ಟೋಕರೆನ್ಸಿ ಎಂದರೆ ಅದು ಡಿಜಿಟಲ್ (Digital) ಆಸ್ತಿ. ಕೈಯಲ್ಲಿ ಹಿಡಿಯುವ ನಗದಿನ ರೂಪದಲ್ಲಿ ಕಿಪ್ಟೋಕರೆನ್ಸಿ ಇರೋದಿಲ್ಲ. ಡಿಜಿಟಲ್ ಹಣದ ರೂಪದಲ್ಲಿ ನಿಮ್ಮ ಖಾತೆಯಲ್ಲಿ ಇರುತ್ತದೆ. ಈ ಕ್ರಿಪ್ಟೋಕರೆನ್ಸಿಯನ್ನು ಕದಿಯಲು ಸಾಧ್ಯವಾಗದ ರೀತಿಯಲ್ಲಿ ಸುರಕ್ಷತೆ ಒದಗಿಸಲಾಗಿರುತ್ತದೆ.

Bitcoin Scam Exclusive: ಬಿಟ್‌ಕಾಯಿನ್ ಹಗರಣಕ್ಕೆ ಬಿಗ್ ಟ್ವಿಸ್ಟ್, IPS ಅಧಿಕಾರಿಯ ಆಡಿಯೋ ಲೀಕ್!

‘ಬ್ಲಾಕ್‌ ಚೈನ್’ ತಂತ್ರಜ್ಞಾನ ಬಳಸಿ ಕ್ರಿಪ್ಟೋಕರೆನ್ಸಿಗೆ ಡಿಜಿಟಲ್ ರಕ್ಷಣೆ ನೀಡಲಾಗಿರುತ್ತದೆ. ಕಂಪ್ಯೂಟರ್ ನೆಟ್‌ವರ್ಕ್‌ ಕೂಡಾ ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತದೆ. ಈ ಕರೆನ್ಸಿಯನ್ನು ವಿತರಿಸುವ ಹಲವು ಖಾಸಗಿ ಸಂಸ್ಥೆಗಳಿವೆ. ಕ್ರಿಪ್ಟೋಕರೆನ್ಸಿಗಳ ವ್ಯವಹಾರ ಸಂಪೂರ್ಣವಾಗಿ ಕಂಪ್ಯೂಟರ್‌ ಮತ್ತು ಅಂತರ್ಜಾಲದ ಮುಖಾಂತರ ನಡೆಯುತ್ತದೆ. ಕ್ರಿಪ್ಟೋಕರೆನ್ಸಿಗಳ ಪೈಕಿ ಮೊದಲನೆಯದು ಬಿಟ್ ಕಾಯಿನ್. ಆದ್ರೆ, ಸರ್ಕಾರವಾಗಲಿ, ಸರ್ಕಾರಿ ಸಂಸ್ಥೆಯಾಗಲಿ ಈ ವ್ಯವಹಾರದಲ್ಲಿ ಭಾಗಿಯಾಗುವುದಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?