ಚೀನಾದಲ್ಲಿ ಮತ್ತೆ ಕೊರೋನಾ ಆತಂಕ: ಬೀಜಿಂಗ್‌ ಸನಿಹದಲ್ಲೇ 380 ಹೊಸ ಕೇಸ್‌!

By Suvarna News  |  First Published Jan 11, 2021, 8:51 AM IST

ಜಗತ್ತಿಗೇ ಕೊರೋನಾ ಹಬ್ಬಿಸಿ ತಣ್ಣಗೆ ಕುಳಿತಿದ್ದ ಚೀನಾಗೆ ಮತ್ತೆ ಶಾಕ್| ಡ್ರ್ಯಾಗನ್‌ಗೆ ಕೊರೋನಾ ಭೀತಿ| ಬೀಜಿಂಗ್‌ ಸನಿಹದಲ್ಲೇ 380 ಹೊಸ ಕೇಸ್‌


ಬೀಜಿಂಗ್(ಜ.11)‌: ಜಗತ್ತಿಗೇ ಕೊರೋನಾ ಹಬ್ಬಿಸಿ ತಣ್ಣಗೆ ಕುಳಿತಿದ್ದ ಚೀನಾಗೆ ಮತ್ತೆ ಕೊರೋನಾ ವೈರಸ್‌ ಆತಂಕ ಉಂಟಾಗಿದೆ. ರಾಜಧಾನಿಯ ಸನಿಹದಲ್ಲೇ ಇರುವ ದಕ್ಷಿಣ ಬೀಜಿಂಗ್‌ನ ಹುಬೈ ಪ್ರಾಂತ್ಯದಲ್ಲಿ 380ಕ್ಕೂ ಹೆಚ್ಚು ಜನರಿಗೆ ಕೋವಿಡ್‌ ಸೋಂಕು ತಗುಲಿದೆ.

ಹುಬೈ ಪ್ರಾಂತ್ಯದಲ್ಲಿ ಭಾನುವಾರ ಹೊಸದಾಗಿ 40 ಜನರಲ್ಲಿ ವೈರಸ್‌ ಕಾಣಿಸಿಕೊಂಡಿದ್ದು, ಇಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 223ಕ್ಕೆ ಏರಿಕೆಯಾಗಿದೆ. ಅಲ್ಲದೆ 161 ಜನರಿಗೆ ಲಕ್ಷಣ ರಹಿತ ಸೋಂಕು ಕಾಣಿಸಿಕೊಂಡಿದೆ.

Tap to resize

Latest Videos

ಹುಬೈ ಪ್ರಾಂತ್ಯ ಚೀನಾ ರಾಜಧಾನಿ ಬೀಜಿಂಗ್‌ಗೆ ಹತ್ತಿರು ಇರುವ ಕಾರಣ ಆತಂಕ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಬೀಜಿಂಗ್‌ ಮತ್ತು ಹುಬೈ ನಡುವಿನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಸೋಂಕು ಪತ್ತೆಗೆ ಆಕ್ರಮಣಕಾರಿಯಾಗಿ ಪರೀಕ್ಷೆ ಕೈಗೊಳ್ಳಲಾಗುತ್ತಿದೆ

click me!