ಚೀನಾದ ಒಂದು ಮಗು ನೀತಿ ರೂವಾರಿ ಪೆಂಗ್ ಪೆಯುನ್ ನಿಧನ, ಆಕೆ ನರಕಕ್ಕೇ ಹೋಗಲಿ ಎಂದು ಜನರ ಹಿಡಿಶಾಪ!

Published : Dec 25, 2025, 07:55 PM IST
Peng Peiyun

ಸಾರಾಂಶ

ಚೀನಾದ ವಿವಾದಿತ 'ಒಂದು ಮಗು ನೀತಿ'ಯ ರೂವಾರಿಯಾಗಿದ್ದ ಪೆಂಗ್ ಪೆಯುನ್ (95) ನಿಧನರಾಗಿದ್ದಾರೆ. ಅವರ ಸಾವಿಗೆ ಸರ್ಕಾರ ಸಂತಾಪ ಸೂಚಿಸಿದರೂ, ಈ ನೀತಿಯಿಂದಾದ ಬಲವಂತದ ಗರ್ಭಪಾತ ಮತ್ತು ಇಂದಿನ ಜನಸಂಖ್ಯಾ ಬಿಕ್ಕಟ್ಟಿನಿಂದಾಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಬೀಜಿಂಗ್: ಐದು ದಶಕಗಳ ಹಿಂದೆ ಚೀನಾದಲ್ಲಿ ಮಿತಿಮೀರಿದ ಜನಸಂಖ್ಯೆ ವೃದ್ಧಿಗೆ ಕಡಿವಾಣ ಹಾಕುವ ಉದ್ದೇಶದಿಂದ ‘ಒಂದು ಮಗು ನೀತಿ’ಯನ್ನು ರೂಪಿಸಿ ಜಾರಿಗೆ ತಂದ ಪ್ರಮುಖ ಅಧಿಕಾರಿಯಾಗಿದ್ದ ಪೆಂಗ್ ಪೆಯುನ್ (95) ಅವರು ಡಿಸೆಂಬರ್ 21 ರಂದು ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಚೀನಾ ಸರ್ಕಾರ ಅಧಿಕೃತವಾಗಿ ಸಂತಾಪ ವ್ಯಕ್ತಪಡಿಸಿದೆ. ಆದರೆ, ಸಾರ್ವಜನಿಕ ವಲಯದಲ್ಲಿ ಮಾತ್ರ ಮಿಶ್ರ ಹಾಗೂ ವ್ಯತಿರಿಕ್ತ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಸೋಷಿಯಲ್ ಮೀಡಿಯಾ ಪೇಜ್ ಗಳಲ್ಲಿ ಕೋಪ ಮತ್ತು ಟೀಕೆಗಳಿಂದ ತುಂಬಿವೆ. ಕಾರಣ 1980-2015 ರವರೆಗೆ ಕಠಿಣ ನೀತಿಯನ್ನು ಜಾರಿಗೊಳಿಸುವ ಕಾರ್ಯವನ್ನು ನಿರ್ವಹಿಸುತ್ತಿದ್ದ ಪೆಂಗ್, ದೀರ್ಘಕಾಲದಿಂದ ಕೈಬಿಡಲಾದ ಜನಸಂಖ್ಯಾ ನಿಯಂತ್ರಣ ಕ್ರಮದ ಮೇಲಿನ ಹಳೆಯ ಗಾಯಗಳನ್ನು ಮತ್ತೆ ತೆರೆದಿದ್ದರಿಂದ ದ್ವೇಷದ ವಿಷಯವಾಗಿದ್ದಾರೆ. ಚೀನಾದ ಕಮ್ಯುನಿಸ್ಟ್ ಪಕ್ಷವು ಅವರನ್ನು ಜನಸಂಖ್ಯಾ ನೀತಿ ಮತ್ತು ಮಹಿಳಾ ಮತ್ತು ಮಕ್ಕಳ ಸಮಸ್ಯೆಗಳಲ್ಲಿ "ಅತ್ಯುತ್ತಮ ನಾಯಕಿ" ಎಂದು ಕರೆದಿದೆ.

ಆರ್ಥಿಕ ಬೆಳವಣಿಗೆಗೂ ಅಡ್ಡಿಯಾಗಿದ್ದ ಜನಸಂಖ್ಯೆ

1970–80ರ ದಶಕದಲ್ಲಿ ಚೀನಾದಲ್ಲಿ ಮಹಿಳೆಯರ ಫಲವತ್ತತೆ ದರ ಸರಾಸರಿ 4ರಿಂದ 5ರಷ್ಟಿತ್ತು. ಅಂದರೆ, ಒಬ್ಬ ಮಹಿಳೆಗೆ ನಾಲ್ಕು ಅಥವಾ ಐದು ಮಕ್ಕಳು ಜನಿಸುತ್ತಿದ್ದರು. ಇದರ ಪರಿಣಾಮವಾಗಿ ದೇಶದಲ್ಲಿ ಜನಸಂಖ್ಯೆ ಸ್ಫೋಟದ ಮಟ್ಟಿಗೆ ಏರಿಕೆಯಾಗಿದ್ದು, ನಾಗರಿಕರ ಮೂಲಭೂತ ಅಗತ್ಯಗಳನ್ನು ಪೂರೈಸಲು ಸರ್ಕಾರಕ್ಕೆ ತೀವ್ರ ಸಂಕಷ್ಟ ಎದುರಾಗಿತ್ತು. ಜನಸಂಖ್ಯೆಯ ಭಾರದಿಂದ ಆರ್ಥಿಕ ಬೆಳವಣಿಗೆಗೂ ಅಡ್ಡಿ ಉಂಟಾಗತೊಡಗಿತು.

ಇಂತಹ ಗಂಭೀರ ಪರಿಸ್ಥಿತಿಯಲ್ಲಿ, ಪೆಂಗ್ ಪೆಯುನ್ ಅವರು 1979ರಲ್ಲಿ ‘ಒಂದು ಮಗು ನೀತಿ’ಯನ್ನು ಪರಿಚಯಿಸಿದರು. ಈ ನೀತಿಯ ಪ್ರಕಾರ ಪ್ರತಿಯೊಂದು ದಂಪತಿಗೂ ಕೇವಲ ಒಂದು ಮಗು ಹೊಂದಲು ಮಾತ್ರ ಅನುಮತಿ ನೀಡಲಾಗಿತ್ತು. 1980ರಿಂದ ಈ ನಿಯಮವನ್ನು ಅಧಿಕೃತವಾಗಿ ಜಾರಿಗೆ ತರಲಾಯಿತು. ಇದರೊಂದಿಗೆ, ಜನಸಂಖ್ಯೆ ನಿಯಂತ್ರಣಕ್ಕಾಗಿ ಇಂತಹ ಕಠಿಣ ಕ್ರಮ ಕೈಗೊಂಡ ವಿಶ್ವದ ಮೊದಲ ರಾಷ್ಟ್ರ ಎಂಬ ಗೌರವವೂ ಚೀನಾಕ್ಕೆ ಲಭಿಸಿತು.

ತಣಿಯದ ಆಕ್ರೋಶ:

ಆದರೆ, ಜನಸಂಖ್ಯೆ ನಿಯಂತ್ರಣದಲ್ಲಿ ಆರಂಭಿಕವಾಗಿ ಪರಿಣಾಮಕಾರಿಯೆಂದು ಕಂಡ ಈ ನೀತಿಯ ಅಡ್ಡಪರಿಣಾಮಗಳು ನಂತರದ ದಶಕಗಳಲ್ಲಿ ಸ್ಪಷ್ಟವಾಗಿ ಗೋಚರಿಸತೊಡಗಿದವು. ಕಾಲಕ್ರಮೇಣ ದೇಶದಲ್ಲಿ ಯುವ ಜನಸಂಖ್ಯೆ ಗಣನೀಯವಾಗಿ ಕುಸಿತಗೊಂಡು, ವೃದ್ಧರ ಸಂಖ್ಯೆ ಹೆಚ್ಚಳವಾಗತೊಡಗಿತು. ಇದಕ್ಕೆ ಪ್ರಮುಖ ಕಾರಣವಾಗಿ ದಶಕಗಳ ಹಿಂದಿನ ಒಂದು ಮಗು ನೀತಿಯನ್ನು ಜನರು ಗುರುತಿಸುತ್ತಿದ್ದಾರೆ.

ಈ ಹಿನ್ನೆಲೆ, ಪೆಂಗ್ ಪೆಯುನ್ ಅವರ ನಿಧನದ ಬಳಿಕ ಜನರ ಅಸಮಾಧಾನ ಮತ್ತೆ ಭುಗಿಲೆದ್ದಿದೆ. ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕೆಲವರು ಅವರನ್ನು ಕಟುವಾಗಿ ಟೀಕಿಸುತ್ತಿದ್ದಾರೆ. “ಈ ನೀತಿಯಿಂದ ನಮ್ಮ ಪೋಷಕರು ಅಪಾರ ಸಂಕಷ್ಟ ಅನುಭವಿಸಿದರು. ಅನೇಕ ಕುಟುಂಬಗಳು ಒತ್ತಾಯಪೂರ್ವಕ ಗರ್ಭಪಾತಗಳಿಗೆ ಒಳಗಾದವು” ಎಂಬ ಆರೋಪಗಳನ್ನು ನೆಟ್ಟಿಗರು ಹೊರಡಿಸುತ್ತಿದ್ದಾರೆ. ಹೀಗಾಗಿ, ಒಂದು ಮಗು ನೀತಿಯ ಜನನಿಯಾಗಿದ್ದ ಪೆಂಗ್ ಪೆಯುನ್ ಅವರ ಅಗಲಿಕೆ, ಚೀನಾದಲ್ಲಿ ಹಳೆಯ ಗಾಯಗಳನ್ನು ಮತ್ತೆ ಎಬ್ಬಿಸಿದಂತಾಗಿದೆ.

ಈ ವಿಶ್ವ ದರ್ಜೆಯ ದೈತ್ಯ ಸತ್ತಳು... ಅವಳ 10 ವರ್ಷಗಳ ನಾಯಕತ್ವದಲ್ಲಿ, ಸರ್ಕಾರ ಹತ್ತು ಲಕ್ಷ ಬಲವಂತದ ಗರ್ಭಪಾತಗಳನ್ನು ನಡೆಸಿತು. ನರಕವು ಅವಳನ್ನು ಶಾಶ್ವತವಾಗಿ ಹಿಡಿದಿಟ್ಟುಕೊಳ್ಳಲಿ! ಎಂದು ಬರೆದುಕೊಂಡಿದ್ದಾರೆ. 1980 ರಲ್ಲಿ ಜಾರಿಗೆ ತರಲಾದ ಒಂದು ಮಗು ನೀತಿಯನ್ನು 2015 ರಲ್ಲಿ ಹಿಂತೆಗೆದುಕೊಳ್ಳಲಾಯಿತು ಏಕೆಂದರೆ ಚೀನಾದ ಜನಸಂಖ್ಯೆ ಕುಗ್ಗಿತು ಮತ್ತು ವೃದ್ಧರ ಸಂಖ್ಯೆ ಆತಂಕಕಾರಿ ದರದಲ್ಲಿ ಏರಿತು. 2023 ರಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಭಾರತಕ್ಕಿಂತ ಹಿಂದಕ್ಕೆ ಇಳಿಯಿತು. ಕಳೆದ ವರ್ಷ, ಚೀನಾದ ಜನಸಂಖ್ಯೆಯು 1.39 ಶತಕೋಟಿಗೆ ಇಳಿದಿದೆ. ಬಿಕ್ಕಟ್ಟನ್ನು ನಿಯಂತ್ರಿಸಲು, ಚೀನಾ ಕ್ರಮೇಣ ಎರಡು ಮಕ್ಕಳ ನೀತಿಯನ್ನು ಪರಿಚಯಿಸಿತು ಮತ್ತು ನಂತರ 2021 ರಲ್ಲಿ ಅದನ್ನು ಮೂರು ಮಕ್ಕಳ ನೀತಿಗೆ ವಿಸ್ತರಿಸಿತು . ಒಂದು ಮಗು ನಿಯಮ ಈಗ ಇಲ್ಲದಿದ್ದರೂ ಆ ನೋವು ಮಾತ್ರ ಜನರ ಮನಸ್ಸಿಂದ ಇನ್ನೂ ಮಾಸಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಡೀಪಾರದ ತಾರೀಖ್ ಬಾಂಗ್ಲಾಗೆ ಮರಳಿದ ದಿನವೇ ಮತ್ತೊಬ್ಬ ಹಿಂದೂ ಹತ್ಯೈಗೆದ ಉದ್ರಿಕ್ತರ ಗುಂಪು
ಲಾಟರಿ ಮೂಲಕ ವೀಸಾ ವಿತರಣೆಗೆ ಟ್ರಂಪ್‌ ಬ್ರೇಕ್‌