ಗೆದ್ದ ವಾರದ ಬಳಿಕ ಬೈಡೆನ್‌ಗೆ ಶುಭಾಶಯ ಕೋರಿದ ಚೀನಾ!

By Kannadaprabha NewsFirst Published Nov 14, 2020, 8:48 AM IST
Highlights

 ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡೆನ್‌| ಜೋ ಬೈಡೆನ್‌ ಅವರು ಆಯ್ಕೆಯಾದ ವಾರದ ಬಳಿಕ ಇದೀಗ ಚೀನಾ ಅವರಿಗೆ ಶುಭಾಶಯ| ನಾವು ಬೈಡೆನ್‌ ಮತ್ತು ಕಮಲಾ ಹ್ಯಾರಿಸ್‌ ಅವರಿಗೆ ಶುಭ ಕೋರುತ್ತೇವೆ

 

ಬೀಜಿಂಗ್(ನ.14)‌: ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡೆನ್‌ ಅವರು ಆಯ್ಕೆಯಾದ ವಾರದ ಬಳಿಕ ಇದೀಗ ಚೀನಾ ಅವರಿಗೆ ಶುಭಾಶಯ ಕೋರಿದೆ.

ಶುಕ್ರವಾರದ ದೈನಂದಿನ ಪತ್ರಿಕಾಗೋಷ್ಠಿ ವೇಳೆ ವಿದೇಶಾಂಗ ಇಲಾಖೆ ವಕ್ತಾರ ವಾಮಗ್‌ ವೆಬಿನ್‌ ಅವರು ‘ನಾವು ಬೈಡೆನ್‌ ಮತ್ತು ಕಮಲಾ ಹ್ಯಾರಿಸ್‌ ಅವರಿಗೆ ಶುಭ ಕೋರುತ್ತೇವೆ’ ಪ್ರತಿಕ್ರಿಯಿಸಿದ್ದಾರೆ.

ಅಧ್ಯಕ್ಷರಾಗಿ ಬೈಡೆನ್‌ ಮತ್ತು ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್‌ ಆಯ್ಕೆಯಾದ ಬಳಿಕ ವಿಶ್ವದ ಬಹುತೇಕ ದೇಶಗಳ ನಾಯಕರು ಇಬ್ಬರಿಗೂ ಶುಭ ಕೋರಿದ್ದರು. ಆದರೆ ಅಮೆರಿಕದೊಂದಿಗೆ ಉತ್ತಮ ಸಂಬಂಧ ಹೊಂದಿರದ ಚೀನಾ, ರಷ್ಯಾ ಮತ್ತು ಮೆಕ್ಸಿಕೋ ದೇಶಗಳು ಶುಭ ಹಾರೈಸಿರಲಿಲ್ಲ.

ನೂತನ ನಾಯಕರ ಆಯ್ಕೆ ಬಗ್ಗೆ ಇತ್ತೀಚೆಗೆ ಚೀನಾ ವಿದೇಶಾಂಗ ಇಲಾಖೆ ವಕ್ತಾರರನ್ನು ಪ್ರಶ್ನಿಸಿದ ವೇಳೆ ‘ತಾವು ಆಯ್ಕೆಯಾಗಿದ್ದಾಗಿ ಬೈಡೆನ್‌ ಘೋಷಿಸಿಕೊಂಡಿದ್ದನ್ನು ಗಮನಿಸಿದ್ದೇವೆ’ ಎಂದೇ ಜಾಣತನದ ಉತ್ತರ ನೀಡಿದ್ದರು. ಕಾರಣ ಬೈಡೆನ್‌ ಆಯ್ಕೆಯನ್ನು ಹಾಲಿ ಅಧ್ಯಕ್ಷ ಮತ್ತು ಅವರ ಪ್ರತಿಸ್ಪರ್ಧಿ ಟ್ರಂಪ್‌ ತಿರಸ್ಕರಿಸಿದ್ದರು. ಚುನಾವಣೆಯಲ್ಲಿ ಅಕ್ರಮ ನಡೆದಿದ್ದು, ಈ ಕುರಿತು ಕಾನೂನು ಹೋರಾಟ ನಡೆಸುವುದಾಗಿ ಘೋಷಿಸಿದ್ದರ

click me!