ಚೀನಾದಿಂದ 17.25 ಲಕ್ಷ ಕೋಟಿ ರಕ್ಷಣಾ ಬಜೆಟ್‌, ಭಾರತಕ್ಕಿಂತ 3 ಪಟ್ಟು ಹೆಚ್ಚು

Kannadaprabha News   | Asianet News
Published : Mar 06, 2022, 05:30 AM IST
ಚೀನಾದಿಂದ 17.25 ಲಕ್ಷ ಕೋಟಿ ರಕ್ಷಣಾ ಬಜೆಟ್‌, ಭಾರತಕ್ಕಿಂತ 3 ಪಟ್ಟು ಹೆಚ್ಚು

ಸಾರಾಂಶ

- ಭಾರತದ ರಕ್ಷಣಾ ಬಜೆಟ್‌ 5.25 ಲಕ್ಷ ಕೋಟಿ ರು. - ಭಾರತಕ್ಕಿಂತ ಮೂರು ಪಟ್ಟು ಅಧಿಕ ರಕ್ಷಣಾ ಬಜೆಟ್ - ಜಗತ್ತಿನಲ್ಲಿಯೇ 2ನೇ ಅತಿದೊಡ್ಡ ರಕ್ಷಣಾ ಬಜೆಟ್ ಮಂಡಿಸಿದ ಚೀನಾ

ಬೀಜಿಂಗ್‌ (ಮಾ.6): ಚೀನಾ (China) 2022ರ ನೂತನ ಆರ್ಥಿಕ ವರ್ಷಕ್ಕೆ 17.25 ಲಕ್ಷ ಕೋಟಿಯ ರಕ್ಷಣಾ ಬಜೆಟ್‌ನ್ನು (defence budget) ಶನಿವಾರ ಮಂಡಿಸಿದೆ. ಇದು ಭಾರತದ ರಕ್ಷಣಾ ಬಜೆಟ್‌ 5.25 ಲಕ್ಷ ಕೋಟಿಗಿಂತ ಮೂರುಪಟ್ಟು ಹೆಚ್ಚಾಗಿದೆ. ಕಳೆದ ವರ್ಷ ಚೀನಾ 15.6 ಲಕ್ಷ ಕೋಟಿ ರು ರಕ್ಷಣಾ ಬಜೆಟ್‌ನ್ನು ಮಂಡಿಸಿತ್ತು. ಈ ಬಾರಿ ತನ್ನ ವಾರ್ಷಿಕ ರಕ್ಷಣಾ ಬಜೆಟ್‌ನ್ನು ಶೇ. 7.1ರಷ್ಟುಹೆಚ್ಚಿಸಿದೆ. ಅಮೆರಿಕದ ನಂತರ ಚೀನಾ ಜಗತ್ತಿನಲ್ಲಿಯೇ 2ನೇ ಅತಿದೊಡ್ಡ ರಕ್ಷಣಾ ಬಜೆಟ್‌ ಮಂಡಿಸಿದೆ.

ಚೀನಾದ ಸಂಸತ್ತು ‘ಪೀಪಲ್ಸ್‌ ಲಿಬರೇಶನ್‌ ಆರ್ಮಿಯ (People's Liberation Army) ಸಮಗ್ರ ಯುದ್ಧ ಸನ್ನದ್ಧತೆಗಾಗಿ ಬಜೆಟ್‌ ಗಾತ್ರವನ್ನು ಹೆಚ್ಚಿಸಲಾಗಿದೆ. ಚೀನಾದ ಸಾರ್ವಭೌಮತೆ, ಭದ್ರತೆ ಮತ್ತು ಅಭಿವೃದ್ಧಿಯ ಹಿತಾಸಕ್ತಿಯನ್ನು ರಕ್ಷಿಸಲು ಚೀನಾ ಸೇನಾ ಕಾರ್ಯಾಚರಣೆಯನ್ನು ದೃಢವಾಗಿ ಮುನ್ನಡೆಸುವ ನಿಟ್ಟಿನಲ್ಲಿ ಬಜೆಟ್‌ ಮಂಡಿಸಿದೆ’ ಎಂದು ಹೇಳಿದೆ. ಪೂರ್ವ ಲಡಾಖ್‌ (Ladakh) ಬಿಕ್ಕಟ್ಟಿನ ನಡುವೆ ಚೀನಾ ರಕ್ಷಣಾ ಬಜೆಟ್‌ ಗಾತ್ರವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದ್ದು ಪರೋಕ್ಷವಾಗಿ ಭಾರತಕ್ಕೆ ಎಚ್ಚರಿಕೆ ಗಂಟೆಯಾಗಿದೆ.

ಮೊದಲ ಬಾರಿ ತನ್ನ ಪ್ರಜೆಗಳನ್ನು ಸ್ಥಳಾಂತರಿಸಿದ ಚೀನಾ
ಬೀಜಿಂಗ್‌:
ರಷ್ಯಾ ಉಕ್ರೇನ್‌ ಯುದ್ಧ ಆರಂಭವಾದ 10 ದಿನಗಳ ನಂತರ ಚೀನಾ ತನ್ನ ದೇಶದ ಪ್ರಜೆಗಳನ್ನು ಉಕ್ರೇನ್‌ನಿಂದ ಸ್ಥಳಾಂತರಿಸಲು ಆರಂಭಿಸಿದೆ. ಭಾರತ 1 ವಾರದ ಹಿಂದಿನಿಂದಲೇ ತನ್ನ ಪ್ರಜೆಗಳನ್ನು ರಕ್ಷಣೆ ಮಾಡಲು ಆರಂಭಿಸಿತ್ತು. ಆದರೆ ಚೀನಾ ಸುಮ್ಮನಿದ್ದ ಬಗ್ಗೆ ಚೀನೀಯರೇ ಕಿಡಿಕಾರಿದ್ದರು. ಇದಾದ ಕೆಲವು ದಿನಗಳ ಬಳಿಕ ಚೀನಾ ತನ್ನವರ ರಕ್ಷಣೆಗೆ ಮುಂದಾಗಿದೆ.
ಶನಿವಾರ ಚೀನಾದ ಏರ್‌ ಚೀನಾ (Air China) ಸಂಸ್ಥೆಯ ಸಿಎ702 ಚಾರ್ಟರ್ಡ್‌ ವಿಮಾನ ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ ಚೀನಾಗೆ ಬಂದು ತಲುಪಿದೆ. ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ಸುಮಾರು 3 ಸಾವಿರ ಚೀನಾ ಪ್ರಜೆಗಳನ್ನು ಉಕ್ರೇನ್‌ ನೆರೆಯ ರಾಷ್ಟ್ರಗಳಿಗೆ ಸ್ಥಳಾಂತರಿಸಿದ್ದು, ಅಲ್ಲಿಂದ ಸ್ವದೇಶಕ್ಕೆ ಕರೆತರುತ್ತಿದೆ.

ಚೀನಾ ಬಳಕೆ ಮಾಡುತ್ತಿರುವ ಈ ವಿಮಾನಗಳು ಒಂದು ಬಾರಿಗೆ ಸುಮಾರು 301 ಜನರನ್ನು ಒಂದು ಬಾರಿಗೆ ಕರೆದೊಯ್ಯಲಿವೆ. ರೊಮೆನಿಯಾದಿಂದ ಚೀನಾದ ಪ್ರಜೆಗಳನ್ನು ಸ್ಥಳಾಂತರಿಸಲು ಶನಿವಾರ ಮತ್ತು ಭಾನುವಾರ ಚೀನಾ ಏರ್‌ನ ವಿಮಾನಗಳು ಕಾರ್ಯಾಚರಣೆ ನಡೆಸಲಿವೆ.

60 ವರ್ಷದ ನಂತರ ಬ್ಯಾಂಕ್ ಖಾತೆ ಚೆಕ್ ಮಾಡಿದ ಮಹಿಳೆ, ಇದ್ದ 252 ರೂಪಾಯಿ 25,200 ರೂಪಾಯಿ ಆಗಿತ್ತು!
ನೌಕಾಪಡೆಯಿಂದ ಬ್ರಹ್ಮೋಸ್‌ ಕ್ಷಿಪಣಿ ಪ್ರಯೋಗ ಯಶಸ್ವಿ
ನವದೆಹಲಿ:
ಶಬ್ದಕ್ಕಿಂತ ವೇಗವಾಗಿ ನುಗ್ಗಿ ಶತ್ರುಪಡೆಗಳನ್ನು ಸದೆ ಬಡಿಯುವ, ವಿಶ್ವದ ಅತ್ಯಂತ ಅಪಾಯಕಾರಿ ಕ್ಷಿಪಣಿಗಳಲ್ಲಿ ಒಂದಾಗಿರುವ ಬ್ರಹ್ಮೋಸ್‌ ಕ್ಷಿಪಣಿಯ (BrahMos Missile) ದೀರ್ಘ ದೂರ ಕ್ರಮಿಸುವ ಆವೃತ್ತಿಯನ್ನು ಭಾರತೀಯ ನೌಕಾಪಡೆ ( Indian Navy) ಶನಿವಾರ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದೆ.

Russia Ukraine War "ರಷ್ಯಾ ಮೇಲಿನ ಯುದ್ಧ ಎಂದು ಪರಿಗಣಿಸುತ್ತೇವೆ", ಬಲಾಢ್ಯ ರಾಷ್ಟ್ರಗಳಿಗೆ ಪುಟಿನ್ ವಾರ್ನಿಂಗ್!
ಬಂಗಾಳ ಕೊಲ್ಲಿಯಲ್ಲಿ ಯುದ್ಧನೌಕೆಯೊಂದರಿಂದ ಚಿಮ್ಮಿದ ಬ್ರಹ್ಮೋಸ್‌ ಕ್ಷಿಪಣಿ, ಶರವೇಗದಲ್ಲಿ ಅತ್ಯಂತ ನಿಖರವಾಗಿ ತನ್ನ ಗುರಿಯನ್ನು ಧ್ವಂಸಗೊಳಿಸಿದೆ ಎಂದು ನೌಕಾಪಡೆ ಅಧಿಕಾರಿಗಳು ಹೇಳಿದ್ದಾರೆ. ಈ ಪರೀಕ್ಷೆಯೊಂದಿಗೆ ಯುದ್ಧಸನ್ನದ್ಧತೆಯನ್ನು ಸಾಬೀತುಪಡಿಸಲಾಗಿದೆ. ಆತ್ಮನಿರ್ಭರ ಭಾರತಕ್ಕೆ ಮತ್ತೊಂದು ಗರಿಮೆ ಸಿಕ್ಕಂತಾಗಿದೆ ಎಂದು ನೌಕಾಪಡೆ ಟ್ವೀಟ್‌ ಮಾಡಿದೆ.
ಬ್ರಹ್ಮೋಸ್‌ ಕ್ಷಿಪಣಿಯ ಪರೀಕ್ಷೆಯನ್ನು ನೌಕಾಪಡೆ ಕಾಲಕಾಲಕ್ಕೆ ನಡೆಸುತ್ತದೆ. ಇದು ಶಬ್ದಕ್ಕಿಂತ ವೇಗವಾಗಿ ದಾಳಿ ಮಾಡುವ ಸೂಪರ್‌ಸಾನಿಕ್‌ ಕ್ಷಿಪಣಿಯಾಗಿದೆ. ವೇಗವಾಗಿ ಸಾಗುವ ಕಾರಣ ಕ್ಷಿಪಣಿಗಳಿಂದ ಪ್ರತಿದಾಳಿ ನಡೆಸಿ ಇದನ್ನು ಹೊಡೆದುರುಳಿಸುವುದು ಬಹಳ ಕಷ್ಟ. 2006ರಲ್ಲೇ ಬ್ರಹ್ಮೋಸ್‌ ಕ್ಷಿಪಣಿಯನ್ನು ನೌಕಾಪಡೆ ಹಾಗೂ ಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಯುದ್ಧ ನೌಕೆಗಳಲ್ಲಿ ಬಳಸುವ ಕ್ಷಿಪಣಿಗಳಿಗಿಂತ ಯುದ್ಧ ವಿಮಾನಗಳಿಂದ ಪ್ರಯೋಗಿಸುವ ಕ್ಷಿಪಣಿ ತೀವ್ರ ವೇಗ ಹೊಂದಿರುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!