ಟಾಯ್ಲೆಟ್ಟಿಗೆ ಹೋಗೋಕೂ ಟೈಮಿಲ್ಲ, ಡೈಪರ್ ಹಾಕಿಕೊಂಡೆ ವೈದ್ಯರ ಕೆಲಸ!

By Suvarna NewsFirst Published Jan 27, 2020, 10:36 PM IST
Highlights

ಚೀನಾದಲ್ಲಿ ಮಾರಕ ವೈರಸ್ ರುದ್ರತಾಂಡವ/ ವೈದ್ಯರಿಗೆ ಟಾಯ್ಲೆಟ್ಟಿಗೆನ ಹೋಗುವುದಲಕ್ಕೂ ಟೈಮಿಲ್ಲ/ ಡೈಪರ್ ಹಾಕಿಕೊಂಡು ಕೆಲಸ ಮಾಡಬೇಕಾದ ಅನಿವಾರ್ಯ

ಬೀಜಿಂಗ್(ಜ. 27) ಚೀನಾದಲ್ಲಿ ಕೋರೋನಾ ವೈರಸ್ ಮಾರಿ ಕಾಡುತ್ತಿದೆ. ಅಲ್ಲಿನ ವೈದ್ಯರ ಪರಿಸ್ಥಿತಿ ಮಾತ್ರ ಯಾರಿಗೂ ಬೇಡದಂತಾಗಿದೆ.

ರೋಗಿಗಳಿಗೆ ಟ್ರೀಟ್ ಮೆಂಟ್ ಕೊಡಲು ಒಂದು ಕ್ಷಣವನ್ನು ವೇಸ್ಟ್ ಮಾಡುವಂತೆ ಇಲ್ಲ. ಇದೇ ಕಾರಣಕ್ಕೆ ಚೀನಾದ ವೈದ್ಯರು ವಯಸ್ಕರ ಡೈಪರ್ ಹಾಕಿಕೊಂಡು ಕೆಲಸ ಮಾಡುತ್ತಿದ್ದಾರೆ.

ಟಾಯ್ಲೆಟ್ ಗೆ ಹೋಗಲು ಸಮಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಲಭ್ಯವಿರುವ ವ್ಯವಸ್ಥೆ ಬಳಸಿಕೊಂಡು ರೋಗಿಗಳಿಗೆ ಸರಿಯಾದ ಆರೈಕೆ ನೀಡುವ ಸವಾಲು ಅವರ ಮುಂದಿದೆ.

ಕೋರೋನಾ ವೈರಸ್ ಪೂರ್ಣ ಕತೆ

ಸ್ಪೆಶಲಿಸ್ಟ್ ಡಾಕ್ಟರ್ ಗಳು ಡೈಪರ್ ಹಾಕಿಕೊಂಡು ಕಾರ್ಯನಿರ್ವಹಿಸಬೇಕಾಗಿ ಬಂದಿದೆ. ಸಮಯ ವ್ಯರ್ಥ ಮಾಡಲು ಸಾಧ್ಯವೇ ಇಲ್ಲದ ಸ್ಥಿತಿಯಲ್ಲಿದ್ದೇವೆ ಎಂದು ಡಾ. ಡೋ ಹೇಳುತ್ತಾರೆ.

ಮಾರಕ ವೈರಸ್ ನಿಂದ 62 ವರ್ಷದ ವ್ಯಕ್ತಿಯೊಬ್ಬರು ನಿಧನರಾದರು ಎಂಬ ಸುದ್ದಿ ಹಬ್ಬುತ್ತಿದಂತೆ ವುಹಾನ್ ಆಸ್ಪತ್ರೆಯಲ್ಲಿ ಒಂದು ಕ್ಷಣ ಸ್ಥಿತಿ ಗತಿ ಏರುಪೇರಾಗಿತ್ತು. ಮಾರಕ ವೈರಸ್ ಗೆ ತುತ್ತಾಗಿ ಹುಬೈ ಪ್ರದೇಶದಲ್ಲಿ 15ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದು ಆತಂಕ ಹೆಚ್ಚಿಸಿದೆ.

ಇತ್ತ ಯುಕೆಯಲ್ಲಿಯೂ 14 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಅವರಲ್ಲಿ ಸೋಂಕು ಕಂಡುಬಂದಿಲ್ಲ. ಹಿಂದೊಮ್ಮೆ ಸಾರ್ಸ್ ಹೆಸರಿನಲ್ಲಿ ಕಾಡಿದ್ದ ವೈರಸ್ 2002-2003ರಲ್ಲಿ 774 ಜನರನ್ನು ಬಲಿಪಡೆದುಕೊಂಡಿತ್ತು.

ಜ್ವರ, ಕಾಡುವ ಕೆಮ್ಮು ಉಸಿರಾಟದ ಸಮಸ್ಯೆ ಈ ವೈರಸ್ ನಿಂದ ಕಾಣಿಸಿಕೊಳ್ಳುವ ಆರಂಭಿಕ ಲಕ್ಷಣ. ಇದೊಂದು ಪ್ರಾಣಿಗಳಿಂದ ಮಾನವರಿಗೆ ಹರಡುವ ಕಾಯಿಲೆ. ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶನದಂತೆ ಹುವಾನ್ ಹೋಲ್ ಸೇಲ್ ಮಾರ್ಕೆಟ್ ನ್ನು ಜನವರಿ 1 ರಿಂದ ಕ್ಲೋಸ್ ಮಾಡಲಾಗಿದೆ.

click me!