ಭಾರತದ ಗಡಿಯಲ್ಲಿ ಚೀನಾ ಕಿತಾಪತಿಗೆ ಅಸಲಿ ಕಾರಣ ಬಿಚ್ಚಿಟ್ಟ ಅಮೆರಿಕ

By Suvarna NewsFirst Published Jun 19, 2020, 4:34 PM IST
Highlights

ಚೀನಾ ಪದೇ ಪದೇ ಕ್ಯಾತೆ ತೆಗೆಯುತ್ತಿರುವುದೇಕೆ?/ ಚೀನಾದ ಅಸಲಿತನ ಬಿಚ್ಚಿಟ್ಟ ಅಮೆರಿಕ/ ಕೊರೋನಾದ ಲಾಭ ಪಡೆದುಕೊಳ್ಳಲು ಚೀನಾ ಹವಣಿಕೆ/ ಪರಿಸ್ಥಿತಿ ಲಾಭ ಪಡೆದುಕೊಳ್ಳಲು ಮುಂದಾದ ಕೆಂಪು ರಾಷ್ಟ್ರ

ವಾಷಿಂಗ್‌ ಟನ್(ಜೂ. 19) ಕಾರಣವಿಲ್ಲದೇ ಚೀನಾ ಭಾರತದ ಗಡಿಯಲ್ಲಿ ತಂಟೆ ಮಾಡುತ್ತಿರುವುದು ಯಾಕೆ ಎಂಬುದಕ್ಕೆ ಅಮೆರಿಕ ಕಾರಣ ನೀಡಿದೆ.  ಕೊರೋನಾ ಕಾರಣಕ್ಕೆ ಇಡೀ ಜಗತ್ತು ವಿಚಲಿತವಾದ ಸ್ಥಿತಿಯಲ್ಲಿದೆ ಇದರ ಲಾಭ ಪಡೆದುಕೊಳ್ಳಲು ಚೀನಾ ಯತ್ನ ಮಾಡುತ್ತಿದ್ದು ಅದರ ಒಂದು ಭಾಗವೇ ಭಾರತದ ಗಡಿಯಲ್ಲಿ ಕುತಂತ್ರ ಮಾಡುತ್ತಿರುವುದು ಎಂದು ಅಮೆರಿಕದ ವಿದೇಶಾಂಗ  ಇಲಾಖೆ ಹೇಳಿದೆ.

ಈಸ್ಟ್ ಏಷ್ಯನ್ ಮತ್ತು ಫೆಸಿಫಿಕ್ ವಿಭಾಗದ ಅಸಿಸ್ಟಂಟ್ ಸಕ್ರೆಟರಿ ಡೇವಿಡ್ ಸ್ಟಿಲ್‌ ವೆಲ್ ಮಾತನಾಡಿ, ಟ್ರಂಪ್ ಆಡಳಿತ ಭಾರತ- ಚೀನಾ ಸಂಘರ್ಷನ್ನು ಗಂಭೀರವಾಗಿ ಗಮನಿಸುತ್ತಿದೆ ಎಂದು ತಿಳಿಸಿದ್ದಾರೆ.

ಲಡಾಕ್ ಗಡಿಯಲ್ಲಿ ಯುದ್ಧ ಭೀತಿ; ಪರಿಸ್ಥಿತಿ ಹೇಗಿದೆ?

ಇಡೀ ವಿಶ್ವ ಕೊರೋನಾದ ವಿರುದ್ಧ ಹೋರಾಟ ಮಾಡುವ ಹಾದಿಯಲ್ಲಿ ಇದ್ದರೆ ಚೀನಾ  ವಿಚಲಿತ ಸಂದರ್ಭದ ಲಾಭ ಪಡೆದುಕೊಳ್ಳಲು ಹವಣಿಸುತ್ತಿದೆ ಎಂದು ಡೇವಿಡ್ ಸ್ಟಿಲ್‌ ವೆಲ್  ಹೇಳಿದ್ದಾರೆ.

ಡೋಕ್ಲಾಮ್ ಪ್ರದೇಶದಲ್ಲಿಯೂ ಹಿಂದೆ ಸಂಘರ್ಷ ಆಗಿತ್ತು. ಅಮೆರಿಕ ಸರ್ಕಾರದ ಪರವಾಗಿ ನಾನು ಹೇಳಿಕೆ ನೀಡುತ್ತಿಲ್ಲ. ಇದು ನನ್ನ ಅಭಿಪ್ರಾಯ ಎಂದು ಡೇವಿಡ್ ಸ್ಟಿಲ್‌ ವೆಲ್  ಹೇಳಿದ್ದಾರೆ.

ಲಡಾಕ್ ಗ್ವಾಲ್ವಾನ್ ಪ್ರದೇಶದಲ್ಲಿ ಭಾರತ- ಚೀನಾ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟಿದ್ದು ಭಾರತದ  20  ಯೋಧರು ಪ್ರಾಣ ತ್ಯಾಗ ಮಾಡಿದ್ದರು.  ಇದಾದ ಮೇಲೆ ಎರಡು ರಾಷ್ಟ್ರಗಳು ಗಡಿಗೆ ತಮ್ಮ ಸೈನ್ಯದ ತುಕಡಿಗಳನ್ನು ರವಾನೆ ಮಾಡಿದ್ದವು.

click me!