
ಒಟ್ಟಾವಾ (ಅ.19): ಒಂದೆಡೆ ಖಲಿಸ್ತಾನಿ ಉಗ್ರರನ್ನು ಪ್ರಧಾನಿ ಜಸ್ಟಿನ್ ಟ್ರುಡೋ ಬೆಂಬಲಿಸುತಿದ್ದರೆ, ಮತ್ತೊಂದೆಡೆ ಕೆನಡಾದ ವಿಪಕ್ಷ ನಾಯಕ ಮ್ಯಾಕ್ಸಿಮೆ ಬೆರ್ನಿಯರ್ ಇತ್ತೀಚೆಗೆ ಹತ್ಯೆಯಾದ ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ವಿದೇಶಿ ಉಗ್ರ ಎಂದು ಬಣ್ಣಿಸಿದ್ದಾರೆ. ಅಲ್ಲದೆ ಆತನ ಹತ್ಯೆಯಲ್ಲಿ ಭಾರತದ ಕೈವಾಡದ ಯಾವ ಸಾಕ್ಷ್ಯವನ್ನೂ ನಾವು ಭಾರತಕ್ಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ನಿಜ್ಜರ್ ಹತ್ಯೆಗೆ ಭಾರತ ಕಾರಣ ಎಂದಿದ್ದ ಟ್ರುಡೋಗೆ ತಪರಾಕಿ ಹಾಕಿದ್ದಾರೆ.
ಈ ಕುರಿತು 'ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಮ್ಯಾಕ್ಸಿಮೆ ಬೆರ್ನಿಯ 'ಇಡೀ ಸಮಸ್ಯೆಯ ಮೂಲವಾಗಿರುವ ಹರ್ದೀಪ್ ಸಿಂಗ್ ನಿಜ್ಜರ್ ಒಬ್ಬ ವಿದೇಶಿ ಉಗ್ರ. ಆತ 1997ರಿಂದಲೂ ನಕಲಿ ದಾಖಲೆ ಬಳಸಿ ಪೌರತ್ವಕ್ಕೆ ಪ್ರಯತ್ನಿಸುತ್ತಿದ್ದ. ಹೀಗೆ ನಕಲಿ ದಾಖಲೆ ಸಲ್ಲಿಸಿ ಪೌರತ್ವ ಪಡೆದ ಆತನಂಥ ಸಾವಿರಾರು ಜನರನ್ನು ಗಡಿಪಾರು ಮಾಡಬೇಕಿತ್ತು. ಇದೀಗ ಆತ ಸತ್ತ ಬಳಿಕವಾದರೂ ಈ ಲೋಪ ಸರಿಪಡಿಸಬೇಕು' ಎಂದು ಹೇಳಿದ್ದಾರೆ. ಅಲ್ಲದೆ 'ಸರ್ಕಾರದ ಇತರೆ ಸಮಸ್ಯೆ ಮರೆಮಾಚಲು ಪ್ರಧಾನಿ ಟ್ರುಡೋ ಈ ವಿಷಯ ಬಳಸುತ್ತಿದ್ದಾರೆ. ಇದು ನಿಜವಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆದರೆ ಆರೋಪ ಸಾಬೀತುಪಡಿಸುವ ಯಾವುದೇ ಸಾಕ್ಷ್ಯವನ್ನೂ ನಾವು ಭಾರತಕ್ಕೆ ನೀಡಿಲ್ಲ ಎಂದು ಬೆರ್ನಿಯರ್ ಹೇಳಿದ್ದಾರೆ.
ಯೂಟರ್ನ್ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋಗೆ ಭಾರತದ ತೀವ್ರ ತರಾಟೆ
ಕೆನಡಾ ವಿಪಕ್ಷ ಹೇಳಿದ್ದೇನು?: ಹರ್ದೀಪ್ ಸಿಂಗ್ ನಿಜ್ಜರ್ ಒಬ್ಬ ವಿದೇಶಿ ಉಗ್ರ. ಆತ 1997ರಿಂದಲೂ ನಕಲಿ ದಾಖಲೆ ಬಳಸಿ ಪೌರತ್ವಕ್ಕೆ ಪ್ರಯತ್ನಿಸುತ್ತಿದ್ದ. ಅಂತಿಮವಾಗಿ 2007ರಲ್ಲಿ ನಕಲಿ ದಾಖಲೆ ಸಲ್ಲಿಸಿ ಕೆನಡಾ ಪೌರತ್ವ ಪಡೆದಿದ್ದಾನೆ. ಆತನಂಥ ಸಾವಿರಾರು ಜನರನ್ನು ಗಡಿಪಾರು ಮಾಡಬೇಕಿತ್ತು. ಈಗ ಆತ ಸತ್ತ ಬಳಿಕವಾದರೂ ಈ ಲೋಪ ಸರಿಪಡಿಸಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ