ಕಾಂಬೋಡಿಯ - ಥಾಯ್‌ ಕದನ ವಿರಾ​ಮಕ್ಕೆ ಒಪ್ಪಿ​ಗೆ

Kannadaprabha News   | Kannada Prabha
Published : Jul 26, 2025, 05:04 AM IST
Thailand Cambodia

ಸಾರಾಂಶ

ಗಡಿಯಲ್ಲಿರುವ ಹಿಂದೂ ಶಿವ ದೇವ​ಸ್ಥಾನದ ಮೇಲಿನ ಅಧಿಕಾರದ ವಿಚಾರವಾಗಿ ಆರಂಭವಾಗಿದ್ದ ಥಾಯ್ಲೆಂಡ್‌ ಮತ್ತು ಕಾಂಬೋಡಿಯಾ ಸಮ​ರ​ಕ್ಕೆ 2ನೇ ದಿನ​ವಾದ ಶುಕ್ರ​ವಾರ ಬ್ರೇಕ್‌ ಬಿದ್ದಿದ್ದು, ಕದನ ವಿರಾ​ಮಕ್ಕೆ ಉಭಯ ದೇಶ​ಗಳು ಸಮ್ಮ​ತಿ​ಸಿವೆ.

ಸುರಿನ್‌: ಗಡಿಯಲ್ಲಿರುವ ಹಿಂದೂ ಶಿವ ದೇವ​ಸ್ಥಾನದ ಮೇಲಿನ ಅಧಿಕಾರದ ವಿಚಾರವಾಗಿ ಆರಂಭವಾಗಿದ್ದ ಥಾಯ್ಲೆಂಡ್‌ ಮತ್ತು ಕಾಂಬೋಡಿಯಾ ಸಮ​ರ​ಕ್ಕೆ 2ನೇ ದಿನ​ವಾದ ಶುಕ್ರ​ವಾರ ಬ್ರೇಕ್‌ ಬಿದ್ದಿದ್ದು, ಕದನ ವಿರಾ​ಮಕ್ಕೆ ಉಭಯ ದೇಶ​ಗಳು ಸಮ್ಮ​ತಿ​ಸಿವೆ.

ಮಲೇಷ್ಯಾ ಪ್ರಧಾನಿ ಅನ್ವರ್‌ ಇಬ್ರಾ​ಹಿಂ ಅವರು ಕಾಂಬೋ​ಡಿಯಾ ಪ್ರಧಾನಿ ಹುನ್‌ ಮಾನೆಟ್‌ ಹಾಗೂ ಥಾಯ್ಲೆಂಡ್‌ ಪ್ರಧಾನಿ ವೆಚಾ​ಯಾಯೈ ಜತೆ ಫೋನ್‌ ಮಾತು​ಕತೆ ನಡೆ​ಸಿ​ದರು. ಬಳಿಕ ಉಭಯ ದೇಶ​ಗಳು ಕದ​ನಕ್ಕೆ ಸಮ್ಮ​ತಿ​ಸಿ​ದರು.

ಈ ವಿಷ​ಯ​ವನ್ನು ಖುದ್ದು ಇಬ್ರಾಹಿಂ ಬಹಿ​ರಂಗ​ಪ​ಡಿ​ಸಿ​ದ್ದಾರೆ. ಆದರೆ ನಮಗೆ ಸಮರ ನಿಲ್ಲಿ​ಸಲು ಸಮ್ಮತಿ ಇದೆ. ಕಾಂಬೋ​ಡಿಯಾ ಕೂಡ ಕದ​ನ​ವಿ​ರಾ​ಮಕ್ಕೆ ಬದ್ಧತೆ ವ್ಯಕ್ತ​ಪ​ಡಿ​ಸ​ಬೇಕು ಎಂದು ಥಾಯ್ಲೆಂಡ್‌ ಸ್ಪಷ್ಟ​ಪ​ಡಿ​ಸಿ​ದೆ.

ಸೇನಾ ಕಾನೂ​ನು: ಇದಕ್ಕೂ ಮುನ್ನ ಥಾಯ್ಲೆಂಡ್‌ನ ಈಶಾನ್ಯ ಗಡಿಯ 8 ಜಿಲ್ಲೆ​ಗಳಲ್ಲಿ ಸಮರ ಕಾನೂನು ಘೋಷಿಸಲಾಗಿತ್ತು. ಇದರರ್ಥ, ಥಾಯ್‌ ಸರ್ಕಾರವು ಸೇನೆಗೆ ಕಾಂಬೋಡಿಯಾ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಅಧಿಕಾರ ನೀಡಿತ್ತು.16 ಸಾವು: ಇದರ ನಡುವೆ, ಗಡಿಭಾಗದ ಎರಡೂ ದೇಶಗಳ 1.38 ಲಕ್ಷ ಜನ ಗುಳೆ ಹೋಗಿದ್ದಾರೆ. ಸಮರದಲ್ಲಿ ಎರಡೂ ದೇಶಗಳ ಒಟ್ಟಾರೆ ಮೃತರ ಸಂಖ್ಯೆ 16ಕ್ಕೇರಿದೆ. ಇದ​ರಲ್ಲಿ ಕಾಂಬೋ​ಡಿ​ಯಾದ ನಾಲ್ವರು ಥಾಯ್ಲೆಂಡ್‌ನ 14 ಜನರು ಇದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!