ಇಟಲಿಯಲ್ಲೂ ಬುರ್ಖಾ, ನಿಖಾಬ್‌ ನಿಷೇಧ?

Kannadaprabha News   | Kannada Prabha
Published : Oct 12, 2025, 04:14 AM IST
burqa

ಸಾರಾಂಶ

ಫ್ರಾನ್ಸ್‌, ಸ್ವೀಡನ್‌ ಮಾದರಿಯಲ್ಲೇ ಇದೀಗ ಇಟಲಿ ಕೂಡ ದೇಶಾದ್ಯಂತ ಶಾಲೆಗಳು, ಕಚೇರಿಗಳು, ಅಂಗಡಿಗಳು ಸೇರಿ ಸಾರ್ವಜನಿಕ ಪ್ರದೇಶಗಳಲ್ಲಿ ಶಾಲೆಗಳು, ಬುರ್ಖಾ, ನಿಖಾಬ್‌ ನಿಷೇಧಕ್ಕೆ ಮುಂದಾಗಿದೆ.

ರೋಮ್‌: ಫ್ರಾನ್ಸ್‌, ಸ್ವೀಡನ್‌ ಮಾದರಿಯಲ್ಲೇ ಇದೀಗ ಇಟಲಿ ಕೂಡ ದೇಶಾದ್ಯಂತ ಶಾಲೆಗಳು, ಕಚೇರಿಗಳು, ಅಂಗಡಿಗಳು ಸೇರಿ ಸಾರ್ವಜನಿಕ ಪ್ರದೇಶಗಳಲ್ಲಿ ಶಾಲೆಗಳು, ಬುರ್ಖಾ, ನಿಖಾಬ್‌ ನಿಷೇಧಕ್ಕೆ ಮುಂದಾಗಿದೆ. ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಬ್ರದರ್ಸ್‌ ಆಫ್‌ ಇಟಲಿ ಪಕ್ಷ ಈ ಸಂಬಂಧ ಕರಡು ನಿಯಮ ರೂಪಿಸಿದೆ. ಒಂದು ವೇಳೆ ಈ ನಿಯಮ ಉಲ್ಲಂಘಿಸಿದರೆ 30 ಸಾವಿರದಿಂದ 3 ಲಕ್ಷ ರು. ವರೆಗೂ ದಂಡ ವಿಧಿಸಲು ಚಿಂತನೆ ನಡೆಸಿದೆ.

ದೇಶದಲ್ಲಿ ಇಸ್ಲಾಮಿಕ್‌ ಪ್ರತ್ಯೇಕವಾದವನ್ನು ನಿಯಂತ್ರಣ ಹಾಗೂ ಮಹಿಳಾ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಇಂಥ ಕ್ರಮ ಕೈಗೊಂಡಿದೆ.

ಇದರ ಜತೆಗೆ ಧಾರ್ಮಿಕ ಸಂಸ್ಥೆಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು, ವಿದೇಶಿ ನಿಧಿ ಮೇಲೆ ನಿಗಾ ಮತ್ತು ಕನ್ಯತ್ವ ಪರೀಕ್ಷೆ, ಬಲವಂತದ ಮದುವೆ ಮೇಲೆ ನಿರ್ಬಂಧದಂಥ ಪ್ರಸ್ತಾಪವೂ ಕರಡು ಕಾನೂನಲ್ಲಿದೆ. ಈ ಕ್ರಮಗಳು ಇಟಲಿಯ ಅಸ್ಮಿತೆ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿಮಾಡದೆ ಮಹಿಳಾ ಸ್ವಾತಂತ್ರ್ಯವನ್ನು ರಕ್ಷಿಸಲು ನೆರವಾಗಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಫ್ರಾನ್ಸ್‌, ಬೆಲ್ಜಿಯಂ, ಡೆನ್ಮಾರ್ಕ್‌ ಸೇರಿ ಈಗಾಗಲೇ 20ಕ್ಕೂ ಹೆಚ್ಚು ದೇಶಗಳಲ್ಲಿ ಬುರ್ಖಾ, ನಿಖಾಬ್‌ ನಿಷೇಧದ ಕಾನೂನು ಜಾರಿಯಲ್ಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟ್ಟ ಮಕ್ಕಳಂತೆ ವೆಡ್ಡಿಂಗ್ ಕೇಕ್ ರುಚಿ ನೋಡಿದ ವರ: ಆಕ್ಷೇಪಿಸಿದ ವಧು: ಆಮೇಲಾಗಿದ್ದು ದುರಂತ: ವೀಡಿಯೋ
ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಸಮಾರಂಭದಲ್ಲಿ ಪ್ರಿಯಾಂಕಾ ಚೋಪ್ರಾ-ನಿಕ್ ಜೋನಾಸ್ ಜೋಡಿಯ ಮಿಂಚಿನ ಸಂಚಾರ!