ಭಾರತ ‘ಅಸಹಿಷ್ಣು’: ಬ್ರಿಟನ್‌ ಮ್ಯಾಗಜಿನ್‌ ವಿವಾದಿತ ಲೇಖನ

By Kannadaprabha NewsFirst Published Jan 25, 2020, 2:13 PM IST
Highlights

ಭಾರತ ‘ಅಸಹಿಷ್ಣು’: ಬ್ರಿಟನ್‌ ಮ್ಯಾಗಜಿನ್‌ ವಿವಾದಿತ ಲೇಖನ| ಮುಳ್ಳಿನ ತಂತಿ ಬೇಲಿಯ ಮಧ್ಯೆ ಕಮಲದ ಹೂವು ಅರಳಿರುವ ಚಿತ್ರ

ಲಂಡನ್‌[ಜ.25]: ಬ್ರಿಟನ್‌ ಮೂಲದ ‘ಎಕಾನಾಮಿಸ್ಟ್‌’ ವಾರ ಪತ್ರಿಕೆ ‘ಇನ್‌ಟಾಲರೆಂಟ್‌ ಇಂಡಿಯಾ’ (ಅಸಹಿಷ್ಣು ಭಾರತ) ಎಂಬ ಶೀರ್ಷಿಕೆಯಲ್ಲಿ ಮುಖಪುಟ ಲೇಖನವನ್ನು ಪ್ರಕಟಿಸಿ ವಿವಾದ ಸೃಷ್ಟಿಸಿದೆ.

ಬೆಳೆ ಹಾನಿಗೆ ಪರಿಹಾರ ಕೇಳಲು ವಿಧಾನಸಭೆಗೆ ಮಿಡತೆ ತಂದ ಶಾಸಕ!

ಈ ಲೇಖನಕ್ಕೆ ಮುಳ್ಳಿನ ತಂತಿ ಬೇಲಿಯ ಮಧ್ಯೆ ಕಮಲದ ಹೂವು ಅರಳಿರುವ ಚಿತ್ರವನ್ನು ಬಳಕೆ ಮಾಡಲಾಗಿದೆ. ಭಾರತದಲ್ಲಿ ಇತ್ತೀಚೆಗೆ ಜಾರಿ ಮಾಡಿದ ಸಿಎಎ ಕಾಯ್ದೆಯ ಕುರಿತಾಗಿ ಕಪೋಲಕಲ್ಪಿತ ಮಾಹಿತಿಯನ್ನು ಲೇಖನದಲ್ಲಿ ನೀಡಲಾಗಿದೆ. ಭಾರತದಲ್ಲಿರುವ 20 ಕೋಟಿ ಮುಸ್ಲಿಮರ ಪೈಕಿ ಹಲವರಿಗೆ ತಾವು ಭಾರತೀಯರು ಎಂದು ಸಾಬೀತುಪಡಿಸುವ ದಾಖಲೆಗಳು ಇಲ್ಲ. ಹೀಗಾಗಿ ಅವರು ದೇಶದಿಂದ ಹೊರಬೀಳುವ ಅಪಾಯವನ್ನು ಎದುರಿಸುತ್ತಿದ್ದಾರೆ.

ಅಲ್ಲದೇ ಸರ್ಕಾರ ಸರ್ಕಾರ ಸೂಕ್ತ ದಾಖಲೆ ಇಲ್ಲದೇ ವಾಸಿಸುತ್ತಿರುವವರನ್ನು ಕೂಡಿಡಲು ಬಂಧನ ಗೃಹಗಳ ನಿರ್ಮಾಣಕ್ಕೆ ಆದೇಶಿಸಿದೆ ಎಂದು ಲೇಖನದಲ್ಲಿ ಬರೆಯಲಾಗಿದೆ. ಅಲ್ಲದೇ ಮೋದಿ ಸರ್ಕಾರ ಪ್ರಜಾಪ್ರಭುತ್ವಕ್ಕೆ ಅಪಾಯ ತಂದೊಡ್ಡುತ್ತಿದೆ ಎಂದು ಲೇಖನದಲ್ಲಿ ಆರೋಪಿಸಲಾಗಿದೆ. ಪತ್ರಿಕೆಯ ಈ ಲೇಖನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ- ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಬಿಜೆಪಿಯಿಂದ ಸೆಲ್ಫಿ ವಿತ್‌ ತಿರಂಗಾ ಅಭಿಯಾನ!

click me!