ಅಮೆರಿಕದ ಬಳಿಕ ಹುವೈ ಟೆಲಿಕಾಂ ಉಪಕರಣಕ್ಕೆ ಬ್ರಿಟನ್‌ ಸರ್ಕಾರ ನಿಷೇಧ!

By Kannadaprabha NewsFirst Published Jul 15, 2020, 9:09 AM IST
Highlights

ಅಮೆರಿಕದ ಬಳಿಕ ಹುವೈ  ಟೆಲಿಕಾಂ ಉಪಕರಣಕ್ಕೆ  ಬ್ರಿಟನ್‌ ಸರ್ಕಾರ ನಿಷೇಧ| ಚೀನಾ ಮೂಲಕ ಟೆಲಿಕಮ್ಯುನಿಕೇಶನ್‌ ದೈತ್ಯ ಹುವೈಗೆ ಅಮೆರಿಕ ನಿಷೇಧ 

ಲಂಡನ್(ಜು.15): ಚೀನಾ ಮೂಲಕ ಟೆಲಿಕಮ್ಯುನಿಕೇಶನ್‌ ದೈತ್ಯ ಹುವೈಗೆ ಅಮೆರಿಕ ನಿಷೇಧ ಹೇರಿದ ಬೆನ್ನಲ್ಲೇ, ಬ್ರಿಟನ್‌ ಕೂಡ ಅದೇ ದಾರಿ ಅನುಸರಿಸಿದೆ.

ತನ್ನ ಹೈಸ್ಪೀಡ್‌ ಇಂಟರ್ನೆಟ್‌ ಯೋಜನೆಗೆ ಹುವೈ ಕಂಪನಿಯಿಂದ ನೆಟ್‌ವರ್ಕ್ ಪರಿಕರಗಳನ್ನು ಖರೀದಿ ಮಾಡುವ ನಿರ್ಧಾರದಿಂದ ಬ್ರಿಟನ್‌ ಹಿಂದೆ ಸರಿದಿದೆ. ಚೀನಾ ನಿರ್ಮಿತ ಪರಿಕರಗಳಿಂದ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇರುವುದರಿಂದ ನಿಷೇಧ ಹೇರಲಾಗಿದೆ ಎಂದು ಬ್ರಿಟನ್‌ ಹೇಳಿದೆ.

ಅಲ್ಲದೇ ಸದ್ಯ ಬಳಕೆಯಲ್ಲಿರುವ ಉಪಕರಣಗಳನ್ನು 2026ಕ್ಕಿಂತ ಮುಂಚಿತವಾಗಿ ಬದಲಾಯಿಸಬೇಕು ಎಂದು ಟೆಲಿಕಾಂ ಕಂಪನಿಗಳಿಗೆ ಸೂಚನೆ ನೀಡಲಾಗಿದೆ. 2024ರ ಬ್ರಿಟನ್‌ ಚುನಾವಣೆಯಲ್ಲಿ ಹುವೈ ಮೂಲಕ ಚೀನಾ ಹಸ್ತಕ್ಷೇಪ ಮಾಡಲಿದೆ ಎನ್ನುವ ಶಂಕೆ ವ್ಯಕ್ತವಾಗಿತ್ತು.

click me!