ಡ್ರಗ್ಸ್ ಪೆಡ್ಲರ್‌ಗಳ ವಿರುದ್ಧ ಆಪರೇಷನ್, ಸಾವು ಕಂಡವರು 28 ಮಂದಿ

By Suvarna NewsFirst Published May 8, 2021, 9:02 PM IST
Highlights

ಡ್ರಗ್ಸ್ ಡೀಲರ್ ಗಳ ವಿರುದ್ಧ ಪೊಲೀಸ್ ಕಾರ್ಯಾಚರಣೆ/ ಪೊಲೀಸ್ ಅಧಿಕಾರಿ ಸೇರಿ 28 ಜನ ಸಾವು/ ಬ್ರೆಜಿಲ್ ನ ಕೊಳಚೆ ಪ್ರದೇಶದದಲ್ಲಿ ಆಪರೇಷನ್/ ಘಟನೆ ಖಂಡಿಸಿದ ಮಾನವ ಹಕ್ಕುಗಳ ಸಂಘಟನೆ

ಬ್ರೆಜಿಲ್(ಮೇ 08)  ಜಗತ್ತು ಕೊರೋನಾ ವಿರುದ್ಧದ ಹೋರಾಟದಲ್ಲಿ ನಿರತವಾಗಿದ್ದರೆ ಬ್ರೆಜಿಲ್ ನಲ್ಲಿ ಡ್ರಗ್ಸ್ ಪೆಡ್ಲರ್ ಗಳು ಮತ್ತು ಪೊಲೀಸರ ನಡುವೆ ಗುಂಡಿನ  ಕಾಳಗ ನಡೆದಿದ್ದು ಪೊಲೀಸ್ ಅಧಿಕಾರಿ ಸೇರಿ 28 ಜನ ಸಾವುಕಂಡಿದ್ದಾರೆ,  

 ರಿಯೊ ಡಿ ಜನೈರೊ ದಲ್ಲಿ ಡ್ರಗ್ಸ್  ಗ್ಯಾಂಗ್ ಮೇಲೆ ಪೊಲೀಸರು ದಾಳಿ ಮಾಡಿದ್ದ ವೇಳೆ ಮೃತಪಟ್ಟವರ ಸಂಖ್ಯೆ ಸಂಖ್ಯೆ 28 ಕ್ಕೆ ಏರಿದೆ.  ಸಿನಿಮೀಯ ರೀತಿಯಲ್ಲಿ ಆಪರೇಷನ್ ನಡೆದಿತ್ತು.

ಕೊಳಚೆ ಪ್ರದೇಶದ ಬಳಿ ಮತ್ತೆ ಮೂವರು ಪುರುಷರ ಶವ ಪತ್ತೆಯಾಗಿದೆ. ಉತ್ತರ ರಿಯೊದ ಜಕರೆಜಿನ್ಹೋದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 24 ಜನರು ಸೇರಿ ಒಬ್ಬ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದರು.

ಕೆಜಿ ಚಿನ್ನವನ್ನು ಗುದದ್ವಾರದಲ್ಲಿ ಇಟ್ಟುಕೊಂಡಿದ್ದ ಕಿಲಾಡಿ

ಡ್ರಗ್ಸ್ ಪೆಡ್ಲರ್ ಗಳು ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಶರಣಾಗಿ ಎಂದು ಸೂಚನೆ ನೀಡಿದರೂ ಕೇಳದ ದುಷ್ಕರ್ಮಿಗಳು ಪೊಲೀಸ್ ಅಧಿಕಾರಿಗಳ ಮೇಲೆಯೇ ದಾಳಿಗೆ ಮುಂದಾಗಿದ್ದರು.

ಒಂದು ಕಡೆ ಡ್ರಗ್ಸ್ ಪೆಡ್ಲರ್ ಗಳ ವಿರುದ್ಧ ಕಾರ್ಯಾಚರಣೆ ನಡೆದಿದ್ದರೆ ಘಟನೆಯನ್ನು ಮಾನವ ಹಕ್ಕುಗಳ ಸಂಘಟನೆಗಳು ಖಂಡಿಸಿವೆ.  ಅಮ್ನೆಸ್ಟಿ ಇಂಟರ್ನ್ಯಾಷನಲ್ ಸಂಘಟನೆ ಇದನ್ನು ಖಂಡನೀಯ ಮತ್ತು ನ್ಯಾಯಸಮ್ಮತವಲ್ಲದ ನಡವಳಿಕೆ ಎಂದು ಹೇಳಿದೆ.  ಕಾರ್ಯಾಚರಣೆಯ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಹೇಳಿದೆ.  ಈ ಬಗ್ಗೆ  ಯು.ಎನ್. ಮಾನವ ಹಕ್ಕುಗಳ ವಕ್ತಾರ ರೂಪರ್ಟ್ ಕೊಲ್ವಿಲ್ಲೆ ಹೇಳಿಕೆ ನೀಡಿದ್ದು ಪೊಲೀಸರು ಅಮಾನುಷವಾಗಿ ನಡೆದುಕೊಂಡಿದ್ದಾರೆ ಎಂದಿದ್ದಾರೆ.

click me!