ಡ್ರ್ಯಾಗನ್‌ಗೆ ಕನ್ನಡಿ ಹಿಡಿದ ಭಾರತ, ಚೀನಾ ಅಧ್ಯಕ್ಷತೆಯ ಸಭೆಗೆ ಜೈಶಂಕರ್ ಬಹಿಷ್ಕಾರ!

By Suvarna News  |  First Published May 8, 2021, 4:54 PM IST

ಡ್ರ್ಯಾಗನ್‌ ನರಿ ಬುದ್ಧಿ, ಪಾಠ ಕಲಿಸಿದ ಭಾರತ| ಡ್ರ್ಯಾಗನ್‌ಗೆ ಕನ್ನಡಿ ಹಿಡಿದ ಭಾರತ, ಚೀನಾ ಅಧ್ಯಕ್ಷತೆಯ ಸಭೆಗೆ ಜೈಶಂಕರ್ ಬಹಿಷ್ಕಾರ| ಲಡಾಖ್ ಹಿಂಸಾತ್ಮಕ ಸಂಘರ್ಷದ ಬಳಿಕ ತನ್ನ ನಿಲುವು ಸ್ಪಷ್ಟಪಡಿಸಿದ ಭಾರತ


ನವದೆಹಲಿ(ಮೇ.08): ಭಾರತ ಮತ್ತೊಮ್ಮೆ ಚೀನಾಗೆ ಕನ್ನಡಿ ತೋರಿಸಿದೆ. ವಿದೇಶಾಂಗ ಸಚಿಬ ಎಸ್‌. ಜೈಶಂಕರ್ ಚೀನಾ ಅಧ್ಯಕ್ಷತೆಯ ಸಂಯುಕ್ತ ರಾಷ್ಟ್ರ ಭದ್ರತಾ ಪರಿಷತ್ ಸಭೆಯನ್ನು ಬಹಿಷ್ಕರಿಸಿದ್ದಾರೆ. ಕಳೆದ ವರ್ಷ ಪೂರ್ವ ಲಡಾಖ್‌ನಲ್ಲಿ ಉಭಯ ದೇಶದ ಸೈನಿಕರ ನಡುವಿನ ಹಿಂಸಾತ್ಮಕ ಸಂಘರ್ಷದ ಬಳಿಕ ಭಾರತದ ಪರವಾಗಿ ಇದು ಚೀನಾಗೆ ಕಠಿಣ ಸಂದೇಶ ಎನ್ನಲಾಗಿದೆ.

ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಅಧ್ಯಕ್ಷತೆಯಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರ ಅಧ್ಯಕ್ಷತೆಯಲ್ಲಿ ಬಹುಪಕ್ಷೀಯತೆ ಕುರಿತು ಸಚಿವರ ಸಭೆ ನಡೆಯಬೇಕಿತ್ತು. ಇದರಲ್ಲಿ ವಿದೇಶಾಂಗ ಕಾರ್ಯದರ್ಶಿ ಹರ್ಷ್ ಶಿಂಗ್ರುಲಾ ಅವರನ್ನು ಭಾರತವನ್ನು ಪ್ರತಿನಿಧಿಸಿದರು.

Tap to resize

Latest Videos

undefined

ಕೊರೋನಾದಿಂದಾಗಿ ಜಾಗತಿಕ  ದೌರ್ಬಲ್ಯ ಹಾಗೂ ಎಡವಟ್ಟುಗಳ ಅನಾವರಣ

ಈ ಸಭೆಯಲ್ಲಿ ಎಲ್ಲಾ ಸದಸ್ಯ ರಾಷ್ಟ್ರಗಳ ಸಚಿವರು ಭಾಗಿಯಾಗಿದ್ದರು. ಆದರೆ ವಿದೇಶಾಂಗ ಸಚಿವ ಜೈಶಂಕರ್ ಗೈರುಹಾಜರಿ ಭಾರತದ ನಿಲುವನ್ನು ಸ್ಪಷ್ಟಪಡಿಸಿತ್ತು. ಇನ್ನು ಈ ಸಭೆಯಲ್ಲಿ ಕೊರೋನಾದಿಂದಾಗಿ ಜಾಗತಿಕ  ದೌರ್ಬಲ್ಯ ಹಾಗೂ ಎಡವಟ್ಟುಗಳ ಅನಾವರಣವಾಗಿದೆ ಎಂಬ ನಿಲುವು ಕೂಡಾ ಪ್ರಸ್ತುತಪಡಿಸಲಾಘಿದೆ. 

ಇತರ ದೇಶಗಳ ಸಭೆಯಲ್ಲಿ ಸಚಿವ ಜೈಶಂಕರ್ ಭಾಗಿ

ಭಾರತವು ಜನವರಿಯಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಗೆ ತಾತ್ಕಾಲಿಕ ಸದಸ್ಯರಾಗಿ ಸೇರಿಕೊಂಡಿತ್ತು. ಅಂದಿನಿಂದ, ವಿದೇಶಾಂಗ ಸಚಿವ ಜೈಶಂಕರ್ ಅವರು ಎಲ್ಲಾ ಸಚಿವ ಹಂತದ ಸಭೆಗಳಲ್ಲಿ ಭಾಗವಹಿಸಿದ್ದರು. ಜನವರಿಯಲ್ಲಿ ಟುನೀಶಿಯಾ, ಫೆಬ್ರವರಿಯಲ್ಲಿ ಬ್ರಿಟನ್ ಮತ್ತು ಏಪ್ರಿಲ್ನಲ್ಲಿ ವಿಯೆಟ್ನಾಂ ಅಧ್ಯಕ್ಷತೆ ವಹಿಸಿದ್ದ ಸಭೆಗಳಲ್ಲಿ ಭಾಗವಹಿಸಿದರು. ಚೀನಾ ಇನ್ನೂ ಎರಡು ಸಭೆಗಳನ್ನು ನಡೆಸಲಿದೆ. ಮೊದಲನೆಯದು ಆಫ್ರಿಕಾ ಮತ್ತು ಕರೋನಾ ಚೇತರಿಕೆ ಮತ್ತು ಎರಡನೆಯದು ಶಾಂತಿಪಾಲಕರ ಸುರಕ್ಷತೆಯನ್ನು ಸುಧಾರಿಸುವ ಕುರಿತಾದ ಸಭೆ ಇದಾಗಿರಲಿದೆ. ಆದರೆ ಕೊರೋನಾದಿಂದಾಗಿ ಈ ಎಲ್ಲಾ ಸಭೆಗಳು ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆಯುತ್ತಿವೆ. 

click me!