ಭಾರತದಲ್ಲೂ ಎರಡು ಸ್ವದೇಶಿ ನಿರ್ಮಿತ ಕೊರೋನಾ ಲಸಿಕೆಗೆ ಅನುಮತಿ| ಭಾರತದ ಲಸಿಕೆಗಗೆ ಅನುಮತಿ ಸಿಕ್ಕ ಬೆನ್ನಲ್ಲೇ ಭೇಷ್ ಎಂದ ಬಿಲ್ ಗೇಟ್ಸ್
ನವದೆಹಲಿ(ಜ.05): ಇಡೀ ವಿಶ್ವ ಇತ್ತೀಚೆಗೆ ಕೊರೋನಾ ಲಸಿಕೆ ನಿರ್ಮಾಣ ಹಾಗೂ ಅದರ ಪ್ರಯೋಗ ಸಂಬಂಧ ಸಂಘರ್ಷ ನಡೆಸುತ್ತಿದೆ. ಇತ್ತ ಭಾರತ ಕೂಡಾ ಎರಡು ಸ್ವದೇಶೀ ಕೊರೋನಾ ಲಸಿಕೆ ನಿರ್ಮಿಸಿದೆ ಹಾಗೂ ಇದರ ತುರ್ತು ಬಳಕೆಗೆ ಅನುಮತಿ ನೀಡಿದೆ. ಭಾರತದ ಈ ಯಶಸ್ಸಿಗೆ ವಿಶ್ವದ ಪ್ರಸಿದ್ಧ ಉದ್ಯಮಿ ಬಿಲ್ ಗೇಟ್ಸ್ ಕೂಡಾ ಭೇಷ್ ಎಂದಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಬಿಲ್ ಗೇಟ್ಸ್ ಇಡೀ ವಿಶ್ವವೇ ಕೊರೋನಾ ವೈರಸ್ ನಿಯಂತ್ರಿಸಲು ಹೋರಾಡುತ್ತಿರುವ ಸಂದರ್ಭದಲ್ಲಿ ಭಾರತದ ವೈಜ್ಞಾನಿಕ ನಾಯಕತ್ವ ಹಾಗೂ ಲಸಿಕೆ ನಿರ್ಮಾಣದಲ್ಲಿ ತೋರುತ್ತಿರುವ ಕ್ಷಮತೆ ಅದ್ಭುತ ಎಂದಿದ್ದಾರೆ.
It’s great to see India’s leadership in scientific innovation and vaccine manufacturing capability as the world works to end the COVID-19 pandemic https://t.co/Ds4f3tmrm3
— Bill Gates (@BillGates)ಭಾರತ್ ಬಯೋಟೆಕ್‌ನ ಸ್ವದೇಶೀ ನಿರ್ಮಿತ ಲಸಿಕೆ ಹಾಗೂ ಸೀರಂ ಇನ್ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಲಸಿಕೆಯ ಬಳಕೆಗೆ ಡಿಜಿಸಿಐ ಭಾನುವಾರ ಅನುಮತಿ ನೀಡಿದೆ. ಇದರೊಂದಿಗೆ ಅತ್ತ ಜಾಯ್ಡಸ್ ಹೆಲ್ತ್‌ಕೇರ್‌ನ ಜಯ್‌ಕೋವ್-ಡಿಯ ಮೂರನೇ ಹಂತದ ಪ್ರಯೋಗಕ್ಕೂ ಅನುಮತಿ ನೀಡಿತ್ತು.
undefined
ಕೋವ್ಯಾಕ್ಸಿನ್‌ನ ಎರಡು ಕೋಟಿ ಡೋಸ್ ರೆಡಿ
ಭಾರತ್ ಬಯೋಟೆಕ್ ಲಸಿಕೆ ಉತ್ಪಾದನೆ ಸಂಬಂಧ ಹೇಳಿಕೆ ನಿಡುತ್ತಾ ಕಂಪನಿ ಲಸಿಕೆ ಉತ್ಪಾದನೆಗೆ ನಾಲ್ಕು ವಿಭಾಗಗಳನ್ನು ಸ್ಥಾಪಿಸಲಿದದೆ. ಮೂರು ಹೈದರಾಬಾದ್ ಹಾಗೂ ಒಂದು ಬೆಂಗಳೂರಿನಲ್ಲಿ. ಇವು ಪ್ರತಿ ವರ್ಷ ಸುಮಾರು ಎಪ್ಪತ್ತು ಕೋಟಿ ಡೋಸ್ ಉತ್ಪಾದಿಸಲಿದೆ ಎಂದಿದೆ.