ಚುನಾವಣೆ ಮುಗಿದರೂ ನಿಲ್ಲದ ಟೀಕೆ: ಬೈಡೆನ್ ವಿರುದ್ಧ ಗಂಭೀರ ಆರೋಪ!

By Suvarna News  |  First Published Nov 16, 2020, 6:51 PM IST

ಅಮೆರಿಕಾದಲ್ಲಿ ಚುನಾವಣೆ  ನಡೆದು,  ಫಲಿತಾಂಶಗಳು ಹೊರಬಿದ್ದ ಬಳಿಕವೂ ನಿಲ್ಲದ ವಾಗ್ದಾಳಿ| ಬೈಡೆನ್ ಸಂಸ್ಥೆಯು ಮಿಯನ್‌ಗಟ್ಟಲೆ ಡಾಲರ್‌ ಹಣವನ್ನು ದೇಣಿಗೆ ರೂಪದಲ್ಲಿ ಪಡೆದು ದುರುಪಯೋಗ ಮಾಡಿದೆ| ಟ್ರಂಪ್ ಗಂಭೀರ ಆರೋಪ


ವಾಷಿಂಗ್ಟನ್(ನ.16): ಅಮೆರಿಕಾದಲ್ಲಿ ಚುನಾವಣೆ  ನಡೆದು,  ಫಲಿತಾಂಶಗಳು ಹೊರಬಿದ್ದ ಬಳಿಕವೂ ಡೊನಾಲ್ಡ್ ಟ್ರಂಪ್ ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌ ವಿರುದ್ಧ ಟೀಕಾಪ್ರಹಾರ ಮುಂದುವರೆಸಿದ್ದಾರೆ.ಬೈಡೆನ್ ಕ್ಯಾನ್ಸರ್‌ ಇನಿಶಿಯೇಟಿವ್ ಎಂಬ ಚ್ಯಾರಿಟಿ ಸಂಸ್ಥೆಯು ಎಕ್ಸಿಕ್ಯೂಟಿವ್‌ಗಳ ಸಂಬಳಕ್ಕಾಗಿ ಮಿಲಿಯನ್‌ಗಟ್ಟಲೇ ಹಣ ಸುರಿದಿದೆ, ಆದರೆ ಕ್ಯಾನ್ಸರ್‌ ಸಂಶೋಧನೆಗಾಗಿ ಒಂದೂ ನಯಾಪೈಸೆ ಖರ್ಚು ಮಾಡಿಲ್ಲ, ಎಂದು ಟ್ರಂಪ್ ಆರೋಪಿಸಿದ್ದಾರೆ. 

ಅಮೆರಿಕ ಮೇಲೆ ಕೋವಿಡ್‌ ಲಾಕ್‌ಡೌನ್‌ ತೂಗುಕತ್ತಿ!

Latest Videos

undefined

ಐಆರ್‌ಎಸ್‌ ಫೈಲಿಂಗ್ಸ್ ದಾಖಲೆಗಳ ಆಧಾರದಲ್ಲಿ ನ್ಯೂಯಾರ್ಕ್ ಪೋಸ್ಟ್ ಈ ಬಗ್ಗೆ ವಿಸ್ತೃತ ವರದಿ ಮಾಡಿದೆ. ಬೈಡೆನ್ ಸಂಸ್ಥೆಯು ಮಿಯನ್‌ಗಟ್ಟಲೆ ಡಾಲರ್‌ ಹಣವನ್ನು ದೇಣಿಗೆ ರೂಪದಲ್ಲಿ ಪಡೆದಿದೆ ಎಂದು ವರದಿ ಹೇಳಿದೆ.   

ಜೋ ಬೈಡೆನ್ ಮಗ ಬ್ಯೂ ಬೈಡೆನ್ 2015ರಲ್ಲಿ ಮೆದುಳಿನ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದ. ಆ ಬಳಿಕ 2017ರಲ್ಲಿ ಜೋ ಬೈಡೆನ್, ಕ್ಯಾನ್ಸರ್‌ಗೆ ಪರಿಣಾಮಕಾರಿ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಲು  ಬೈಡೆನ್ ಕ್ಯಾನ್ಸರ್‌ ಇನಿಶಿಯೇಟಿವ್‌ ಎಂಬ ಸಂಶೋಧನಾ ಸಂಸ್ಥೆ ಆರಂಭಿಸಿದ್ರು.

ಜಾಗತಿಕ ರಾಜಕೀಯ ಮಹಾಯುದ್ಧ 2020 : ಚುನಾವಣೆ ಮುಗಿದರೂ ‘ಹೋರಾಟ’ ಮುಗಿದಿಲ್ಲ!

ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಮುನ್ನವೂ ಜೋ ಬೈಡೆನ್ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿದ್ದುವು.  ಜೋ ಬೈಡೆನ್‌ ಉಪಾಧ್ಯಕ್ಷರಾಗಿದ್ದಾಗ, ಅಧಿಕಾರ ದುರ್ಬಳಕೆ ಮಾಡಿ ತನ್ನ ಪುತ್ರನ ವ್ಯಾಪಾರ- ವ್ಯವಹಾರಕ್ಕೆ ನೆರವಾಗಿದ್ದರು ಎಂದು ಆರೋಪಿಸಲಾಗಿತ್ತು.  

click me!