COP26 Summit| ಇಡೀ ವಿಶ್ವಕ್ಕೊಂದು ಪವರ್‌ಗ್ರಿಡ್‌: ‘ಕಾಪ್‌ 26’ ಶೃಂಗದಲ್ಲಿ ಮೋದಿ ಪರಿಕಲ್ಪನೆ!

By Kannadaprabha NewsFirst Published Nov 3, 2021, 6:56 AM IST
Highlights

* ಒಂದು ವಿಶ್ವ, ಒಂದು ಸೂರ್ಯ, ಒಂದು ಗ್ರಿಡ್‌ ಪರಿಕಲ್ಪನೆ

* ಇಡೀ ವಿಶ್ವಕ್ಕೊಂದು ಪವರ್‌ಗ್ರಿಡ್‌

* ಇಸ್ರೋದಿಂದ ಶೀಘ್ರ ಸೋಲಾರ್‌ ಪವರ್‌ ಕ್ಯಾಲುಕಲೇಟರ್‌

* ‘ಕಾಪ್‌ 26’ ಶೃಂಗದಲ್ಲಿ ಮೋದಿ ಪರಿಕಲ್ಪನೆ

ಗ್ಲಾಸ್ಗೋ(ನ.02): ಪರಿಸರಕ್ಕೆ ಮಾರಕವಾದ ಪಳೆಯುಳಿಕೆ ಇಂಧನಗಳ ಬದಲಾಗಿ ನವೀಕರಿಸಬಹುದಾದ ಇಂಧನಗಳ (Renewable Energy) ಬಳಕೆ ಹೆಚ್ಚಿಸಲು ಇಡೀ ವಿಶ್ವಕ್ಕೆ ಒಂದು ಪವರ್‌ಗ್ರಿಡ್‌ (Global Solar Power Grid) ಸ್ಥಾಪನೆಯ ಹೊಸ ಪರಿಕಲ್ಪನೆಯೊಂದನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಜಗತ್ತಿನ ಮುಂದೆ ಇರಿಸಿದ್ದಾರೆ.

ಮಂಗಳವಾರ ಇಲ್ಲಿ ನಡೆದ ಹವಾಮಾನ ಬದಲಾವಣೆ ಕುರಿತ ‘ಕಾಪ್‌-26’ ಶೃಂಗದಲ್ಲಿ (COP26 Summit) ಮಾತನಾಡಿದ ಪ್ರಧಾನಿ ಮೋದಿ, ‘ಜಾಗತಿಕ ಹವಾಮಾನ ಬದಲಾವಣೆಯ ಬಿಕ್ಕಟ್ಟು ನಿವಾರಿಸಲು ನಾವು ಮರಳಿ ಇತಿಹಾಸದ ಪುಟಗಳನ್ನು ತಿರುವಬೇಕಿದೆ. ನಮ್ಮ ಪುರಾತನ ಗ್ರಂಥಗಳು ಎಲ್ಲಾ ಜೀವರಾಶಿ ಮತ್ತು ಶಕ್ತಿಗಳ ಮೂಲ ಸೂರ್ಯ (Sun) ಎಂದು ನಮಗೆ ನಿರ್ದೇಶಿಸಿವೆ. ಎಲ್ಲಿಯವರೆಗೂ ನಾವು ಸೂರ್ಯನ ಜೊತೆಗಿದ್ದೆವೋ ಭೂಮಿ ಪ್ರವರ್ಧಮಾನಕ್ಕೆ ಬರುತ್ತಲೇ ಇತ್ತು. ಆದರೆ ನಾವು ಯಾವಾಗ ಸೂರ್ಯನಿಂದ ದೂರ ಸಾಗಲು ಆರಂಭಿಸಿದೆವೋ ನಮ್ಮ ಸಂಕಷ್ಟಗಳೂ ಆರಂಭವಾದವು. ಹೀಗಾಗಿ ಒಂದು ಸೂರ್ಯ, ಒಂದು ವಿಶ್ವ , ಒಂದು ಪವರ್‌ಗ್ರಿಡ್‌ ನಮ್ಮ ಸಮಸ್ಯೆಗೆ ಪರಿಹಾರ. ಒಂದು ಜಾಗತಿಕ ಗ್ರಿಡ್‌ ನಮಗೆ ಹೆಚ್ಚಿನ ಇಂಧನ ಒದಗಿಸುವುದರ ಜೊತೆಗೆ ಅದರ ಲಭ್ಯತೆಯನ್ನು ಸುಲಭಗೊಳಿಸುತ್ತದೆ. ಜೊತೆಗೆ ಅದು ಪರಿಸರದ ಮೇಲಿನ ಇಂಗಾಲದ ಅಡ್ಡ ಪರಿಣಾಮಗಳನ್ನೂ ಕಡಿಮೆ ಮಾಡುತ್ತದೆ’ ಎಂದು ಹೇಳಿದರು.

ಇಸ್ರೋದಿಂದ ಶೀಘ್ರ ಸೋಲಾರ್‌ ಪವರ್‌ ಕ್ಯಾಲುಕಲೇಟರ್‌:

ಈ ಯೋಜನೆಯ ಪೂರಕವಾಗಿ, ವಿಶ್ವದ ಯಾವುದೇ ಭಾಗದಲ್ಲಿ ಸೂರ್ಯನ ಶಕ್ತಿಯ ಲಭ್ಯತೆಯ ಕುರಿತು ತಾಜಾ ಮಾಹಿತಿ ಒದಗಿಸಲು ಶೀಘ್ರವೇ ಇಸ್ರೋ ಸೋಲಾರ್‌ ಪವರ್‌ ಕ್ಯಾಲುಕಲೇಟರ್‌ (ISRO Solar Power Calculator) ಅನ್ನು ಒದಗಿಸಲಿದೆ. ಪಳೆಯುಳಿಕೆ ಇಂಧನಗಳು ಕೈಗಾರಿಕಾ ಕ್ರಾಂತಿಯ ವೇಳೆ ಹಲವು ದೇಶಗಳನ್ನು ಶ್ರೀಮಂತ ಮಾಡಿದವು, ಆದರೆ ಅದೇ ವೇಳೆ ಅದು ನಮ್ಮ ಭೂಮಿ ಮತ್ತು ಪರಿಸರವನ್ನು ಬಡತನಕ್ಕೆ ತಳ್ಳಿದವು. ಪಳೆಯುಳಿಕೆ ಇಂಧನಗಳ ಸಂಗ್ರಹದ ಹೋರಾಟವು ಜಾಗತಿಕ ಮಟ್ಟದಲ್ಲಿ ಭಾರೀ ಸಂಘರ್ಷಕ್ಕೆ ಕಾರಣವಾದವು. ಆದರೆ ಇಂದು ಸೌರ ವಿದ್ಯುತ್‌ (Solar Power) ನಮಗೆ ಪರ್ಯಾಯ ಇಂಧನವಾಗಿ ಲಭ್ಯವಾಗಿದೆ. ಸೂರ್ಯನಿಂದ ನಮಗೆ ಸಿಗುವ ಇಂಧನವು ಸಂಪೂರ್ಣ ಸ್ವಚ್ಛ ಮತ್ತು ಸಂಪೂರ್ಣ ಸುಸ್ಥಿರ ಎಂದು ಮೋದಿ ಬಣ್ಣಿಸಿದರು.

ದ್ವೀಪ ದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ಭಾರತ ನೆರವು: ಮೋದಿ

ಹವಾಮಾನ ಬದಲಾವಣೆಯ ಅಡ್ಡ ಪರಿಣಾಮಗಳಿಂದ ಪುಟ್ಟದ್ವೀಪ (Island) ದೇಶಗಳು ಎದುರಿಸುವ ಸಮಸ್ಯೆಯನ್ನು ನಿವಾರಿಸಲು ಅಗತ್ಯವಾದ ಮೂಲಸೌಕರ್ಯ ಕಲ್ಪಿಸುವ ಭಾರತದ ಯೋಜನೆಯೊಂದಕ್ಕೆ ಪ್ರಧಾನಿ ನರೇಂದ್ರ ಮೋದಿ (narendra Modi) ಮಂಗಳವಾರ ಇಲ್ಲಿ ಚಾಲನೆ ನೀಡಿದರು.

ಗ್ಲಾಸ್ಗೋದಲ್ಲಿ (Glasgow) ನಡೆಯುತ್ತಿರುವ ಕಾಪ್‌26 ಸಮ್ಮೇಳನದ ವೇಳೆ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌, ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಮತ್ತು ವಿಶ್ವ ಸಂಸ್ಥೆಯ ಮಹಾಪ್ರಧಾನ ಕಾರ್ಯರ್‍ದರ್ಶಿ ಆ್ಯಂಟೋನಿಯಾ ಗ್ಯುಟೆರ್ರೆಸ್‌ ಸಮ್ಮುಖದಲ್ಲಿ ಮೋದಿ ಅವರು ಐರಿಸ್‌ (ಇನಿಷಿಯೇಟಿವ್‌ ಫಾರ್‌ ದ ರಿಸಿಲಿಯಂಟ್‌ ಐಲ್ಯಾಂಡ್‌ ಸ್ಟೇಟ್ಸ್‌) ಹೆಸರಿನ ಯೋಜನೆಗೆ ಚಾಲನೆ ನೀಡಿದರು.

ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮೋದಿ ‘ಐರಿಸ್‌ ಯೋಜನೆ ಜಾರಿಯು ಹೊಸ ಭರವಸೆ ಮತ್ತು ಹೊಸ ವಿಶ್ವಾಸ ಮೂಡಿಸುತ್ತದೆ. ಜೊತೆಗೆ ಅತ್ಯಂತ ಅಪಾಯದ ಭೀತಿಯಲ್ಲಿರುವ ದೇಶಗಳಿಗೆ ಏನಾದರೂ ಮಾಡಿದ ತೃಪ್ತಿಯ ಭಾವನೆ ಮೂಡಿಸುತ್ತದೆ. ಮನುಕುಲಕ್ಕೆ ನಾವೆಲ್ಲರೂ ಹೊಂದಿರುವ ಸಾಮುದಾಯಿಕ ಹೊಣೆಗಾರಿಕೆ, ಜೊತೆಗೆ ಒಂದು ರೀತಿಯಲ್ಲಿ ನಮ್ಮ ತಪ್ಪಿಗೆ ಪ್ರಾಯಶ್ಚಿತ್ತದ ಅವಕಾಶ ಎಂದು ಬಣ್ಣಿಸಿದರು.

ಮೋದಿಗ ಬಿಗ್ ಆಫರ್ ನೀಡಿದ ಇಸ್ರೇಲ್ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ(Narendra Modi) ವಿಶ್ವದಲ್ಲೇ ಅತ್ಯಂತ ಜನಪ್ರಿಯ ನಾಯಕ. ಇದೀಗ ಈ ಜನಪ್ರಿಯ ನಾಯಕ ಮೋದಿ ಯುಕೆ ಪ್ರವಾಸದಲ್ಲಿದ್ದಾರೆ. ಸಮಾವೇಶ, ದ್ವಿಪಕ್ಷೀಯ ಮಾತುಕತೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಮೋದಿ ಪಾಲ್ಗೊಂಡಿದ್ದಾರೆ. ಈ ವೇಳೆ ಇಸ್ರೇಲ್(Israel) ಪ್ರಧಾನಿ ನಫ್ತಾಲಿ ಬೆನ್ನೆಟ್(Naftali Bennett) ಜೊತೆಗಿನ ಮಾತುಕತೆಯ ಸಣ್ಣ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಇಸ್ರೇಲ್ ಪ್ರಧಾನಿ ನೀಡಿದ ಬಿಗ್ ಆಫರ್ ಮಾತುಕತೆ ಭಾರಿ ಸಂಚಲನ ಸೃಷ್ಟಿಸಿದೆ.

ಸ್ವಾಗತಿಸಿದರು. ಈ ವೇಳೆ , ನೀವು ಇಸ್ರೇಲ್‌ನಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿ. ನೀವು ಇಸ್ರೇಲ್‌ಗೆ ಬಂದು ನಮ್ಮ ಪಕ್ಷ ಸೇರಿಕೊಳ್ಳಿ ಎಂದು ಮೋದಿ ಬಳಿ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನ್ನೆಟ್ ಹೇಳಿದ್ದಾರೆ.

ನಫ್ತಾಲಿ ಬೆನ್ನೆಟ್ ಮಾತು ಕೇಳಿದ ಮೋದಿಗೆ ನಗು ತಡೆಯಲು ಆಗಲಿಲ್ಲ. ಬೆನ್ನೆಟ್ ಹಾಗೂ ಮೋದಿ ಇಬ್ಬರು ನಗೆಗಡಲಲ್ಲಿ ತೇಲಾಡಿದ್ದಾರೆ. ಮೋದಿ ಜನಪ್ರಿಯತೆ, ಮೋದಿ ವರ್ಚಸು ಇಸ್ರೇಲ್‌ನಲ್ಲೂ ಮ್ಯಾಜಿಕ್ ಮಾಡುತ್ತಿದೆ. ಹೀಗಾಗಿ ತಮ್ಮ ಪಕ್ಷ ಸೇರಿಕೊಳ್ಳಿ ಎಂದು ಮೋದಿಗೆ ಆಹ್ವಾನ ನೀಡಿದ್ದಾರೆ. 

click me!