* ನ್ಯೂಯಾರ್ಕ್ ವಕೀಲರ ಸಂಸ್ಥೆ ಮಾನವ ಹಕ್ಕು ಸಮಿತಿಗೆ ಬೆಂಗಳೂರಿನ ರಮ್ಯಾ ಅಧ್ಯಕ್ಷೆ
* ಈ ಸವಾಲನ್ನು ನಾನು ಹೊಣೆಗಾರಿಕೆಯಿಂದ ವಹಿಸಿಕೊಳ್ಳುತ್ತಿದ್ದೇನೆ
ನ್ಯೂಯಾರ್ಕ್(ಅ.12): ಅಮೆರಿಕದ ನ್ಯೂಯಾರ್ಕ್ ನಗರದ ಸಿಟಿ ಬಾರ್ ಅಸೋಸಿಯೇಷನ್‌ನ(New York City Bar’s International Human Rights Committee) ಅಂತಾರಾಷ್ಟ್ರೀಯ ಮಾನವ ಹಕ್ಕು ಸಮಿತಿಯ ಅಧ್ಯಕ್ಷರಾಗಿ(Chairperson of Human Rights Committee) ಬೆಂಗಳೂರು(Bengaluru) ಮೂಲದ ರಮ್ಯಾ ಜವಾಹರ್ ಕುಡೇಕಲ್ಲು(Ramya Jawahar Kudekallu) ಆಯ್ಕೆಯಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಮ್ಯಾ, ನನಗೆ ನೀಡಿರುವ ಈ ಗೌರವ ಹುದ್ದೆ ಅತೀವ ಸಂತಸ ತಂದಿದೆ. ಇತ್ತೀಚಿನ ದಿನಗಳಲ್ಲಿ ಸಮಿತಿಯ ಅಧ್ಯಕ್ಷ ಹುದ್ದೆಗೆ ಮಹಿಳೆಯರ ನೇಮಕ ಆಗಿರಲಿಲ್ಲ. ಹೀಗಾಗಿ ಈ ಆಯ್ಕೆ ನನ್ನ ಸಂಭ್ರಮವನ್ನು ಹೆಚ್ಚಿಸಿದೆ. ಹೀಗಾಗಿ ಈ ಸವಾಲನ್ನು ನಾನು ಹೊಣೆಗಾರಿಕೆಯಿಂದ ವಹಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಸಮಿತಿಯ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುವುದು, ಈಗಾಗಲೇ ಜಾರಿಯಲ್ಲಿರುವ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುವುದು ಮತ್ತು ದಮನಿತರ ಹಕ್ಕುಗಳ ಪರವಾಗಿ ಧ್ವನಿ ಎತ್ತುವುದು ರಮ್ಯಾ ಅವರ ಅಧ್ಯಕ್ಷ ಗಾದಿಯ ಕೆಲಸವಾಗಿರಲಿದೆ.
ರಮ್ಯಾ ಅವರ ತಂದೆ ಸುಳ್ಯದಲ್ಲಿ ಹಿರಿಯ ವಕೀಲರಾಗಿದ್ದರೆ, ತಾಯಿ ಡಾ. ಅಮಿತಾ ಮಲಕಿ ಕೊಡಗಿನಲ್ಲಿ ವೈದ್ಯೆಯಾಗಿದ್ದಾರೆ. ರಮ್ಯಾ ತಮ್ಮ ತಂದೆಯನ್ನು ಇತ್ತೀಚೆಗಷ್ಟೇ ಕೋವಿಡ್‌ನಿಂದಾಗಿ ಕಳೆದುಕೊಂಡಿದ್ದಾರೆ.
ಇಬ್ಬರು ಕನ್ನಡಿಗರು ಸೇರಿ 8 ಸಿಜೆಗಳ ನೇಮಕ
ಶನಿವಾರ ಇಬ್ಬರು ಕನ್ನಡಿಗರು(Kannadiga) ಸೇರಿ 8 ಜನ ನ್ಯಾಯಾಧೀಶರನ್ನು ವಿವಿಧ ಹೈಕೋರ್ಟ್‌ಗಳಿಗೆ(High Court) ಮುಖ್ಯ ನ್ಯಾಯಾಧೀಶರನ್ನಾಗಿ ಕೇಂದ್ರ ಕಾನೂನು ಸಚಿವಾಲಯ ನೇಮಿಸಿ ಆದೇಶ ಹೊರಡಿಸಿದೆ.
ಕರ್ನಾಟಕ ಹೈಕೋರ್ಟ್‌ನ(Karnataka High Court) ನ್ಯಾಯಾಧೀಶರಾದ ನ್ಯಾ| ಅರವಿಂದ್ ಕುಮಾರ್ ಅವರನ್ನು ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲಾಗಿದೆ. ಹಿಮಾಚಲ ಪ್ರದೇಶ ಹೈಕೋರ್ಟ್‌ನ(Himachal Pradesh) ಹಂಗಾಮಿ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕರ್ನಾಟಕ ಮೂಲದ ಆರ್.ವಿ ಮಳಿಮಠ ಅವರನ್ನುಮಧ್ಯ ಪ್ರದೇಶ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದೆ. ಕರ್ನಾಟಕದ ಹೈಕೋರ್ಟ್ ಮುಖ್ಯನ್ಯಾಯಾಧೀಶರಾಗಿ ನ್ಯಾ| ರಿತುರಾಜ್ ಅವಸ್ಥಿ ನೇಮಕವಾಗಿದ್ದಾರೆ.
ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನ್ಯಾ| ರಿತು ರಾಜ್ ಅವಸ್ಥಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದಾರೆ. ಕರ್ನಾಟಕದ ಹಂಗಾಮಿ ಮುಖ್ಯನಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸತೀಶ್ ಚಂದ್ರ ಶರ್ಮಾ ಅವರನ್ನು ತೆಲಂಗಾಣ ಹೈಕೋರ್ಟ್ ಮುಖ್ಯನ್ಯಾಯಾಧೀಶರಾಗಿ ನೇಮಕವಾಗಿದ್ದಾರೆ.