Youngest Professor: 18ನೇ ವಯಸ್ಸಿನಲ್ಲಿ ಪ್ರೊಫೆಸರ್ ಹುದ್ದೆ ! 306 ವರ್ಷಗಳ ನಂತ್ರ ದಾಖಲೆ ಮುರಿದ ಯುವಕ

Published : Aug 04, 2026, 12:23 PM IST
World Record

ಸಾರಾಂಶ

18 ವರ್ಷಕ್ಕೆ ಮಕ್ಕಳು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡ್ತಿರ್ತಾರೆ. ಆದ್ರೆ ಈಗ ನಾವು ಹೇಳ್ತಿರುವ ಯುವಕ ಎಲ್ಲರಿಗಿಂತ ಭಿನ್ನ. ಕ್ಲಾಸ್‌ ರೂಮಿನಲ್ಲಿ ಪಾಠ ಕೇಳುವ ಬದಲು ಪಾಠ ಹೇಳುವ ಕೆಲ್ಸ ಮಾಡ್ತಿದ್ದಾರೆ.

ವರ್ಷ 18 ಅಂದ್ರೆ ಹೆಚ್ಚಿನ ಯುವಕರು ಕಾಲೇಜಿಗೆ ಹೊಸದಾಗಿ ಪ್ರವೇಶ ಪಡೆಯುವ ವಯಸ್ಸು. ಆದ್ರೆ ಅಮೆರಿಕದ ಫ್ಲೋರಿಡಾದ ನಾಥನ್ ಥಾಮಸ್ ಈ ವಯಸ್ಸಿನಲ್ಲೇ ಕಾಲೇಜು ವಿದ್ಯಾರ್ಥಿಗಳಿಗೆ ಪಾಠ ಹೇಳುವ ಪ್ರೊಫೆಸರ್ ಆಗಿ ಇತಿಹಾಸ ನಿರ್ಮಿಸಿದ್ದಾರೆ. ಕೇವಲ 18 ವರ್ಷ 346 ದಿನಗಳ ವಯಸ್ಸಿನಲ್ಲಿ ಕಾಲೇಜು ಪ್ರೊಫೆಸರ್ ಆಗಿ ನೇಮಕಗೊಂಡ ಅವರು, 306 ವರ್ಷಗಳಷ್ಟು ಹಳೆಯ ಗಿನ್ನೆಸ್ ವಿಶ್ವ ದಾಖಲೆಯನ್ನು ಮುರಿದು ಹೊಸ ಸಾಧನೆ ಮಾಡಿದ್ದಾರೆ.

ದಾಖಲೆ ಬರೆದ ಪ್ರೊಫೆಸರ್

ನಾಥನ್ ಅವರನ್ನು ಮಿಯಾಮಿ ಡೇಡ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಇನ್ಸ್ಟ್ರಕ್ಟರ್ ಆಗಿ ನೇಮಕ ಮಾಡಲಾಗಿದೆ. ಅವರು ಪ್ರೋಗ್ರಾಮಿಂಗ್ ಮತ್ತು ತಾಂತ್ರಿಕ ವಿಷಯಗಳನ್ನು ಬೋಧಿಸುತ್ತಿದ್ದಾರೆ. ವಿಶೇಷವೆಂದರೆ, ಅವರ ತರಗತಿಯಲ್ಲಿ ಕುಳಿತಿರುವ ಕೆಲವು ವಿದ್ಯಾರ್ಥಿಗಳು ಅವರದೇ ವಯಸ್ಸಿನವರಾಗಿದ್ದಾರೆ. ಆದರೂ ಅವರಿಗೆ ಅದು ಎಂದಿಗೂ ವಿಚಿತ್ರವೆನಿಸಿಲ್ಲ. ಕಲಿಯಲು ವಯಸ್ಸು ಮುಖ್ಯವಲ್ಲ. ಕುತೂಹಲ ಮತ್ತು ಕಲಿಯುವ ಮನಸ್ಸೇ ಮುಖ್ಯ ಎಂಬುದು ನಾಥನ್ ಅವರ ನಂಬಿಕೆ.

ನಾಥನ್ ಅವರ ಪ್ರತಿಭೆಯ ಕಥೆ ಬಾಲ್ಯದಲ್ಲೇ ಆರಂಭವಾಗಿತ್ತು. ಕೇವಲ 10ನೇ ವಯಸ್ಸಿನಲ್ಲಿ ಅವರು ಕಾಲೇಜು ಶಿಕ್ಷಣದತ್ತ ಹೆಜ್ಜೆ ಇಟ್ಟರು. ನಂತರ ಫ್ಲೋರಿಡಾ ಇಂಟರ್ನ್ಯಾಷನಲ್ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು.

ಅವರ ಯಶಸ್ಸಿನ ಹಿಂದೆ ಕುಟುಂಬದ ಬೆಂಬಲ ಇದೆ. ನಾಥನ್ ಇಂಜಿನಿಯರ್ಗಳ ಕುಟುಂಬದಲ್ಲಿ ಬೆಳೆದವರು. ವಿಶೇಷವಾಗಿ ಅವರ ತಾಯಿ ಗಣಿತವನ್ನು ಸರಳವಾಗಿ ಅರ್ಥಮಾಡಿಕೊಟ್ಟು, ವಿಜ್ಞಾನ ವಿಷಯಗಳ ಬಗ್ಗೆ ಬಾಲ್ಯದಲ್ಲೇ ಆಸಕ್ತಿ ಬೆಳೆಸಿದರಂತೆ. ಇದೇ ಪ್ರೇರಣೆ ಇಂದು ಅವರನ್ನು ವಿಶ್ವ ದಾಖಲೆಯ ಮಟ್ಟಕ್ಕೆ ಕೊಂಡೊಯ್ದಿದೆ.

ಇಷ್ಟೆಲ್ಲ ಸಾಧನೆ ಮಾಡಿದರೂ ನಾಥನ್ ಅಲ್ಲೇ ನಿಂತಿಲ್ಲ. ಕಾಲೇಜಿನಲ್ಲಿ ಬೋಧನೆ ಮಾಡುವ ಜೊತೆಗೆ ಅವರು ಈಗ ಯೂನಿವರ್ಸಿಟಿ ಆಫ್ ಮಿಯಾಮಿ ಸ್ಕೂಲ್ ಆಫ್ ಲಾನಲ್ಲಿ ಕಾನೂನು ಶಿಕ್ಷಣ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಂಟೆಲೆಕ್ಚುಯಲ್ ಪ್ರಾಪರ್ಟಿ ಲಾ ಕ್ಷೇತ್ರದಲ್ಲಿ ಕೆಲಸ ಮಾಡಿ, ವಿಜ್ಞಾನ ಮತ್ತು ತಂತ್ರಜ್ಞಾನದ ಹೊಸ ಆವಿಷ್ಕಾರಗಳಿಗೆ ಕಾನೂನು ರಕ್ಷಣೆ ಒದಗಿಸುವ ಕನಸು ಹೊಂದಿದ್ದಾರೆ. ಯಶಸ್ಸಿಗೆ ವಯಸ್ಸಿನ ಮಿತಿ ಇಲ್ಲ. ಗುರಿ ಸ್ಪಷ್ಟವಾಗಿದ್ದರೆ, ನಿರಂತರ ಪರಿಶ್ರಮ ಇದ್ದರೆ, ಸಾಮಾನ್ಯ ಯುವಕರೂ ಅಸಾಮಾನ್ಯ ಇತಿಹಾಸ ನಿರ್ಮಿಸಬಹುದು ಎಂಬುದನ್ನು ನಾಥನ್‌ ಮಾಡಿ ತೋರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾತ್ರಿ ಮಲಗಿದ್ದಾಗಲೇ ಚಿರನಿದ್ರೆಗೆ ಜಾರಿದ ಪ್ರಖ್ಯಾತ ಕ್ರೀಡಾಪಟು.. ಜಸ್ಟ್ 34 ವಯಸ್ಸಿಗೆ ಬಲಿ ಪಡೆದ ಹೃದಯಾಘಾತ!
ಚಂದ್ರನ ಮೇಲೆ ನಾಳೆ ರಾಕೆಟ್‌ ಕ್ರ್ಯಾಶ್‌; 90 ಅಡಿ ಅಗಲ, 16 ಅಡಿ ಆಳ ಕುಳಿ ಸೃಷ್ಟಿ ಸಂಭವ