ಬೈಡನ್‌, ಕಮಲಾ ಪರ ಬರಾಕ್‌ ಒಬಾಮಾ ಪ್ರಚಾರ!

By Suvarna News  |  First Published Oct 18, 2020, 11:45 AM IST

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಕ್ಷಣಗಣನೆ | ಬೈಡನ್‌, ಕಮಲಾ ಪರ ಬರಾಕ್‌ ಒಬಾಮಾ ಪ್ರಚಾರ| ಫಿಲಡೆಲ್ಫಿಯಾ, ಪೆನ್ಸಿಲ್ವೇನಿಯಾದಲ್ಲಿ ಒಬಾಮಾ, ಬೈಡನ್‌ ಹಾಗೂ ಕಮಲಾ ಹ್ಯಾರೀಸ್‌ ಪರ ಪ್ರಚಾರ 


ಮ್ಯಾಕಾನ್‌(ಅ.18): ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಡೆಮಾಕ್ರೆಟ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್‌ ಮತ್ತು ಉಪಾಧ್ಯಕ್ಷ ಹುದ್ದೆ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಪರ ಪ್ರಚಾರಕ್ಕೆ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ನಿರ್ಧರಿಸಿದ್ದಾರೆ.

ಅ. 21ರಂದು ಫಿಲಡೆಲ್ಫಿಯಾ, ಪೆನ್ಸಿಲ್ವೇನಿಯಾದಲ್ಲಿ ಒಬಾಮಾ, ಬೈಡನ್‌ ಹಾಗೂ ಕಮಲಾ ಹ್ಯಾರೀಸ್‌ ಪರ ಪ್ರಚಾರ ನಡೆಸಲಿದ್ದಾರೆ. ತನ್ಮೂಲಕ ಅಮೆರಿಕದ ಮಾಜಿ ಅಧ್ಯಕ್ಷರೊಬ್ಬರು ತಮ್ಮ ಸಂಪುಟದಲ್ಲಿದ್ದ ವ್ಯಕ್ತಿಯೊಬ್ಬರ ಪರ ಇದೇ ಮೊದಲ ಸಲ ಪ್ರಚಾರಕ್ಕಿಳಿದಂತಾಗಲಿದೆ.

Tap to resize

Latest Videos

ಆದರೆ, ಬೈಡನ್‌ ಪರ ಪರಿಣಾಮಕಾರಿಯಲ್ಲದ ಒಬಾಮಾ ಪ್ರಚಾರದಿಂದ ತಮಗೇ ಲಾಭವಾಗಲಿದೆ ಎಂದು ಡೆಮಾಕ್ರಟ್‌ ಪಕ್ಷದ ಕಾಲೆಳೆದಿದ್ದಾರೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌. 2016ರಲ್ಲೂ ಡೆಮಾಕ್ರಟ್‌ ಇಂಥದ್ದೇ ಅಸಹ್ಯಕರ ಕೆಲಸ ಮಾಡಿತ್ತು. ಅದರಿಂದಾಗಿಯೇ ನಾನು ನಿಮ್ಮ ಅಧ್ಯಕ್ಷನಾಗಿದ್ದೇನೆ ಎಂದು ಟ್ರಂಪ್‌ ತಮ್ಮ ಬೆಂಬಲಿಗರ ಹತ್ತಿರ ಹೇಳಿಕೊಂಡಿದ್ದಾರೆ

click me!