ಬಾಂಗ್ಲಾದೇಶದಲ್ಲಿ ಮತೀಯವಾದಿಗಳ ಅಟ್ಟಹಾಸ: ಹಿಂದೂಗಳ ದೇಗುಲ ಮನೆ ಉದ್ದಿಮೆ ಧ್ವಂಸ

By Kannadaprabha News  |  First Published Aug 7, 2024, 8:41 AM IST

ಬಾಂಗ್ಲಾದೇಶದಲ್ಲಿ ಪ್ರತಿಭಟನೆ ಮತ್ತು ಹಿಂಸಾಚಾರದ ನಡುವೆಯೇ, ಅಲ್ಪಸಂಖ್ಯಾತ ಹಿಂದೂಗಳನ್ನು ಗುರಿಯಾಗಿಸಿ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಲಾಗಿದೆ. ಪ್ರಧಾನಿ ಶೇರ್ ಹಸೀನಾ ರಾಜೀನಾಮೆ ಬೆನ್ನಲ್ಲೇ ಹಿಂಸಾಚಾರ ತಾರಕಕ್ಕೇರಿದ್ದು, ದೇಶದ ಹಲವು ಭಾಗಗಳಲ್ಲಿ ಹಿಂದೂಗಳು, ಅವರಿಗೆ ಸೇರಿದ ಆಸ್ತಿ ಹಾಗೂ ದೇಗುಲಗಳನ್ನು ಧ್ವಂಸಗೊಳಿಸಲಾಗಿದೆ.


ಢಾಕಾ: ಬಾಂಗ್ಲಾದೇಶದಲ್ಲಿ ಪ್ರತಿಭಟನೆ ಮತ್ತು ಹಿಂಸಾಚಾರದ ನಡುವೆಯೇ, ಅಲ್ಪಸಂಖ್ಯಾತ ಹಿಂದೂಗಳನ್ನು ಗುರಿಯಾಗಿಸಿ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಲಾಗಿದೆ. ಪ್ರಧಾನಿ ಶೇರ್ ಹಸೀನಾ ರಾಜೀನಾಮೆ ಬೆನ್ನಲ್ಲೇ ಹಿಂಸಾಚಾರ ತಾರಕಕ್ಕೇರಿದ್ದು, ದೇಶದ ಹಲವು ಭಾಗಗಳಲ್ಲಿ ಹಿಂದೂಗಳು, ಅವರಿಗೆ ಸೇರಿದ ಆಸ್ತಿ ಹಾಗೂ ದೇಗುಲಗಳನ್ನು ಧ್ವಂಸಗೊಳಿಸಲಾಗಿದೆ.

ಮೀಸಲಿಗಾಗಿ ನಡೆದ ಹೋರಾಟ ಹಿಂಸಾ ರೂಪ ಪಡೆದು ದೇಶದಲ್ಲಿ ಆಯೋಮಯ ಸ್ಥಿತಿ ನಿರ್ಮಾಣವಾಗಿರುವುದರ ಲಾಭ ಪಡೆದಿರುವ ಮತೀಯ ಶಕ್ತಿಗಳು ಮತ್ತು ದುಷ್ಕರ್ಮಿಗಳು ಹಿಂದೂಗಳನ್ನು ಹಿಂಸಿಸುತ್ತಿದ್ದಾರೆ. ಸೋಮವಾರ ಬೆಳಗ್ಗೆಯಿಂದಲೇ ಹಿಂದೂಗಳ ಮೇಲೆ, ದೇಗುಲಗಳ ಮೇಲೆ, ಹಿಂದೂಗಳ ಮನೆ, ಕಟ್ಟಡಗಳು, ವಾಣಿಜ್ಯ ಸಮುಚ್ಚಯಗಳ ಮೇಲೆ ದಾಳಿ ನಡೆಸಲಾಗಿದೆ. ಈ ಪೈಕಿ ಎರಡು ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಹಿಂದೂಗಳನ್ನು ಹತ್ಯೆ ಮಾಡಿದ್ದರೆ, ಇನ್ನು ಹಲವು ಕಡೆ ಹಿಂದೂಗಳ ಮೇಲೆ ಮಾರಣಾಂತಿಕ ದಾಳಿ ನಡೆಸಲಾಗಿದೆ.

Latest Videos

undefined

ಭಾರತದ ಗಡಿಗೆ ಹಿಂದೂ ನಿರಾಶ್ರಿತರ ಆಗಮನ

ನವದೆಹಲಿ: ಬಾಂಗ್ಲಾದಲ್ಲಿ ಹಿಂದೂಗಳನ್ನೇ ಗುರಿಯಾಗಿಸಿ ದಾಳಿ ಹೆಚ್ಚಳ ಬೆನ್ನಲ್ಲೇ ಆತಂಕಗೊಂಡಿರುವ ಹಿಂದೂಗಳು ಭಾರತದ ಗಡಿಯತ್ತ ಆಗಮಿಸತೊಡಗಿದ್ದಾರೆ. ಮಂಗಳವಾರ ಇಂಥ ದೊಡ್ಡ ಪ್ರಮಾಣದ ಗುಂಪೊಂದು ಉಭಯ ದೇಶಗಳ ಗಡಿಯಲ್ಲಿ ಬೀಡುಬಿಟ್ಟಿರುವುದು ಕಂಡುಬಂದಿದೆ. ಆದರೆ ಇವರನ್ನು ಗಡಿಯೊಳಗೆ ಸೇರಿಸಲು ಇನ್ನೂ ಭಾರತ ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ, ಗಡಿ ಭದ್ರತೆ ವಹಿಸುವ ಬಿಎಸ್‌ಎಫ್‌ ಸಿಬ್ಬಂದಿ ನಿರಾಶ್ರಿತರನ್ನು ಗಡಿಯಲ್ಲೇ ತಡೆಹಿಡಿದಿದ್ದಾರೆ.

ಕೋಟಿ ಹಿಂದೂಗಳು ಭಾರತಕ್ಕೆ: ಸುವೇಂದು ಆತಂಕ

ಕೋಲ್ಕತಾ: ಬಾಂಗ್ಲಾದಲ್ಲಿ ಇಸ್ಲಾಮಿಕ್ ಸಂಘಟನೆಗಳ ಹಿಂಸಾಚಾರದಿಂದ ನಲುಗಿರುವ ಹಿಂದೂಗಳು ಭಾರತಕ್ಕೆ ಬರಬಹುದು. ಒಂದು ಕೋಟಿಯಷ್ಟು ಹಿಂದೂಗಳು ಬಂಗಾಳವನ್ನು ಪ್ರವೇಶಿಸಬಹುದು. ಅವರಿಗೆ ಭಾರತದ ಪೌರತ್ವವನ್ನು ನೀಡಬೇಕು ಎಂದು ಬಿಜೆಪಿ ನಾಯಕ, ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ.

ದೇಶ ತೊರೆಯುವ ಕೆಲ ಗಂಟೆಗೂ ಮೊದಲು ಶೇಕ್ ಹಸೀನಾ ನಿವಾಸದಲ್ಲಿ ಏನೆಲ್ಲಾ ನಡಿತು?

ವಿಧಾನಸಭೆಯಲ್ಲಿ ಈ ಕುರಿತು ಮಾತನಾಡಿದ ಸುವೇಂದು ಅಧಿಕಾರಿ, ಬಾಂಗ್ಲಾದಲ್ಲಿ ಹಿಂದೂಗಳ ಹತ್ಯೆ ನಡೆಯುತ್ತಿದೆ, ಒಂದು ವೇಳೆ ಅದನ್ನು ನಿಯಂತ್ರಿಸದಿದ್ದರೆ 1947 ಅಥವಾ 1971 ರ ವಿಮೋಚನಾ ಚಳುವಳಿಯಂತೆ ಒಂದು ಕೋಟಿಗೂ ಹೆಚ್ಚು ನಿರಾಶ್ರಿತರನ್ನು ಸ್ವೀಕರಿಸಲು ಸಿದ್ಧರಾಗಬೇಕು. ಸಿಎಂ ಮಮತಾ ಬ್ಯಾನರ್ಜಿ ಕೇಂದ್ರದ ಜೊತೆ ಚರ್ಚಿಸಿ, ಅವರೆಲ್ಲರಿಗೂ ಸಿಎಎ ಕಾನೂನಿನಡಿ ದೇಶದ ಪೌರತ್ವ ನೀಡಬೇಕು ಎಂದಿದ್ದಾರೆ.

ಬಾಂಗ್ಲಾ ಜನಸಂಖ್ಯೆಯ ಶೇ.8ರಷ್ಟಿರುವ ಹಿಂದೂಗಳು

ಢಾಕಾ: ಬಾಂಗ್ಲಾದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.8ರಷ್ಟು ಹಿಂದೂಗಳಿದ್ದಾರೆ. ಆದರೆ ಈ ಪ್ರಮಾಣ ವರ್ಷ ವರ್ಷ ಕಡಿಮೆಯಾಗುತ್ತಿದೆ. 1951ರ ಜನ ಗಣತಿ ಅನ್ವಯ ಬಾಂಗ್ಲಾ ಜನಸಂಖ್ಯೆಯ ಶೇ.22ರಷ್ಟು ಇತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಪ್ರಮಾಣ ಕೇವಲ 1.31 ಕೋಟಿಗೆ ಇಳಿದಿದೆ. 1964-2013ರ ಅವಧಿಯಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯದ ಪರಿಣಾಮ 1 ಕೋಟಿಗೂ ಹೆಚ್ಚು ಹಿಂದೂಗಳು ಬಾಂಗ್ಲಾದೇಶ ತೊರೆದಿದ್ದಾರೆ. ಸದ್ಯ ಬಾಂಗ್ಲಾದ ಜನಸಂಖ್ಯೆ 17 ಕೋಟಿಯಷ್ಟಿದೆ.

ಬಾಂಗ್ಲಾದಲ್ಲಿ ಉದ್ರಿಕ್ತರಿಂದ ದಾಂಧಲೆ: 4 ಹಿಂದೂ ದೇಗುಲಗಳ ಮೇಲೆ ದಾಳಿ

click me!