'ಹಿಂದೂ ಧಾರ್ಮಿಕ ಗ್ರಂಥಗಳು ಅಶ್ಲೀಲ ಪಠ್ಯಗಳು, ಯಾವುದೇ ನೈತಿಕ ಬೋಧನೆ ನೀಡುವುದಿಲ್ಲ': ಬಾಂಗ್ಲಾ ನಾಯಕ!

By Santosh NaikFirst Published Jan 12, 2023, 5:16 PM IST
Highlights

ಹಿಂದೂ ಧರ್ಮಗ್ರಂಥಗಳು ಯಾವುದೇ ನೈತಿಕ ಬೋಧನೆಗಳನ್ನು ನೀಡುವುದಿಲ್ಲ ಮತ್ತು ಅವು ಅಶ್ಲೀಲ ಪಠ್ಯಗಳಾಗಿವೆ ಎಂದು ಬಾಂಗ್ಲಾದೇಶದ ವಿರೋಧ ಪಕ್ಷದ ಗೊನೊ ಓಧಿಕಾರ್ ಪರಿಷತ್‌ನ ಜಂಟಿ ಸಂಚಾಲಕ ತಾರಿಕ್ ರೆಹಮಾನ್ ಹೇಳಿದ್ದಾರೆ.

ಢಾಕಾ (ಜ.12): ಪ್ರವಾದಿ ಮೊಹಮದ್‌ ಪೈಗಂಬರ್‌ ಕುರಿತಾಗಿ ನೂಪುರ್‌ ಶರ್ಮ ನೀಡಿದ್ದ ಹೇಳಿಕೆಗೆ ವಿಶ್ವದಾದ್ಯಂತ ಮುಸ್ಲಿಂ ರಾಷ್ಟ್ರಗಳು ಖಂಡನೆ ವ್ಯಕ್ತಪಡಿಸಿದ್ದವು. ಆದರೆ, ಈಗ ಬಾಂಗ್ಲಾದೇಶದ ವಿರೋಧ ಪಕ್ಷದ ನಾಯಕ ಹಿಂದೂ ಧರ್ಮಗ್ರಂಥಗಳ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿದ್ದಾರೆ. ಈ ಗ್ರಂಥಗಳು ಯಾವುದೇ ನೈತಿಕ ಬೋಧನೆ ನೀಡೋದಿಲ್ಲ. ಅವುಗಳು ಬರೀ ಅಶ್ಲೀಲ ಪಠ್ಯಗಳು ಮಾತ್ರ ಎಂದು ವಿರೋಧ ಪಕ್ಷವಾದ ಗೊನೋ ಓಧಿಕಾರ್‌ ಪರಿಷತ್‌ನ ಜಂಟಿ ಸಂಚಾಲಕ ತಾರಿಕ್‌ ರೆಹಮಾನ್‌ ಹೇಳಿದ್ದಾರೆ. ಹಿಂದು ಧರ್ಮಗ್ರಂಥಗಳನ್ನು ಅಶ್ಲೀಲ ಪಠ್ಯಗಳು ಎಂದು ಹೇಳಿರುವ ಅವರ ಮಾತಿಗೆ ಬಾಂಗ್ಲಾದಲ್ಲಿಯೇ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿದೆ. ಈ ಗ್ರಂಥಗಳು ವ್ಯಕ್ತಿಗೆ ಯಾವುದೇ ರೀತಿಯ ನೈತಿಕ ಬೋಧನೆ ನೀಡೋದಿಲ್ಲ. ಇವುಗಳು ಬರೀ ಅಶ್ಲೀಲ ಪಠ್ಯಗಳಷ್ಟೇ ಎಂದು ಹೇಳಿದ್ದಾರೆ. 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶದಲ್ಲಿ ಪ್ರಸ್ತುತ ಶೇಖ್ ಹಸೀನಾ ನೇತೃತ್ವದ ಸರ್ಕಾರವನ್ನು ಪದಚ್ಯುತಗೊಳಿಸಲು ಪ್ರಯತ್ನಿಸುತ್ತಿರುವ ಪ್ರತಿಪಕ್ಷ ನಾಯಕ ನೂರುಲ್ ಹಕ್ ನೂರ್ ಅವರ ಆಪ್ತ ಸಹಾಯಕ ಈ ತಾರಿಕ್‌ ರೆಹಮಾನ್‌.

"ಹಿಂದೂ ಧರ್ಮದ ಧರ್ಮಗ್ರಂಥಗಳು ಯಾವುದೇ ನೈತಿಕ ಬೋಧನೆಗಳನ್ನು ನೀಡುವುದಿಲ್ಲ. ಹಿಂದುಗಳ ಧಾರ್ಮಿಕ ಗ್ರಂಥಗಳು ಅಶ್ಲೀಲ ಪಠ್ಯಗಳು ಎಂದು ರೆಹಮಾನ್ ಫೇಸ್‌ಬುಕ್‌ ಲೈವ್‌ನ ಟೆಲಿಕಾಸ್ಟ್‌ನಲ್ಲಿ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಜನ ಶೇರ್ ಮಾಡುತ್ತಿದ್ದಾರೆ.

ಅಕ್ಟೋಬರ್ 2021 ರಲ್ಲಿ ಪ್ರಾರಂಭವಾದ ಗೊನೊ ಓಧಿಕಾರ್ ಪರಿಷತ್ತು ಹೆಚ್ಚಾಗಿ ಕಾರ್ಯಕರ್ತರು ಮತ್ತು ಯುವಕರನ್ನು ಅದರ ನಾಯಕರನ್ನಾಗಿ ಹೊಂದಿದೆ. ಪಕ್ಷಕ್ಕೆ ಭಯೋತ್ಪಾದಕ ಸಂಘಟನೆ ಜಮಾತ್-ಎ-ಇಸ್ಲಾಮಿ ಬೆಂಬಲವಿದೆ ಎಂದು ವರದಿಯಾಗಿದೆ.

click me!