
ಢಾಕಾ (ಆ.26) ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ದೌರ್ಜನ್ಯ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಅದರಲ್ಲೂ ಹಿಂದೂ ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಇದೀಗ ಪ್ರಕಟಗೊಂಡಿರುವ ಅಂಕಿ ಅಂಶ ಬಾಂಗ್ಲಾದೇಶದ ಆತಂಕ ಹೆಚ್ಚಿಸಿದೆ. ಕಾರಣ ಬಾಂಗ್ಲಾದೇಶದಲ್ಲಿ ಕಳೆದ 7 ತಿಂಗಳಲ್ಲಿ ಹೆಣ್ಣು ಮಕ್ಕಳು, ಅಪ್ರಾಪ್ತರ ಮೇಲೆ ನಡೆದ ಅತ್ಯಾ*ರ ಪ್ರಕರಣ ಸಂಖ್ಯೆ ಶೇಕಡಾ 75ಕ್ಕೆ ಏರಿಕೆಯಾಗಿದೆ. ಜನವರಿಯಿಂದ ಜುಲೈವೆರೆಗೆ ಬಾಂಗ್ಲಾದೇಶದಲಲಿ 306 ಅಪ್ರಾಪ್ತರ ಮೇಲೆ ಅತ್ಯಾ*ರ ನಡೆದಿದೆ ಎಂದು ವರದಿ ಹೇಳಿದೆ.
ಏನ್ ಒ ಸಲೀಶ್ ಕೇಂದ್ರ (ASK) ನಡೆಸಿದ ಸಂಶೋಧನಾ ಅಧ್ಯಯನ ವರದಿಯಲ್ಲಿ ಈ ಸ್ಫೋಟಕ ಮಾಹಿತಿ ಬಯಲಾಗಿದೆ. 2025 ಜನವರಿಯಿಂದ ಜುಲೈ ವರೆಗೆ 306 ಹೆಣ್ಮುಮಕ್ಕಳ ಮೇಲೆ ಅತ್ಯಾ*ರ ನಡೆದಿದೆ. 2024ರ ಇದೇ ಅವಧಿಯಲ್ಲಿ ಈ ಸಂಖ್ಯೆ 175 ಆಗಿತ್ತು. 2024ರ ಇಡೀ ವರ್ಷದಲ್ಲಿ ಅಪ್ರಾಪ್ತರ ಮೇಲೆ ನಡೆದ ಅತ್ಯಾ*ರ ಪ್ರಕರಣ ಸಂಖ್ಯೆ ಒಟ್ಟು 234. ಆದರೆ ಈ ವರ್ಷ6 ರಿಂದ 7 ತಿಂಗಳಲ್ಲೇ ಈ ಸಂಖ್ಯೆ ಮೀರಿದೆ.
ASK ಬಿಡುಗಡೆ ಮಾಡಿದ ಅಂಕಿ ಅಂಶ ಪ್ರಕಾರ ತಿಂಗಳ ಹಸುಗೂಸಿನ ಮೇಲೂ ಕ್ರೌರ್ಯ ನಡೆದಿದೆ. ಈ ವರ್ಷ ದಾಖಲಾಗಿರುವ 306 ಪ್ರಕರಣದಲ್ಲಿ ಹುಟ್ಟಿದ ಮಗುವಿನಿಂದ 6 ತಿಂಗಳವರೆಗಿನ ಹಸುಗೂಸಿನ ಮೇಲೆ ನಡೆದ ಅತ್ಯಾ*ರ ಪ್ರಕರಣ ಸಂಖ್ಯೆ 49. ಇನ್ನು 7 ರಿಂದ 12ರ ವಯಸ್ಸಿನ ಬಾಲಕಿಯರ ಮೇಲೆ ನಡೆದ ಪ್ರಕರಣ ಸಂಖ್ಯೆ 94, ಹದಿ ಹರೆಯದ ವಯಸ್ಸಿನ ಹುಡುಗಿಯರ ಮೇಲೆ ನಡೆದ ಅತ್ಯಾ*ರ ಪ್ರಕರಣ ಸಂಖ್ಯೆ 103. ಇನ್ನು 60 ಪ್ರಕರಣದಲ್ಲಿ ವಯಸ್ಸಿನ ಮಾಹಿತಿ ಸ್ಪಷ್ಟವಿಲ್ಲ.
ಕಳೆದ ಐದರಿಂದ ಆರು ತಿಂಗಳಲ್ಲಿ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಗರಿಷ್ಠ ಪ್ರಕರಣ ದಾಖಲಾಗಿದೆ. ಮಾರ್ಚ್ ತಿಂಗಳಲಲಿ 104 ಪ್ರಕರಣ ದಾಖಲಾಗಿದ್ದೆ, ಎಪ್ರಿಲ್ ತಿಂಗಳಲ್ಲಿ 64 ಪ್ರಕರಣ ದಾಖಲಾಗಿದೆ. 2024ರ ಇದೇ ಅವಧಿಯಲಲ್ಲಿ 29 ಹಾಗೂ 24 ಕೇಸ್ ದಾಖಲಾಗಿತ್ತು. ಆದರೆ ಈ ವರ್ಷ ಅತೀ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿದೆ. ಬಾಂಗ್ಲಾದೇಶ ಅತ್ಯಂತ ಭಯಾನಕ ದೇಶವಾಗಿ ಮಾರ್ಪಟ್ಟಿದೆ.
ಕಳೆದ 6 ತಿಂಗಳಲ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಾದ 251 ಪ್ರಕರಣದಲ್ಲಿ 55 ಮಕ್ಕಳಿಗೆ ನ್ಯಾಯವೇ ಸಿಕ್ಕಿಲ್ಲ. ಇದೇ ವೇಳೆ 129 ಹುಡುಗಿಯರ ಮೇಲೆ ಅತ್ಯಾ*ರ ಪ್ರಯತ್ನ ನಡೆದಿತ್ತು. ಈ ಪೈಕಿ 35 ಪ್ರಕರಣ 0-6 ತಿಂಗಳ ಹಸುಗೂಸಿನ ಮೇಲೂ ನಡೆದಿದೆ. ಬಾಂಗ್ಲಾದೇಶದಲ್ಲಿ ಅತ್ಯಾ*ರ ಪ್ರಕರಣದ ಬಳಿಕ ಕೇಸ್ ದಾಖಲಿಸುವ ಸಂಖ್ಯೆಯೂ ಅತ್ಯಂತ ಕಡಿಮೆ. ಬಹುತೇಕರು ಜೀವ ಬೆದರಿಕೆ ಕಾರಣ ಕೇಸ್ ದಾಖಲಿಸುವ ಸಾಹಸವೂ ಮಾಡುವುದಿಲ್ಲ ಎಂದು ಈ ವರದಿ ಹೇಳುತ್ತಿದೆ.
ಕಳೆದ 6 ರಿಂದ 7 ತಿಂಗಳಲ್ಲಿ ಬಾಂಗ್ಲಾದೇಶದಲ್ಲಿ ಗಂಡು ಮಕ್ಕಳ ಮೇಲೆ ನಡೆದ ಅತ್ಯಾ*ರ ಪ್ರಕರಣ ಸಂಖ್ಯೆ 30. ಆದರೆ 20 ಪ್ರಕರಣಗಳು ಮಾತ್ರ ಪೊಲೀಸ್ ಮೆಟ್ಟಿಲೇರಿದೆ. ಇದರ ಜೊತೆಗೆ ಹಲವು ಮಕ್ಕಳ ಮೇಲೆ ಅತ್ಯಾ*ರ ಯತ್ನ ನಡೆದಿದೆ. ಬಾಂಗ್ಲಾದೇಶದ ಅಂಕಿ ಅಂಶಗಳು ವಿಶ್ವವನ್ನೇ ಬೆಚ್ಚಿಬೀಳಿಸಿದೆ.
ಬಾಂಗ್ಲಾದೇಶದಲ್ಲಿ ಕಳೆದ 6 ತಿಂಗಳಲ್ಲಿ 49 ಹುಡುಗಿಯರು ಲೈಂಗಿಕ ಕಿರುಕುಳ ಎದುರಿಸಿದ್ದಾರೆ. ಈ ಪೈಕಿ 22 ಹುಡುಗಿಯರ ಮೇಲೆ ಶಿಕ್ಷಕರೇ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವರದಿಯಾಗಿದೆ. ಹಲವು ಪ್ರಕರಣಗಳು ವರದಿಯಾಗಿಲ್ಲ ಬಾಂಗ್ಲಾದೇಶ ಶಿಕ್ಷಣ ಸಂಸ್ಥೆಯಲ್ಲಿ ಯಾವುದೇ ಸುರಕ್ಷತೆ ಇಲ್ಲ . ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಅತೀ ಹೆಚ್ಚು ಪ್ರಕರಣಗಳಲ್ಲಿ ದೂರು ದಾಖಲಾಗುವುದಿಲ್ಲ ಎಂದು ಬಾಂಗ್ಲಾದೇಶ ಕಾನೂನು ಸೇವಾ ಟ್ರಸ್ಟ್ ಹಾಗೂ ಬಾಂಗ್ಲಾದೇಶ ಸುಪ್ರೀಂ ಕೋರ್ಟ್ ವಕೀಲ ಆಯೇಶಾ ಅಖ್ತರ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ