
ಅದೃಷ್ಟ ಇದ್ರೆ ಲಕ್ಷ್ಮಿ ಒದ್ ಒದ್ಕೊಂಡು ಬರ್ತಾಳೆ ಎನ್ನೋ ಮಾತನ್ನು ಕೇಳಿರಬೇಕು ಅಲ್ವೆ? ಲಕ್ಷ್ಮಿ ಯಾವತ್ತಿದ್ದರೂ ದುಡ್ಡು ಇರುವವರ ಬಳಿಯೇ ಹೋಗ್ತಾಳೆ ಎನ್ನುವ ಮಾತು ಕೂಡ ತಲೆತಲಾಂತರಗಳಿಂದ ಬಂದಿದೆ. ಅದಕ್ಕೆ ಸಾಕ್ಷಿಯಾಗಿ ಹಲವಾರು ಘಟನೆಗಳು ನಮ್ಮ ಕಣ್ಣಮುಂದೆ ದಿನನಿತ್ಯವೂ ಕಾಣುತ್ತಿರುತ್ತದೆ ಅನ್ನಿ. ಆದರೆ ಇಲ್ಲೊಬ್ಬ ಪುಣ್ಯಾತ್ಮನ ಅದೃಷ್ಟ ಮಾತ್ರ ವಿಚಿತ್ರವಾದದ್ದು. ಮೊದಲು ಸತ್ತೇ ಹೋದ. 14 ನಿಮಿಷ ಉಸಿರು ನಿಂತಿತ್ತು, ಆಮೇಲೆ ಬದುಕಿ ಬಂದ. ಅದೃಷ್ಟ ನೋಡೋಣ ಎಂದು ಲಾಟರಿ ಖರೀದಿಸಿದ. ಕಾರನ್ನು ಗೆದ್ದ. ಇಷ್ಟೆಲ್ಲಾ ಆದ ಮೇಲೆ ಮಾಧ್ಯಮದವರು ಸುಮ್ಮನೇ ಇರ್ತಾರಾ? ಈತನನ್ನು ಹುಡುಕಿ ಬಂದರು. ತಮ್ಮ ಕ್ಯಾಮೆರಾ ಸಲುವಾಗಿ ಲಾಟರಿ ಟಿಕೆಟ್ ಒಂದನ್ನು ತಂದು ಸ್ಕ್ಯಾಚ್ ಮಾಡುವಂತೆ ಹೇಳಿದ್ರು... ಆಮೇಲೆ ಆಗಿದ್ದು ಮಾತ್ರ... ಉಫ್!!
ಆಮೇಲೆ ಏನಾಯ್ತು ಎಂದು ಹೇಳುವ ಮೊದಲು ಈ ಆಸಾಮಿಯ ಪರಿಚಯ ತಿಳಿದುಕೊಳ್ಳಿ. ಈಗ ಆಸ್ಟ್ರೇಲಿಯಾದವ. ಹೆಸರು ಬಿಲ್ ಮಾರ್ಗನ್. ಹೃದಯಾಘಾತವಾಗಿತ್ತು ಈತನಿಗೆ. ಕೋಮಾಕ್ಕೆ ಜಾರಿದ್ದ. 14 ನಿಮಿಷ ಉಸಿರು ನಿಂತಿರುವುದಾಗಿ ವೈದ್ಯರು ಹೇಳಿದರು. ಇಷ್ಟಾದ ಮೇಲೆ ಬದುಕಿರಲು ಹೇಗೆ ಸಾಧ್ಯ? ಬಿಲ್ ಮಾರ್ಗನ್ನ ಸಂಬಂಧಿಕರಿಗೆ ಈತ ಸತ್ತಿರುವುದಾಗಿ ಹೇಳಿದರು. ಆತನ ಅಂತ್ಯಕ್ರಿಯೆಗೆ ಕರೆದುಕೊಂಡು ಹೋಗುವಂತೆ ಹೇಳಿದರು. ಇನ್ನೇನು ಆತನನ್ನು ಡಿಸ್ಚಾರ್ಜ್ ಮಾಡಬೇಕು ಎನ್ನುವಷ್ಟರಲ್ಲಿಯೇ ಪವಾಡ ನಡೆದೇ ಹೋಯ್ತು. ಆತ ಅಲುಗಾಡಿದ. ಆಗ ಇವನು ಬದುಕಿದ್ದಾನೆ ಎನ್ನುವುದು ತಿಳಿಯಿತು. ಅಲ್ಲಿಗೆ ಅವನ ಜೀವನದ ಒಂದು ಅದೃಷ್ಟದ ಕಥೆ ಮುಗಿಯಿತು.
ವಜ್ರದ ಅಂಗಡಿಗೆ ಕನ್ನ ಹಾಕಿ ಎಗರಿಸಿದ ಇರುವೆ! ಸಿಸಿಟಿವಿಯಲ್ಲಿ ಜಗತ್ತಿನ ಅತಿ ಚಿಕ್ಕ ಕಳ್ಳನ ಕಿತಾಪತಿ ದಾಖಲು...
ಮರು ಹುಟ್ಟುಸಿಕ್ಕ ಖುಷಿಗೆ ಸ್ಕ್ರ್ಯಾಚ್-ಆಫ್ ಲಾಟರಿ ಲಾಟರಿ ಖರೀದಿಸಿದ ಬಿಲ್ ಮಾರ್ಗನ್. ಅದರಲ್ಲಿ ಆತನಿಗೆ ಪುನಃ ಹೃದಯಾಘಾತ ಆಗದಿದ್ದುದು ದೊಡ್ಡದು. ಏಕೆಂದರೆ ಆತನಿಗೆ ಐಷಾರಾಮಿ ಕಾರು ಸಿಕ್ಕಿತು. ಇದು ಮಾಧ್ಯಮದವರ ಕಿವಿಗೆ ಬಿತ್ತು. ಎಲ್ಲರೂ ಆತನ ಮನೆಯ ಎದುರು ನಿಂತರು. ಸ್ಕ್ರ್ಯಾಚ್-ಆಫ್ ಲಾಟರಿ ಖರೀದಿಸಿ ಪುನಃ ಕ್ಯಾಮೆರಾ ಮುಂದೆ ಸ್ಕ್ರ್ಯಾಚ್-ಆಫ್ ಮಾಡುವಂತೆ ಹೇಳಿದರು. ಇದೇನಿದ್ದರೂ ಮಾಧ್ಯಮದಲ್ಲಿ ಬಿತ್ತರಿಸುವುದು ಅಷ್ಟೇ ಅವರ ಗುರಿಯಾಗಿತ್ತು. ಆದರೆ ಅಲ್ಲಿ ಆದದ್ದೇ ಬೇರೆ! ಆ ಲಾಟರಿ ಸ್ಕ್ರ್ಯಾಚ್ ಮಾಡಿದಾಗ 2.50 ಲಕ್ಷ ಡಾಲರ್ ಜಾಕ್‌ಪಾಟ್ ಹೊಡೆಯಿತು! ಅವನ ಕಣ್ಣನ್ನು ಅವನೇ ನಂಬಲಿಲ್ಲ. ಆದರೆ ಸುದ್ದಿ ಮಾಡಲು ಬಂದ ವರದಿಗಾರರು ಮಾತ್ರ ಡಬಲ್ ಬ್ರೇಕಿಂಗ್ ಹೊಡೆದರು.
ಒಟ್ಟಿನಲ್ಲಿ ಅದೃಷ್ಟ ಕೈಹಿಡಿದರೆ ಅದು ಯಾವ ರೂಪವನ್ನಾದರೂ ತಾಳುತ್ತದೆ ಎನ್ನುವುದಕ್ಕೆ ಬಿಲ್ ಮಾರ್ಗನ್ ಸಾಕ್ಷಿಯಾಗಿದ್ದಾನೆ. ಇದಾಗಿ ಕೆಲವು ವರ್ಷಗಳಾಗಿದ್ದು, ಈತನ ಸುದ್ದಿ ಪುನಃ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸದ್ಯ ಈತ ಮಿಲೇನಿಯರ್. ತನ್ನ ಪುನರ್ಜನ್ಮವನ್ನು ಆಚರಿಸುವ ಜೊತೆಗೆ ಲಾಟರಿಯನ್ನು ಇನ್ನೆಷ್ಟು ಖರೀದಿ ಮಾಡಿದನೋ ಗೊತ್ತಿಲ್ಲ.
ಈ ವಿಡಿಯೋ ನೋಡಿದರೆ ನಿಮಗೆ ಇರುವೆ ಸಕ್ಕರೆಯನ್ನು ಕೊಂಡೊಯ್ಯುವಂತೆ ಕಾಣಿಸುತ್ತದೆ. ಜೂಮ್ ಕ್ಯಾಮೆರಾದಲ್ಲಿ ಇದನ್ನು ಶೂಟ್ ಮಾಡಲಾಗಿದ್ದು, ಇದು ಸಕ್ಕರೆಯೇ ಎನ್ನುವುದಾಗಿ ಬಹುತೇಕ ಎಲ್ಲರೂ ಅಂದುಕೊಳ್ಳಲಿಕ್ಕೆ ಸಾಕು. ಆದರೆ ನಿಜವಾಗಿಯೂ ಇದು ಸಕ್ಕರೆಯಲ್ಲ, ವಜ್ರ ಎನ್ನುವುದು ಸಾಬೀತಾಗಿದೆ! ವಜ್ರದ ಅಂಗಡಿಗೆ ಕನ್ನಡ ಹಾಕಿರುವ ಈ ಇರುವೆ ಅಲ್ಲಿಂದ ವಜ್ರವನ್ನು ಕಚ್ಚಿಕೊಂಡು ಪರಾರಿಯಾಗಿದೆ. ಈ ವಿಡಿಯೋದಲ್ಲಿ ಮೇಜಿನ ಮೇಲೆ ಇರುವ ಬ್ಲಾಟರ್‌ನಲ್ಲಿ ಬಹಳ ಚಿಕ್ಕ ವಜ್ರಗಳ ರಾಶಿಯನ್ನು ಕಾಣಬಹುದು. ಕ್ಯಾಮೆರಾ ಜೂಮ್ ಮಾಡಿ ಬ್ಲಾಟರ್‌ನ ಒಂದು ಮೂಲೆಯಲ್ಲಿ ಇರುವೆ ಇರುವುದನ್ನು ನೋಡಬಹುದಾಗಿದೆ.
ರಕ್ತದ ಗುಂಪು ಪರೀಕ್ಷೆ ಮಾಡಿರುವಿರಾ? ಯಾರ ಊಹೆಗೂ ನಿಲುಕದ 'ಬಾಂಬೆ ಬ್ಲಡ್ ಗ್ರೂಪ್' ನಿಮ್ಮದಾಗಿರಬಹುದು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ