ಮೋದಿಗಾಗಿ ಸಮೋಸಾ, ಮಾವಿನ ಚಟ್ನಿ ತಯಾರಿಸಿದ ಆಸ್ಟ್ರೇಲಿಯಾ ಪ್ರಧಾನಿ!

Suvarna News   | Asianet News
Published : May 31, 2020, 05:26 PM ISTUpdated : May 31, 2020, 05:27 PM IST
ಮೋದಿಗಾಗಿ ಸಮೋಸಾ, ಮಾವಿನ ಚಟ್ನಿ ತಯಾರಿಸಿದ ಆಸ್ಟ್ರೇಲಿಯಾ ಪ್ರಧಾನಿ!

ಸಾರಾಂಶ

ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ನಿಂದ ಹಿಡಿದ ವಿಶ್ವದ ಪ್ರಭಾವಿ ನಾಯಕರಿಗೆಲ್ಲಾ ಭಾರತದ ಪ್ರಧಾನಿ ನರೇಂದ್ರ ಮೋದಿ ಅಂದರೆ ಅಚ್ಚು ಮೆಚ್ಚು. ಇದೀಗ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಈ ವಾರದಲ್ಲಿ ನಡೆಯಲಿರುವ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮೋದಿ ಭೇಟಿಯಾಗಲು ಉತ್ಸುಕರಾಗಿದ್ದಾರೆ. ಈಗಲೇ ತಯಾರಿ ಆರಂಭಿಸಿದ್ದಾರೆ. ಇದಕ್ಕಾಗಿ ಆಸೀಸ್ ಪ್ರಧಾನಿ ಸ್ವತಃ ಭಾರತದ ಸಮೋಸಾ ಹಾಗೂ ಮಾವಿನ ಚಟ್ನಿ ತಯಾರಿಸಿದ್ದಾರೆ. 

ಸಿಡ್ನಿ(ಮೇ.31):  ಪ್ರಧಾನಿ ನರೇಂದ್ರ ಮೋದಿ ವಿಶ್ವದ ಇತರ ನಾಯಕರ ಕೇಂದ್ರ ಬಿಂದುವಾಗಿದ್ದಾರೆ. ಆಡಳಿತ, ಯೋಜನೆಗಳ ಕಾರ್ಯರೂಪಕ್ಕಿಳಿಸುವುದು, ತಂತ್ರಜ್ಞಾನ ಬಳಸಿ ಪ್ರತಿ ಕ್ಷೇತ್ರದಲ್ಲಿ ಬದಲಾವಣೆ ಸೇರಿದಂತೆ ಹಲವು ಕಾರಣಗಳಿಂದ ಮೋದಿ, ಇತರರಿಗೆ ಮಾದರಿಯಾಗಿದ್ದಾರೆ. ಹೀಗಾಗಿ ಪ್ರಭಾವಿ ನಾಯಕರೆಲ್ಲಾ ಮೋದಿ ಗುಣಗಾನ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲೂ ಮೋದಿ ಕುರಿತು ಮಾತು, ಭಾರತದ ಹಬ್ಬಗಳ ಸಂರ್ಭದಲ್ಲಿ ಶುಭಹಾರೈಕೆ, ಮೋದಿಗಾಗಿ ವಿಶೇಷ ತಿನಿಸುಗಳನ್ನು ತಯಾರಿಸುತ್ತಾರೆ. ಇದೀಗ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮೋದಿಗಾಗಿ ವಿಶೇಷ ತನಿಸು ತಯಾರಿಸಿದ್ದಾರೆ.

ಕಿತ್ನಾ ಅಚ್ಛಾ ಹೈ ಮೋದಿ: ಆಸೀಸ್ ಪ್ರಧಾನಿ ಸೆಲ್ಫಿ ನೋಡಿ!

ಆಸೀಸ್ ಪ್ರಧಾನಿ ಸ್ಕಾಟ್ ಮಾರಿಸನ್ ಹಾಗೂ ಮೋದಿ ಆತ್ಮೀಯ ಗೆಳೆಯರು. ಇದೀಗ ಈ ವಾರದಲ್ಲಿ ವಿಶ್ವದ ಪ್ರಮುಖ ನಾಯಕರ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪ್ರಧಾನಿ ಮೋದಿ, ಆಸೀಸ್ ಪ್ರಧಾನಿ ಸೇರಿದಂತೆ ಹಲವರು ಪಾಲ್ಗೊಳ್ಳುತ್ತಿದ್ದಾರೆ.  ಇದೀಗ ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಮಾತನಾಡಿಸಲು ಸ್ಕಾಟ್ ಮಾರಿಸನ್ ಉತ್ಸುಕರಾಗಿದ್ದಾರೆ. ಹೀಗಾಗಿ ಇಂದು(ಮೇ.31) ಮೋದಿಗಾಗಿ ಸಮೋಸಾ ಹಾಗೂ ಮಾವಿನ   ಚಟ್ನಿ ಸ್ವತಃ ತಯಾರಿಸಿದ್ದಾರೆ.

 

ಸ್ಲೆಡ್ಜ್ ಮಾಡಿದ ಪಂತ್’ಗೆ ಆಸಿಸ್ ಪ್ರಧಾನಿ ಹೇಳಿದ್ದೇನು..? ವಿಡಿಯೋ ವೈರಲ್.

ಸ್ಕಾಟ್ ಮಾರಿಸನ್ ತಮ್ಮ ಸಮೋಸ ಹಾಗೂ ಚಟ್ನಿ ಮಾಹಿತಿಯನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಈ ಭಾನುವಾರ ಸ್ಕೊಮೋಸಾ ಹಾಗೂ ಮಾವಿನ  ಚಟ್ನಿ ತಯಾರಿಸಿದ್ದೇನೆ. ಈ ವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿಯನ್ನ ಬೇಟಿಯಾಗುತ್ತಿದ್ದೇನೆ. ಮೋದಿ ಸಸ್ಯಾಹಾರಿಯಾಗಿರುವ ಕಾರಣ, ನಾನು ಮಾಡಿರುವ  ವಿಶೇಷ ಖಾದ್ಯವನ್ನು ಮೋದಿ ಜೊತೆ ಹಂಚಿಕೊಳ್ಳಲು ಬಯಸುತ್ತೇನೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಾರತೀಯರ ಎಚ್‌-1ಬಿ ವೀಸಾ ಸಂದರ್ಶನ ದಿಢೀರ್‌ ರದ್ದು : ಕಿಡಿ
ಯುನೆಸ್ಕೋ ಪರಂಪರೆ ಪಟ್ಟಿಗೆ ದೀಪಾವಳಿ ಸೇರ್ಪಡೆ!