ಚಿನ್ನದ ಶಾಲು, ಬೆಲ್ಟ್, ತಿಮಿಂಗಿಲ ಹಲ್ಲಿನ ಕಿವಿಯೋಲೆ.. 1200 ವರ್ಷ ಹಳೆಯ ಸಮಾಧಿಯಲ್ಲಿತ್ತು ಲೆಕ್ಕಕ್ಕೆ ಸಿಗದ ಮೌಲ್ಯದ ನಿಧಿ!

By Suvarna News  |  First Published Mar 10, 2024, 5:41 PM IST

ಪನಾಮಾದ ಪ್ರದೇಶವೊಂದರಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗಳು ಮೌಲ್ಯ ಲೆಕ್ಕ ಹಾಕಲಾಗದಷ್ಟು ಚಿನ್ನ ಹೊರತೆಗೆದಿದ್ದಾರೆ. ಜೊತೆಗೆ, 1200 ವರ್ಷ ಹಳೆಯ 32 ಅಸ್ತಿಪಂಜರಗಳು ಕೂಡಾ ಹೊರಬಂದಿವೆ!
 


ಮಧ್ಯ ಅಮೆರಿಕದ ಪನಾಮಾ ನಗರದಿಂದ ಸುಮಾರು 110 ಮೈಲುಗಳಷ್ಟು ದೂರದಲ್ಲಿರುವ ಎಲ್ ಕ್ಯಾನೊ ಆರ್ಕಿಯಾಲಾಜಿಕಲ್ ಪಾರ್ಕ್‌ನಲ್ಲಿ ಪುರಾತತ್ವ ಶಾಸ್ತ್ರಜ್ಞರು  1,200 ವರ್ಷಗಳಷ್ಟು ಹಳೆಯದಾದ ಸಮಾಧಿಯನ್ನು ಪತ್ತೆಹಚ್ಚಿದ್ದಾರೆ.

ಈ ಸಮಾಧಿಯನ್ನು ತೆರೆದಾಗ ಅವರಿಗೆ ಅಚ್ಚರಿಯ ಮೇಲೆ ಅಚ್ಚರಿ ಕಾದಿತ್ತು. ಏಕೆಂದರೆ ಇಲ್ಲಿದ್ದದು ಒಬ್ಬರ ಶವವಲ್ಲ, ಬದಲಿಗೆ 32 ಅಸ್ತಿಪಂಜರಗಳು ದೊರಕಿವೆ ಮತ್ತು ಕೊಪ್ಪರಿಗೆಗೂ ಮಿಕ್ಕಿ ನಿಧಿ ದೊರಕಿದೆ. 

Tap to resize

Latest Videos

ನಿಧಿಯಲ್ಲೇನಿತ್ತು?
ಚಿನ್ನದ ಶಾಲು, ಬೆಲ್ಟ್‌ಗಳು, ಆಭರಣಗಳು ಮತ್ತು ತಿಮಿಂಗಿಲ ಹಲ್ಲುಗಳಿಂದ ಅಲಂಕರಿಸಲ್ಪಟ್ಟ ಕಿವಿಯೋಲೆಗಳಂತಹ ಅಮೂಲ್ಯ ವಸ್ತುಗಳು, ಕಡಗಗಳು, ಮಾನವ ಆಕೃತಿಯ ಕಿವಿಯೋಲೆಗಳು, ಮೊಸಳೆ ಕಿವಿಯೋಲೆ, ಗಂಟೆಗಳು, ನಾಯಿಯ ಹಲ್ಲುಗಳಿಂದ ಮಾಡಿದ ಸ್ಕರ್ಟ್, ಮೂಳೆಯಿಂದ ಮಾಡಿದ ಕೊಳಲುಗಳು ಮತ್ತು ಸೆರಾಮಿಕ್ ವಸ್ತುಗಳು ಸೇರಿವೆ.

'ನಿಧಿಯು ಲೆಕ್ಕಿಸಲಾಗದ ಮೌಲ್ಯವನ್ನು ಹೊಂದಿದೆ' ಎಂದು ಪನಾಮಿಯನ್ ಸಂಸ್ಕೃತಿ ಸಚಿವಾಲಯದ ಲಿನೆಟ್ ಮಾಂಟೆನೆಗ್ರೊ ಹೇಳಿದ್ದಾರೆ.

ಆಲಿಯಾಯಿಂದ ಗೌರಿ ಖಾನ್‌ವರೆಗೆ.. ಈ ಕಾರಣಕ್ಕಾಗಿ ಕೆಲ ನಟಿಯರ ಜೊತೆ ಕೆಲಸ ಮಾಡದಂತೆ ಗಂಡನಿಗೆ ನಿಷೇಧ ಹೇರಿದ ಬಾಲಿವುಡ್ ಪತ್ನಿಯರು!
 

32 ಅಸ್ತಿಪಂಜರಗಳು
ಯಾವುದೋ ದೊಡ್ಡ ರಾಜ ಅಥವಾ ಉನ್ನತ ಶ್ರೇಣಿಯ ಮುಖ್ಯಸ್ಥನ ಶವದ ಸಮಾಧಿ ಇದಾಗಿದೆ. ಸಮಾಧಿಯನ್ನು 750 AD ಯಲ್ಲಿ ಉನ್ನತ ಸ್ಥಾನಮಾನದ 30-40 ವರ್ಷದ ಪುರುಷ ನಾಯಕನಿಗಾಗಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಆ ಸಮಯದ ಕೋಕ್ಲ್ ಸಂಸ್ಕೃತಿ ಪದ್ಧತಿಯಂತೆ ಸ್ತ್ರೀ ದೇಹದ ಮೇಲೆ ಕೆಳಮುಖವಾಗಿ ನಾಯಕನನ್ನು ಇರಿಸಲಾಗಿದೆ. ಇದಲ್ಲದೆ ಇನ್ನೂ 30 ಜನರನ್ನು ಮುಖ್ಯ ವ್ಯಕ್ತಿಗೆ ಮರಣಾನಂತರ ಸೇವೆ ಸಲ್ಲಿಸುವ ಸಲುವಾಗಿ ಬಲಿ ಕೊಟ್ಟು ಕಳುಹಿಸಲಾಗಿದೆ ಎಂದು ಅಂದಾಜಿಸಲಾಗಿದೆ. ಬಲಿಯಾದ ವ್ಯಕ್ತಿಗಳ ನಿಖರ ಸಂಖ್ಯೆ ಇನ್ನೂ ತನಿಖೆಯಲ್ಲಿದೆ.

ಎಲ್ ಕ್ಯಾನೊದಲ್ಲಿ ಉತ್ಖನನಗಳು 2008 ರಿಂದ ನಡೆಯುತ್ತಿವೆ. ಸಮಾಧಿಯನ್ನು ಮಹತ್ವದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಆವಿಷ್ಕಾರವೆಂದು ಪರಿಗಣಿಸಲಾಗಿದೆ. ಈ ಬೆಳವಣಿಗೆಯು ಅಮೆರಿಕಾದಲ್ಲಿ ಯುರೋಪಿಯನ್ ಆಗಮನದ ಮೊದಲು ಸ್ಥಳೀಯ ಬುಡಕಟ್ಟುಗಳ ಜೀವನಕ್ಕೆ ಒಂದು ಕಿಟಕಿಯನ್ನು ನೀಡುತ್ತದೆ. ಸಮಾಧಿ ಸಂಕೀರ್ಣವನ್ನು ನೆಕ್ರೋಪೊಲಿಸ್ ಅಥವಾ ಸತ್ತವರ ನಗರ ಎಂದು ಕರೆಯಲಾಗುತ್ತದೆ, ಇದನ್ನು ಸುಮಾರು 700 AD ಯಲ್ಲಿ ನಿರ್ಮಿಸಲಾಯಿತು.
 

click me!