ಏಷ್ಯಾ ಅಮೆ​ರಿ​ಕ​ನ್ನರ ಮೇಲಿನ ದೌರ್ಜನ್ಯಕ್ಕೆ ನಾದೆಳ್ಲ ಕಿಡಿ!

Published : Mar 14, 2021, 09:57 AM IST
ಏಷ್ಯಾ ಅಮೆ​ರಿ​ಕ​ನ್ನರ ಮೇಲಿನ ದೌರ್ಜನ್ಯಕ್ಕೆ ನಾದೆಳ್ಲ ಕಿಡಿ!

ಸಾರಾಂಶ

ಏಷ್ಯಾ ಅಮೆ​ರಿ​ಕ​ನ್ನರ ಮೇಲಿನ ದೌರ್ಜನ್ಯಕ್ಕೆ ನಾದೆಳ್ಲ ಕಿಡಿ| 2020ರಲ್ಲಿ 3 ಸಾವಿ​ರಕ್ಕೂ ಹೆಚ್ಚು ದೌರ್ಜನ್ಯ ಕೇಸ್‌​ಗ​ಳು| ಏಷ್ಯಾ ಸಮು​ದಾ​ಯದ ನ್ಯಾಯ​ಕ್ಕಾಗಿ ಹೋರಾ​ಡು​ವೆ: ನಾದೆ​ಳ್ಲ

ವಾಷಿಂಗ್ಟ​ನ್‌(ಮಾ.14): ಕೊರೋನಾ ಅಬ್ಬರದ ನಡು​ವೆಯೇ ಅಮೆ​ರಿ​ಕ​ದಲ್ಲಿ ಏಷ್ಯಾದ ಅಮೆ​ರಿ​ಕ​ನ್ನರ ಮೇಲೆ ನಡೆ​ಯು​ತ್ತಿ​ರುವ ದೌರ್ಜ​ನ್ಯ​ಗಳ ವಿರುದ್ಧ ಅಧ್ಯಕ್ಷ ಜೋ ಬೈಡನ್‌ ಕಿಡಿ​ಕಾ​ರಿದ ಬೆನ್ನ​ಲ್ಲೇ, ಏಷ್ಯಾದ ಅಮೆ​ರಿ​ಕ​ನ್ನರ ಮೇಲಿನ ಹಿಂಸಾ​ಚಾರ ವರ್ಣ​ಭೇದ ನೀತಿ ಸೇರಿ​ದಂತೆ ಇನ್ನಿ​ತರ ದೌರ್ಜ​ನ್ಯ​ಗ​ಳ ಬಗ್ಗೆ ಮೈಕ್ರೋ​ಸಾಫ್ಟ್‌ ಮುಖ್ಯ ಕಾರ್ಯ​ನಿ​ರ್ವ​ಹ​ಣಾ​ಧಿ​ಕಾರಿ ಸತ್ಯ ನಾದೆಳ್ಲ ಅವರು ಅಸ​ಮಾ​ಧಾನ ಮತ್ತು ಖಂಡನೆ ವ್ಯಕ್ತ​ಪ​ಡಿ​ಸಿ​ದ್ದಾರೆ. ಅಲ್ಲದೆ ಇಂಥ ಘಟ​ನೆ​ಗ​ಳಿಂದ ನನಗೆ ತೀವ್ರ ಆಘಾ​ತ​ವಾ​ಗಿದೆ ಎಂದು ನಾದೆಳ್ಲ ಹಾಗೂ ಅಮೆ​ರಿ​ಕದ ಹಲವು ಸಂಸ​ದ​ರು ಹೇಳಿ​ದ್ದಾರೆ.

2019ರಲ್ಲಿ ಏಷ್ಯಾದ ಅಮೆ​ರಿ​ಕ​ನ್ನರ ಮೇಲೆ ಕೇವಲ 216 ದೌರ್ಜನ್ಯ ಕೇಸ್‌​ಗಳು ಮಾತ್ರವೇ ದಾಖ​ಲಾ​ಗಿ​ದ್ದವು. ಆದರೆ 2020ರ ಮಾಚ್‌ರ್‍ನಿಂದ ಡಿಸೆಂಬ​ರ್‌​ವ​ರೆಗೆ ಈ ಸಂಖ್ಯೆಯು 3 ಸಾವಿ​ರ​ವನ್ನೂ ಮೀರಿ​ಸಿದೆ ಎಂದು ದೂರ​ಲಾ​ಗಿದೆ.

ಈ ಸಂಬಂಧ ಶನಿ​ವಾರ ಟ್ವೀಟ್‌ ಮಾಡಿದ ನಾದೆಳ್ಲ, ‘ನಮ್ಮ ಸಮಾ​ಜ​ದಲ್ಲಿ ಹಿಂಸಾ​ಚಾರ, ದ್ವೇಷ ಮತ್ತು ವರ್ಣ​ಭೇದ ನೀತಿ​ಗ​ಳಿಗೆ ಅವ​ಕಾ​ಶ​ವಿಲ್ಲ. ಆದಾಗ್ಯೂ, ಏಷ್ಯಾದ ಅಮೆ​ರಿ​ಕ​ನ್ನರು ಮತ್ತು ಜಾಗತಿಕ ಮಟ್ಟ​ದಲ್ಲಿ ಏಷ್ಯಾದ ಸಮು​ದಾ​ಯ​ಗಳ ಮೇಲೆ ದೌರ್ಜ​ನ್ಯ​ಗಳು ನಡೆ​ಯು​ತ್ತಿವೆ. ಈ ಅನ್ಯಾ​ಯದ ವಿರು​ದ್ಧದ ಹೋರಾ​ಟ​ದಲ್ಲಿ ಏಷ್ಯಾದ ಸಮು​ದಾ​ಯ​ದೊಂದಿಗೆ ಇರುತ್ತೇನೆ’ ಎಂದು ಪ್ರತಿ​ಪಾ​ದಿ​ಸಿ​ದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಾಟ್ಸಾಪ್‌ನಲ್ಲಿ ಇತಿಹಾಸದಲ್ಲೇ ಅತಿ ದೊಡ್ಡ ಬದಲಾವಣೆ: ಇನ್ಮುಂದೆ ಫೋನ್ ನಂಬರ್ ಇಲ್ಲದೆಯೂ ಚಾಟ್! ಸೆಟ್ಟಿಂಗ್ ಬದಲಾಯಿಸಿ!
Indus Water Treaty dispute: ಆಪರೇಷನ್ ಸಿಂದೂರ್ ಬಳಿಕವೂ ಬುದ್ಧಿ ಕಲಿಯದ ಪಾಕ್; ಭಾರತಕ್ಕೆ ಮತ್ತೆ ನೇರ ಬೆದರಿಕೆ! (Video))