
ಬೀಜಿಂಗ್[ಡಿ.11]: ಚೀನಾದ ಬಾಲಕನೊಬ್ಬ ದಿನಬೆಳಗಾಗುತ್ತಿದ್ದಂತೆಯೇ ಹೀರೋ ಆಗಿದ್ದಾನೆ. ತಾಯಿ ಮೇಲೆ ಆ ಪುಟ್ಟ ಕಂದನಿಗಿದ್ದ್‌ದ ಪ್ರೀತಿ ಹಾಗೂ ಆತನ ಅಸಾಧಾರಣ ಧೈರ್ಯ ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಷ್ಟಕ್ಕೂ ಆ ಬಾಲಕ ಮಾಡಿದ್ದೇನು? ಇಷ್ಟೊಂದು ಹೊಗಳಿಕೆಗೆ ಕಾರಣವೇನು? ಇಲ್ಲಿದೆ ವಿವರ
ನೈರುತ್ಯ ಚೀನಾದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಚೋಂಗ್ ಕಿಂಗ್ ನಲ್ಲಿ ತಾಯಿಯೊಬ್ಬಳು ತನ್ನ ಮಗನೊಂದಿಗೆ ರಸ್ತೆ ದಾಟುತ್ತಿದ್ದಳು. ಈ ವೇಳೆ ವೇಗವಾಗಿ ಬಂದ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಕಾರು ತಾಗಿದ ರಭಸಕ್ಕೆ ತಾಯಿ ಹಾಗೂ ಮಗ ಇಬ್ಬರೂ ರಸ್ತೆ ಮೇಲೆ ಬಿದ್ದಿದ್ದಾರೆ. ಸಾವರಿಸಿಕೊಂಡ ಬಾಲಕ ಎದ್ದು ತನ್ನ ತಾಯಿಗೆ ಏಳಲು ಸಹಾಯ ಮಾಡಿದ್ದಾನೆ. ಬಳಿಕ ನೇರವಾಗಿ ಕೊಂಚ ದೂರದಲ್ಲಿ ನಿಂತಿದ್ದ ಕಾರಿನತ್ತ ತೆರಳಿ ಕಾಲಿನಿಂದ ಒದೆಯಲಾರಂಭಿಸಿದ್ದಾನೆ. ಇದಾದ ಕೆಲವೇ ಕ್ಷಣಗಳಲ್ಲಿ ಜನರೆಲ್ಲಾ ಸೇರಿ ಕಾರಿನ ಚಾಲಕನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಂತಿಮವಾಗಿ ಬೇರೆ ದಾರಿ ಕಾಣದ ಚಾಲಕ ತಾಯಿ ಹಾಗೂ ಮಗನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ.
ಸದ್ಯ ಈ ಪುಟ್ಟ ಬಾಲಕನಿಗೆ ತನ್ನ ತಾಯಿ ಮೇಲಿರುವ ಪ್ರೀತಿ, ಕಾಳಜಿ ನೆಟ್ಟಿಗರ ಮನ ಗೆದ್ದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, 'ಈ ಬಾಲಕ ತಾಯಿಯ ಹೀರೋ' ಎಂಬ ಶೀರ್ಷಿಕೆಯಡಿಯಲ್ಲಿ ಶೇರ್ ಮಾಡಲಾಗುತ್ತಿದೆ.
ಇನ್ನು ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಯನ್ವಯ ಬಾಲಕ ಹಾಗೂ ಆತನ ತಾಯಿಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ. ರಸ್ತೆ ಬದಿ ಅಳವಡಿಸಲಾಗಿದ್ದ ಈ ದೃಶ್ಯಗಳು ದಾಖಲಾಗಿವೆ.
ಮೊಟ್ಟ ಮೊದಲ ಬಾರಿ ನಿರ್ಮಾಪಕರನ್ನು ಸಹಾಯ ಕೇಳಿದ ದರ್ಶನ್ ತಾಯಿ!
ಡಿಸೆಂಬರ್ 11ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ