
ಮಾಸ್ಕೋ: ಸುಮಾರು 50 ಜನರು ಪ್ರಯಾಣಿಸುತ್ತಿದ್ದ ಪ್ರಯಾಣಿಕ ವಿಮಾನ ದಿಢೀರ್ ಅಂತ ನಾಪತ್ತೆಯಾಗಿದೆ. ಆನ್ -24 ಪ್ರಯಾಣಿಕ ವಿಮಾನ (An-24 passenger plane) ಮಾರ್ಗ ಮಧ್ಯೆಯೇ ಸಂಪರ್ಕ ಕಡಿತಗೊಂಡಿದೆ. ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಲು ಅಧಿಕಾರಿಗಳು ಪ್ರಯತ್ನಿಸುದ್ದಾರೆ. ಸದ್ಯ ಆನ್ - 24 ವಿಮಾನದ ಶೋಧ ಕಾರ್ಯ ನಡೆಯುತ್ತಿದೆ ಸ್ಥಳೀಯ ಗರ್ವನರ್ ಮಾಹಿತಿ ನೀಡಿದ್ದಾರೆ.
ರಾಯಿಟರ್ಸ್ ವರದಿ ಪ್ರಕಾರ, ರಷ್ಯಾದ ಪೂರ್ವ ಭಾಗದಲ್ಲಿ ವಿಮಾನ ನಾಪತ್ತೆಯಾಗಿದೆ. ಈ ವಿಮಾನವು ಚೀನಾದ ಗಡಿಯಲ್ಲಿರುವ ಅಮುರ್ ಪ್ರದೇಶದ ಟಿಂಡಾ ನಗರ ಪ್ರವೇಶಿಸುವ ಸಂದರ್ಭದಲ್ಲಿ ರಾಡಾರ್ ಸಂಪರ್ಕದಿಂದ ಕಡಿತಗೊಂಡಿದೆ. ಸೈಬೀರಿಯಾ ಮೂಲದ ಅಂಗಾರ ವಿಮಾನಯಾನ ಸಂಸ್ಥೆ (Siberia-based airline Angara) ಈ ಪ್ಲೇನ್ ನಿರ್ವಹಣೆ ಮಾಡುತ್ತಿತ್ತು.
ಸದ್ಯದ ಪ್ರಾಥಮಿಕ ವರದಿ ಪ್ರಕಾರ, ವಿಮಾನದಲ್ಲಿ ಐವರು ಮಕ್ಕಳು ಸೇರಿದಂತೆ 43 ಪ್ರಯಾಣಿಕರು, ಆರು ಸಿಬ್ಬಂದಿ ವಿಮಾನದಲ್ಲಿದ್ದರು ಎಂದು ಪ್ರಾದೇಶಿಕ ಗವರ್ನರ್ ವಾಸಿಲಿ ಓರ್ಲೋವ್ ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ