ಚೀನಾ, ಪಾಕ್‌ಗೆ ಭಾರತ ಸಡ್ಡು| ರಷ್ಯಾ ಸಮರಾಭ್ಯಾಸಕ್ಕೆ ಗೈರು| 20 ದೇಶಗಳು ಭಾಗಿಯಾಗಲಿರುವ ಅಭ್ಯಾಸ
ನವದೆಹಲಿ(ಆ.30): ಮುಂದಿನ ತಿಂಗಳು ರಷ್ಯಾದಲ್ಲಿ ನಡೆಯಲಿರುವ 20 ರಾಷ್ಟ್ರಗಳ ಸಮರಾಭ್ಯಾಸದಿಂದ ಭಾರತ ಹಠಾತ್ ಹಿಂದೆ ಸರಿದಿದೆ. ಇದಕ್ಕೆ ಅಧಿಕೃತವಾಗಿ ಕೇಂದ್ರ ಸರ್ಕಾರ ಯಾವುದೇ ಕಾರಣ ನೀಡಿಲ್ಲವಾದರೂ, ಗಡಿಯಲ್ಲಿ ನಿರಂತರವಾಗಿ ಕ್ಯಾತೆ ತೆಗೆಯುತ್ತಿರುವ ಚೀನಾ ಹಾಗೂ ಭಯೋತ್ಪಾದಕರ ಆಡುಂಬೊಲವಾಗಿರುವ ಪಾಕಿಸ್ತಾನ ಸೇನೆಗಳು ಈ ಸಮರಾಭ್ಯಾಸದಲ್ಲಿ ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ ಗೈರು ಹಾಜರಾಗಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಉಗ್ರರ ಒಳನುಸುಳಿಸಲು ಗಡಿ ಬೇಲಿ ಕೆಳಗೆ ರಹಸ್ಯ ಸುರಂಗ!
ಶಾಂಘೈ ಸಹಕಾರ ಸಂಘಟನೆಯ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಮುಂದಿನ ವಾರ ರಷ್ಯಾಕ್ಕೆ ತೆರಳುತ್ತಿದ್ದಾರೆ. ಈ ಸಂದರ್ಭದಲ್ಲೇ ಮಿಲಿಟರಿ ಹಾಗೂ ವಿದೇಶಾಂಗ ಸಚಿವಾಲಯದ ಉನ್ನತ ಅಧಿಕಾರಿಗಳು ಚರ್ಚೆ ನಡೆಸಿ, ರಷ್ಯಾ ಸಮರಾಭ್ಯಾಸದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೊರೋನಾ ಜನಕ ವುಹಾನ್ ನಗರದಲ್ಲಿ ಶಾಲೆಗಳ ಪುನರ್ ಆರಂಭ!
ಸೆ.15ರಿಂದ 26ರವರೆಗೆ ದಕ್ಷಿಣ ರಷ್ಯಾದ ಆಸ್ಟ್ರಾಖಾನ್ ಪ್ರಾಂತ್ಯದಲ್ಲಿ ನಡೆಯಲಿರುವ ಸಮರಾಭ್ಯಾಸದಲ್ಲಿ ತನ್ನ ಭಾಗವಹಿಸುವಿಕೆಯನ್ನು ಭಾರತ ಕಳೆದ ವಾರವಷ್ಟೇ ರಷ್ಯಾಕ್ಕೆ ಖಚಿತಪಡಿಸಿತ್ತು. ಭಾರತೀಯ ಸೇನೆಯ 150 ಪಡೆಗಳು, ವಾಯುಪಡೆಯ 45 ಸಿಬ್ಬಂದಿ ಹಾಗೂ ನೌಕಾಪಡೆಯ ಸಿಬ್ಬಂದಿ ಇದರಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ಚೀನಾ ಗಡಿಯಲ್ಲಿ ಕಳೆದ ಮೂರೂವರೆ ತಿಂಗಳಿನಿಂದ ಸಂಘರ್ಷ ಮುಂದುವರಿದಿರುವ ಹಿನ್ನೆಲೆಯಲ್ಲಿ ಭಾರತ ಇದೀಗ ಸಮರಾಭ್ಯಾಸದಲ್ಲಿ ಭಾಗವಹಿಸದೇ ಇರುವ ನಿರ್ಧಾರಕ್ಕೆ ಬಂದಿದೆ.