
ವಾಶಿಂಗ್ಟನ್(ಏ.25): ಕೊರೋನಾ ವೈರಸ್ ಭೀಕರತೆಗೆ ಭಾರತ ನಲುಗಿ ಹೋಗಿದೆ. ಇದೇ ವೇಳೆ ಸೋಂಕಿತರ ಚಿಕಿತ್ಸೆ ಸವಾಲಾಗಿದೆ. ಅತ್ತ ಅಮೆರಿಕ ಲಸಿಕೆ ತಯಾರಿಕೆಗೆ ಬೇಕಾದ ಕಚ್ಚಾ ಸಾಮಾಗ್ರಿಗಳನ್ನು ತಡೆ ಹಿಡಿದಿದೆ. 40 ಮಿಲಿಯನ್ ಲಸಿಕೆ ಡೋಸೇಜ್ ಶೇಖರಿಸಿಟ್ಟಿರುವ ಅಮೆರಿಕ ತುರ್ತು ಅಗತ್ಯವಿರುವ ಭಾರತಕ್ಕೆ ಬಿಡುಗಡೆ ಮಾಡಲು ನಿರಾಕರಿಸಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿರ್ಧಾರಕ್ಕೆ ಇದೀಗ ತಮ್ಮದೇ ಡೆಮಾಕ್ರಟಿಕ್ ಪಕ್ಷದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಕ್ಸಿಜನ್ ಕೊರತೆಗೆ ಮೋದಿ ಪರಿಹಾರ; ಸರ್ಕಾರಿ ಆಸ್ಪತ್ರೆಗಳಲ್ಲಿ 551 ಉತ್ಪಾದಕ ಘಟಕ ಸ್ಥಾಪನೆ!
ಭಾರತ ಅತೀ ಕೆಟ್ಟ ಪರಿಸ್ಥಿತಿ ಎದುರಿಸುತ್ತಿದೆ. ಈ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಬೈಡನ್ ಸರ್ಕಾರ ಶೇಖರಿಸಿಟ್ಟಿರುವ ಅಸ್ಟ್ರಾಜೆನೆಕಾ ಲಸಿಕೆಯನ್ನು ವಿತರಿಸಬೇಕು ಎಂದು ಇಂಡಿಯನ್-ಅಮೆರಿಕನ್ ಕಾಂಗ್ರೆಸ್‌ಮೆನ್ ರಾಜಾ ಕೃಷ್ಣಮೂರ್ತಿ ಅಮೆರಕವನ್ನು ಒತ್ತಾಯಿಸಿದ್ದಾರೆ.
ಭಾರತೀಯರಿನೆಗೆ ನೆರವು ಅಗತ್ಯವಿದೆ. ನಮ್ಮಲ್ಲಿ ಶೇಖರಿಸಿಟ್ಟಿರುವ ಲಸಿಕೆ ಒಂದು ಜೀವವನ್ನು ಉಳಿಸುತ್ತದೆ ಎಂದರೆ ಅದೇ ದೊಡ್ಡ ವಿಚಾರ. ಹೀಗಾಗಿ ಅಮೆರಿಕ ತಕ್ಷಣವೇ ಅಸ್ಟ್ರಾಜೆನೆಕಾ ಲಸಿಕೆಯನ್ನು ಭಾರತಕ್ಕೆ ವಿತರಿಸಬೇಕು ಎಂದು ರಾಜಾ ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ.
ಕಳೆದ ಕೆಲ ತಿಂಗಳುಗಳಲ್ಲಿ ಜೋ ಬೈಡನ್ ಸರ್ಕಾರ ಸಂಪಾದಿಸಿ ಉತ್ತಮ ಬಾಂಧವ್ಯವನ್ನು ಈಗ ಕಳೆದುಕೊಳ್ಳುತ್ತಿದೆ ಎಂದು ಅಮೆರಿಕ ಬ್ರೂಕಿಂಗ್ ಸಂಸ್ಥೆಯ ತಾನ್ವಿ ಮದನ್ ಟ್ವೀಟ್ ಮಾಡಿದ್ದಾರೆ. ಅಮೆರಿಕದ ಹಲವರು ಜೋ ಬೈಡನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ ಭಾರತದಲ್ಲೂ ಬೈಡೆನ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ